– ಮದ್ಯದಂಗಡಿ ಮುಂದೆ ಕ್ಯೂ
ಗದಗ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶವೇ ಲಾಕ್‍ಡೌನ್ ಆಗಿದೆ. ಅಂದಿನಿಂದ ಕುಡಿಯಲು ಮದ್ಯ ಸಿಗದೇ ಅನೇಕರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ. ಇದೀಗ ನಗರದ ಕೆಲವು ಮದ್ಯ ಪ್ರಿಯರು ಏಪ್ರಿಲ್ ಫೂಲ್ ಆಗಿದ್ದಾರೆ.
ಇಂದು ಏಪ್ರಿಲ್ 1 ರಂದು ಎಂಎಸ್‍ಐಎಲ್ ಓಪನ್ ಆಗುತ್ತೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಟ್ಟಿದ್ದರು. ಅದು ನಿಜ ಎಂದು ತಿಳಿದ ಮದ್ಯ ಪ್ರಿಯರು ಬೆಳ್ಳಂಬೆಳಗ್ಗೆ ನಗರದ ಮುಳಗುಂದ ರಸ್ತೆಯ ಎಂಎಸ್‍ಐಎಲ್ ಮದ್ಯದಂಗಡಿ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದರು. ಈಗ ಓಪನ್ ಆಗಬಹುದು, ಆಗ ಓಪನ್ ಆಗಬಹುದು ಎಂದುಕೊಂಡು ಮದ್ಯಕ್ಕಾಗಿ ಕ್ಯೂ ನಿಂತುಕೊಂಡಿದ್ದರು.
Advertisement
Advertisement
ಸುಳ್ಳು ವದಂತಿಯನ್ನ ನಿಜ ಎಂದು ನಂಬಿದ್ದ ಮದ್ಯ ವ್ಯಸನಿಗಳು ಎರಡು ಸಾಲಿನಲ್ಲಿ ನೂರಾರು ಜನರು ಜಮಾಯಿಸಿದ್ದರು. ಈ ಕ್ಯೂನಲ್ಲಿ ಓರ್ವ ಮಹಿಳೆ ಸಹ ಸರದಿ ಸಾಲಿನಲ್ಲಿ ನಿಂತುಕೊಂಡಿದ್ದಳು.
Advertisement
ನೂರಾರು ಜನರು ಒಂದೆಕಡೆ ಜಮಾಯಿಸಿದ್ದರಿಂದ ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ದೌಡಾಯಿಸಿದ್ದಾರೆ. ಪೊಲೀಸರನ್ನ ಕಂಡು ಕುಡುಕರು ಅಲ್ಲಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಬಂದಂತಹ ಸುಳ್ಳು ಸುದ್ದಿಯಿಂದ ನಗರದ ಕೆಲವು ಮದ್ಯ ವ್ಯಸನಿಗಳು ಏಪ್ರಿಲ್ ಫೂಲ್ ಆಗಿದ್ದಾರೆ.