ಚಾಮರಾಜನಗರ: ಭ್ರಷ್ಟಾಚಾರ ಮಾಡಿ ಎಸಿಬಿ ಅವರಿಗೆ ಸಿಕ್ಕಿ ಬಿದ್ರೆ ಅಧಿಕಾರಿಗಳು ಮುಖ ಮುಚ್ಚಿಕೊಂಡು ಹೋಗ್ತಾರೆ. ಆದ್ರೆ ಚಾಮರಾಜನಗರದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಭ್ರಷ್ಟಾಚಾರ ಮಾಡಿರುವುದನ್ನೇ ಸಾಧನೆ ಮಾಡಿರುವ ರೀತಿಯಲ್ಲಿ ಜನರಿಗೆ ಅಭಿನಂದನೆ ಹೇಳ್ತಾ ಇದಾರೆ.
ಶುಕ್ರವಾರ ಸಂಜೆ ಅಭಿವೃದ್ಧಿ ನಿಗಮದ ಅಧಿಕಾರಿ ಎನ್.ಕೆಂಪಯ್ಯ ಲಂಚ ಸ್ವೀಕರಿಸುವ ವೇಳೆ ಎಸಿಬಿಗೆ ಸಿಕ್ಕಿ ಬಿದ್ದಿದ್ದಾರೆ. ಈ ವೇಳೆ ಕೆಂಪಯ್ಯನನ್ನು ಎಸಿಬಿ ಅವರು ಕರೆದೊಯ್ಯುವಾಗ ಸಾರ್ವಜನಿಕನೋರ್ವ ಕಂಗ್ರಾಜ್ಯುಲೇಷನ್ ಸರ್, ಕೆಂಪಯ್ಯ ಸರ್ ನಮ್ಮಂತವರಿಗೆ ಅಯ್ಯೊ ಅನ್ನಿಸಿದರ ಪ್ರತಿಫಲ ಇದು ಅಂತಾ ಹೇಳಿದ್ದಾನೆ. ಈ ವೇಳೆ ಎಸಿಬಿಗೆ ಅಂದರ್ ಆದ ಕೆಂಪಯ್ಯ ನನ್ನನ್ನು ಹೊಗಳುತ್ತಿದ್ದಾರೆ ಎಂಬಂತೆ ಥ್ಯಾಂಕ್ಯೂ ಥ್ಯಾಂಕ್ಯೂ ಅಂತ ಹೇಳಿ ಹೋಗಿ ಜೀಪ್ ಹತ್ತಿದ್ದಾರೆ.
ಇದನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭಿಸಿದೆ.