ಮಂಗಳೂರು: ಜಗತ್ತಿನಲ್ಲಿ ಕೊರೊನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಈ ಮಧ್ಯೆ ಕಡಲ ನಗರಿ ಮಂಗಳೂರು ಬಂದರಿನಲ್ಲಿ ಕೊರೊನಾ ಪತ್ತೆಯಾಗಿದೆ. ಆದರೆ ಇಲ್ಲಿ ಮಾತ್ರ ಯಾರೂ ಆತಂಕ ಪಡದೇ ಕುತೂಹಲದಿಂದ ನೋಡುತ್ತಿದ್ದಾರೆ.
ಹೌದಾ ಅಂತ ಹುಬ್ಬೇರಿಸಬೇಡಿ. ಇದು ಮಹಾಮಾರಿ ವೈರಸ್ ಕೊರೊನಾ ಅಲ್ಲ ಬದಲಿಗೆ ಇದು ಕೊರೊನಾ ಮೀನು. ಕೊರೊನಾ ಬರುವುದೇ ಬೇಡ ಅಂತ ದೇವರಲ್ಲಿ ಮೊರೆ ಇಟ್ಟು ಮುಂಜಾಗ್ರತಾ ಕ್ರಮ ಕೈಗೊಂಡರೆ ಇಲ್ಲಿ ಮಾತ್ರ ಜನ ಕೊರೊನಾ ಬೇಕು ಅಂತಿದ್ದಾರೆ.
Advertisement
Advertisement
ಕೊರೊನಾ ಕಡಲಿನಲ್ಲಿ ಸಿಗುವ ಬಲು ಅಪರೂಪದ ಮೀನು ಆಗಿದೆ. ಕೊರೊನಾ ಮೀನಿಗೆ ಕೆ.ಜಿಗೆ 1,800 ರಿಂದ 2,000ವರೆಗೆ ಉತ್ತಮ ಬೆಲೆ ಇದೆ. ಕರಾವಳಿ ಜಿಲ್ಲೆಯಲ್ಲಿ ಇದರ ಬೇಡಿಕೆ ಕಡಿಮೆ. ಹೀಗಾಗಿ ಕೊರೊನಾ ಮೀನಿಗೆ ಉತ್ತಮ ಬೇಡಿಕೆ ಇರುವ ಗುಜರಾತ್ ಸೇರಿದಂತೆ ಬೇರೆ ರಾಜ್ಯಗಳಿಗೆ ಇದು ರಫ್ತು ಆಗುತ್ತಿದೆ.
Advertisement
ಮತ್ಸ್ಯ ಕ್ಷಾಮದಿಂದ ಕಂಗೆಟ್ಟಿದ್ದ ಮೀನುಗಾರರಿಗೆ ಕೊರೊನಾ ಮೀನು ಸಿಕ್ಕಿದ್ದು ಖುಷಿ ಕೊಟ್ಟಿದೆ. ಇದರ ನಡುವೆ ವೈರಸ್ ಕೊರೊನಾದಿಂದ ಬಂದರಿನಲ್ಲಿ ಕೊರೊನಾ ಮೀನಿನ ಸದ್ದು ಕೂಡ ಜೋರಾಗಿದೆ.