Connect with us

Chitradurga

ನೋ ಗ್ಯಾರೆಂಟಿ, ವಾರೆಂಟಿ 200 ರೂಪಾಯಿ ಮಾತ್ರ- ಮೊಬೈಲ್ ಖರೀದಿಸಲು ಮುಗಿಬಿದ್ದ ಗ್ರಾಹಕರು

Published

on

ಚಿತ್ರದುರ್ಗ : ಕಡಿಮೆ ದರದಲ್ಲಿ ಏನಾದರೂ ವಸ್ತುಗಳು ದೊರೆಯುತ್ತವೆ ಅಂದರೆ ಅಲ್ಲಿ ಜನ ನೀರು, ನೆರಳು, ಇಲ್ಲದೇ ಸರದಿ ಸಾಲಿನಲ್ಲಿ ನಿಂತುಕೊಂಡು ಆ ವಸ್ತುಗಳನ್ನು ಪಡೆಯಲು ಯತ್ನಿಸುತ್ತಾರೆ. ಹೌದು, ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದ ಸಂಗೀತ ಮೊಬೈಲ್ ಶೋರೂಮ್ ರೂಂಲ್ಲಿ ಇಂದು ಗ್ರಾಹಕರ ಆಕರ್ಷಣೆಗಾಗಿ ಮೊಬೈಲ್ ವ್ಯಾಪಾರಿಗಳು ವಿನೂತನ ಪ್ರಯೋಗ ಮಾಡಿದ್ದಾರೆ.

ಕೇವಲ 200 ರೂಗೆ ಒಂದು ಕೀಪ್ಯಾಡ್ ಮೊಬೈಲ್ ಎಂದು ಘೋಷಣೆ ಮಾಡಿದ್ದರು. ಇಂದು ಬೆಳಗ್ಗೆಯಿಂದಲೇ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಆಗಮಿಸಿದ ಜನರು ಸರತಿ ಸಾಲಿನಲ್ಲಿ ನಿಂತು ಮೊಬೈಲ್ ಖರೀದಿಸಲು ಮುಂದಾಗಿದ್ದರು. ಇನ್ನು ಈ ವಿಚಾರ ಅಷ್ಟು ಯಾರಿಗೂ ಸರಿಯಾಗಿ ತಿಳಿದಿರಲಿಲ್ಲ. ಆದರೂ ಇನ್ನೂರಕ್ಕೂ ಹೆಚ್ಚು ಗ್ರಾಹಕರು ಇಂದು ಬೆಳಗ್ಗೆ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ಕಡಿಮೆ ಬೆಲೆಯ ಮೊಬೈಲ್ ಖರೀದಿಸಲು ನಾ ಮುಂದು ನೀ ಮುಂದು ಅಂತ ನುಗ್ಗಿದ್ರು.

ಈ ಆಫರ್ ಕೇವಲ ಮೊದಲ 200 ಜನಕ್ಕೆ ಮಾತ್ರ ಸೀಮಿತವಾಗಿದ್ದು, ಮೊದಲು ಬಂದವರಿಗೆ ಇಂದು ಬೆಳಗ್ಗೆ ಕೂಪನ್ ನೀಡಲಾಗಿತ್ತು. ಬಳಿಕ ಮಧ್ಯಾಹ್ನ ಮೊಬೈಲ್ ಕೊಡಲಾಗುವುದು ಅಂತ ಅಂಗಡಿಯವರು ಹೇಳಿದ್ದಾರೆ, ಈ ಮೊಬೈಲ್ ಕೀಪ್ಯಾಡ್ ಮೊಬೈಲ್ ಆಗಿದ್ದು, ಇದಕ್ಕೆ ಯಾವುದೇ ಗ್ಯಾರೆಂಟಿ ಹಾಗೂ ವಾರೆಂಟಿ  ಇರುವುದಿಲ್ಲ ಅಂತ ಹೇಳಿದ್ರೂ ಕೂಡ ಜನ ಮರಳು, ಜಾತ್ರೆ ಮರಳೆಂಬಂತೆ 200 ಜನರು ಕಡಿಮೆ ಬೆಲೆಯ ಮೊಬೈಲ್ ಖರೀದಿಸಿ ಸಂಭ್ರಮಿಸಿದರು.

Click to comment

Leave a Reply

Your email address will not be published. Required fields are marked *