ಡೆಹ್ರಾಡೂನ್: ಕಾರು ಅಪಘಾತದಲ್ಲಿ (Car Accident) ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಟೀಂ ಇಂಡಿಯಾ (Team India) ಆಟಗಾರ ರಿಷಭ್ ಪಂತ್‍ರನ್ನು (Rishabh Pant) ನೋಡಲು ಯಾರು ಆಸ್ಪತ್ರೆಗೆ ತೆರಳಬೇಡಿ ಎಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (DDCA) ನಿರ್ದೇಶಕ ಶಾಮ್ ಶರ್ಮಾ ಮನವಿ ಮಾಡಿಕೊಂಡಿದ್ದಾರೆ.
Advertisement
ಗಂಭೀರ ಗಾಯಗೊಂಡಿದ್ದ ಪಂತ್ ಇದೀಗ ಡೆಹ್ರಾಡೂನ್‍ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಪಂತ್ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ನಡುವೆ ಪಂತ್‍ರನ್ನು ನೋಡಲು ಸಾಕಷ್ಟು ಗಣ್ಯರು ಆಸ್ಪತ್ರೆಯತ್ತ ಬರುತ್ತಿದ್ದಾರೆ. ಯಾರು ಕೂಡ ಪಂತ್‍ರನ್ನು ನೋಡಲು ಆಸ್ಪತ್ರೆಗೆ ತೆರಳಬೇಡಿ ಇದರಿಂದ ಅವರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಯಾರು ಭೇಟಿಗೆ ಪ್ರಯತ್ನಿಸಬೇಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾರನ್ನು ಭೇಟಿಯಾದ ಪಾಂಡ್ಯ ಬ್ರದರ್ಸ್
Advertisement
Advertisement
ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಅಪಘಾತ ನಡೆದಿದೆ. ಈ ಬಗ್ಗೆ ಪಂತ್ ಜೊತೆ ನಾನು ಮಾತನಾಡಿದ್ದೇನೆ. ಸದ್ಯ ಪಂತ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಬಿಸಿಸಿ ವೈದ್ಯರ ತಂಡ, ಜಯ್ ಶಾ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಚಿಕಿತ್ಸೆಯ ಕುರಿತಾಗಿ ಮಾಹಿತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ: ನಾವು ಕೂಗಾಡಿದ್ರೂ ಸಹಾಯಕ್ಕೆ ಯಾರೊಬ್ಬರೂ ಬರಲಿಲ್ಲ- ಪಂತ್ ರಕ್ಷಿಸಿದ ಬಸ್ ಡ್ರೈವರ್ ಬಿಚ್ಚಿಟ್ಟ ಸತ್ಯ
Advertisement
ಪಂತ್‍ಗೆ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ದೆಹಲಿಯ ಆಸ್ಪತ್ರೆಗೆ ಸ್ಥಳಾಂತರಿಸುವ ಸಾಧ್ಯತೆ ಕೂಡ ಇದೆ. ಇದಕ್ಕಾಗಿ ಏರ್‌ಲಿಫ್ಟ್ ಮಾಡುವ ಬಗ್ಗೆ ಈಗಾಗಲೇ ಮಾಹಿತಿ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ಉತ್ತರಾಖಂಡದಿಂದ ದೆಹಲಿಗೆ ಪಂತ್ ಹಿಂದಿರುಗುತ್ತಿದ್ದ ವೇಳೆ ಹಮ್ಮಲ್‍ಪುರ ಝಾರ್‌ನ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಕಾರಿನಲ್ಲಿದ್ದ ಪಂತ್ ಗಾಜನ್ನು ಹೊಡೆದುಕೊಂಡು ಹೊರ ಬಂದು ಗ್ರೇಟ್ ಎಸ್ಕೇಪ್ ಆಗಿದ್ದರು. ಕೂಡಲೇ ಪಂತ್‍ರನ್ನು ಸ್ಥಳೀಯರು ಆಸ್ಪತ್ರೆ ದಾಖಲಿಸಿದ್ದರು.