ಮುಂಬೈ: ಟೀಂ ಇಂಡಿಯಾದ (Team India) ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya), ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಫೋಟೋ ಹಂಚಿಕೊಂಡಿದ್ದಾರೆ.
Advertisement
ಅಮಿತ್ ಶಾ ಅವರ ನಿವಾಸಕ್ಕೆ ತೆರಳಿ ಹಾರ್ದಿಕ್ ಪಾಂಡ್ಯ ಭೇಟಿಯಾಗಿ ಮಾತುಕತೆ ನಡೆಸಿದರು. ಪಾಂಡ್ಯ ಜೊತೆ ಸಹೋದರ ಕೃನಾಲ್ ಪಾಂಡ್ಯ ಇದ್ದರು. ನಮ್ಮನ್ನು ಕರೆಸಿ ಮಾತುಕತೆ ನಡೆಸಿದ ಗೃಹಸಚಿವರಿಗೆ ಧನ್ಯವಾದ. ನಿಮ್ಮನ್ನು ಭೇಟಿಯಾಗಿದ್ದು ತುಂಬಾ ಗೌರವ, ಸಂತೋಷ ನೀಡಿದೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಅಮಿತ್ ಶಾ ಬೆಂಗಳೂರಿನಲ್ಲಿದ್ದು, ಕೆಲದಿನಗಳ ಹಿಂದೆ ತೆಗೆದಿರುವ ಫೋಟೋ ಆಗಿರುವ ಸಾಧ್ಯತೆ ಇದೆ. ಇದನ್ನೂ ಓದಿ: ರಾಕಿಭಾಯ್ ಜೊತೆ ಕಾಣಿಸಿಕೊಂಡ ಪಾಂಡ್ಯ ಬ್ರದರ್ಸ್ – KGF 3 ಟ್ರೆಂಡಿಂಗ್
Advertisement
Advertisement
ಅಮಿತ್ ಶಾ ಭೇಟಿಯ ಉದ್ದೇಶ ಪಾಂಡ್ಯ ತಿಳಿಸಿಲ್ಲ. ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆಯುವ ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಪಾಂಡ್ಯ ಮುನ್ನಡೆಸಲಿದ್ದಾರೆ. ಟಿ20 ತಂಡದ ನೂತನ ನಾಯಕನಾಗಿ ಈಗಾಗಲೇ ಪಾಂಡ್ಯ ಆಯ್ಕೆ ಆಗಿದ್ದು, ಏಕದಿನ ತಂಡದ ಉಪನಾಯಕನ ಸ್ಥಾನ ಕೂಡ ಪಾಂಡ್ಯ ಹೆಗಲೇರಿದೆ. ಇದನ್ನೂ ಓದಿ: ರಿಷಭ್ ಪಂತ್ ತಾಯಿಗೆ ಕರೆ ಮಾಡಿ ಅಭಯ ನೀಡಿದ ಮೋದಿ
Advertisement
Thank you for inviting us to spend invaluable time with you Honourable Home Minister Shri @AmitShah Ji. It was an honour and privilege to meet you. ???? pic.twitter.com/KbDwF1gY5k
— hardik pandya (@hardikpandya7) December 31, 2022
ಅಮಿತ್ ಶಾ ಕಳೆದೆರಡು ದಿನಗಳಿಂದ ಕರ್ನಾಟಕ ಚುನಾವಣೆ ತಯಾರಿ ಹಿನ್ನೆಲೆ ವಿವಿಧ ಸಭೆಗಳಲ್ಲಿ ಭಾಗವಹಿಸಿದ್ದು, ಇಂದು ರಾತ್ರಿ ದೆಹಲಿಗೆ ತೆರಳಲಿದ್ದಾರೆ. ಈ ನಡುವೆ ಪಾಂಡ್ಯ ಇಂದು ಅಮಿತ್ ಶಾ ಜೊತೆಗಿರುವ ಫೋಟೋ ಹಾಕಿರುವುದು ಕುತೂಹಲ ಮೂಡಿಸಿದ್ದು, ಈ ಹಿಂದೆ ತೆಗೆದಿರುವ ಫೋಟೋ ಪೋಸ್ಟ್ ಮಾಡಿರುವ ಸಾಧ್ಯತೆ ಕಂಡು ಬಂದಿದೆ.
ಕೆಲದಿನಗಳ ಹಿಂದೆ ಪಾಂಡ್ಯ ಬ್ರದರ್ಸ್ ಕೆಜಿಎಫ್‍ನ (KGF) ರಾಕಿಭಾಯ್ ಖ್ಯಾತಿಯ ಯಶ್ (Yash) ಅವರನ್ನು ಭೇಟಿಯಾಗಿ ಅವರೊಂದಿಗಿನ ಫೋಟೋ ಹಂಚಿಕೊಂಡಿದ್ದರು.
ತವರಿನಲ್ಲಿ ಭಾರತ ಪ್ರವಾಸಿ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಮತ್ತು 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಜ.3 ರಿಂದ ಟಿ20 ಸರಣಿ ಆರಂಭಗೊಳ್ಳಲಿದೆ. ಜ.10 ರಿಂದ ಏಕದಿನ ಸರಣಿ ಆರಂಭಗೊಳ್ಳಲಿದೆ.