ಕನ್ನಡದ `ಗಿಲ್ಲಿ’ (Gilli Kannada Film) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಈಗ ಸೌತ್ ಮತ್ತು ಬಾಲಿವುಡ್ ಚಿತ್ರಗಳಲ್ಲಿ ಮಿಂಚ್ತಿದ್ದಾರೆ. ಇದೀಗ ತಮ್ಮ ಸತತ ಸಿನಿಮಾಗಳ ಸೋಲಿನ ಬಗ್ಗೆ ನಟಿ ಮೌನ ಮುರಿದಿದ್ದಾರೆ. ಇದನ್ನೂ ಓದಿ:`ಸಿಟಾಡೆಲ್’ ಫಸ್ಟ್ ಲುಕ್ ಔಟ್: ಆ್ಯಕ್ಷನ್ ಅವತಾರದಲ್ಲಿ ಪ್ರಿಯಾಂಕಾ ಚೋಪ್ರಾ
ರಾಕುಲ್ (Actress Rakul) ನಟನೆಯ ಅಟ್ಯಾಕ್, ರನ್‌ವೇ 34, ಕಟ್‌ಪುಟ್ಲಿ, ಡಾಕ್ಟರ್ ಜೀ, ಥ್ಯಾಂಕ್ ಗಾಡ್ ಸೇರಿದಂತೆ ಅನೇಕ ಸಿನಿಮಾಗಳು ರಿಲೀಸ್ ಆಗಿವೆ. ಆದರೆ ಯಾವುದೇ ಸಿನಿಮಾಗಳು ಹಿಟ್ ಆಗಿಲ್ಲ. ತಮ್ಮ ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಇತ್ತೀಚೆಗಷ್ಟೆ ಸಂದರ್ಶನದಲ್ಲಿ ಮಾತನಾಡಿದ ರಾಕುಲ್ ಪ್ರೀತ್ ಸಿಂಗ್ ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಇಂಡಸ್ಟ್ರಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಬಾಕ್ಸಾಫೀಸ್ ಸಂಖ್ಯೆ ಎಷ್ಟು ಪ್ರಮುಖವಾಗುತ್ತದೆ ಎಂದು ನಿರೂಪಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಕುಲ್, ಜನರ ಬಳಿ ಹಣವಿಲ್ಲ ಎಂದು ಹೇಳಿದ್ದಾರೆ. ಹಣವಿಲ್ಲದ ಕಾರಣ ಜನರು ತಿಂಗಳಿಗೆ ಒಂದು ಸಿನಿಮಾವನ್ನು ಮಾತ್ರ ಆಯ್ಕೆ ಮಾಡುತ್ತಾರೆ ಎಂದು ಹೇಳಿದ್ದಾರೆ.
ಪ್ರೇಕ್ಷಕರ ಪ್ರೀತಿಯೇ ಮುಖ್ಯ ಎಂದಿರುವ ರಾಕುಲ್ ಬಾಕ್ಸಾಫೀಸ್ ಸಂಖ್ಯೆ ಅಥವಾ ಜಡ್ಜಮೆಂಟ್ ಅಲ್ಲ ಎಂದು ಹೇಳಿದ್ದಾರೆ. ಜೊತೆಗೆ ಸೌತ್ ಸಿನಿಮಾಗಳ ಬಾಲಿವುಡ್‌ನಲ್ಲಿ ಸಕ್ಸಸ್ ಕಾಣುತ್ತಿರುವ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಾದೇಶಿಕ ಮತ್ತು ಬಾಲಿವುಡ್ ಸಿನಿಮಾಗಳು ಎಲ್ಲವೂ ಭಾರತದ ಸಿನಿಮಾಗಳಾಗಿದೆ. ಚಿತ್ರವು ಉತ್ತಮವಾಗಿದ್ದರೆ ಅದು ಭಾಷೆಯ ಹೊರತಾಗಿ ತನ್ನ ಪ್ರೇಕ್ಷಕರನ್ನು ಕಂಡುಕೊಳ್ಳುತ್ತದೆ ಎಂದು ರಾಕುಲ್ ಮಾತನಾಡಿದ್ದಾರೆ.
ಇನ್ನೂ ನಿರ್ಮಾಪಕ ಜಾಕಿ ಭಗ್ನಾನಿ (Producer Jackky Bhagnani) ಜೊತೆ ರಾಕುಲ್ ಅವರು ಸಾಕಷ್ಟು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಾರೆ. ಚಿತ್ರರಂಗದ ನಟ-ನಟಿಯರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಶುಭ ವೇಳೆಯಲ್ಲಿ ಜಾಕಿ-ರಾಕುಲ್ ಜೋಡಿ ಕೂಡ ಮದುವೆಯ ಬಗ್ಗೆ ಸಿಹಿಸುದ್ದಿ ಕೊಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.