ಚಾಮರಾಜನಗರ: ನಗರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಸಿ.ಟಿ ಸ್ಕ್ಯಾನ್ ಸೌಲಭ್ಯವಿದ್ದರೂ ರೋಗಿಗಳಿಗೆ ಮಾತ್ರ ಸೌಲಭ್ಯ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಸಿಮ್ಸ್ನಲ್ಲಿ ಹಣ ಕೊಟ್ಟು ಸಿಟಿ ಸ್ಕ್ಯಾನ್ ಮಾಡಿಸಬೇಕಾದ ಪರಿಸ್ಥಿತಿ ರೋಗಿಗಳಿಗಿದೆ ಎಂದು ದೂರಲಾಗಿದೆ. ಸ್ಕ್ಯಾನಿಂಗ್ ಮಾಡಿಸಲು ಸಿಮ್ಸ್ ಆಸ್ಪತ್ರೆಗೆ ರೆಫರ್ ಮಾಡಲು ವೈದ್ಯರಿಗೆ ಮೌಖಿಕ ಸೂಚನೆ ಕೊಟ್ಟಿದ್ದಾರೆಂಬ ಆರೋಪ ಡೀನ್ ವಿರುದ್ಧ ಕೇಳಿಬಂದಿದೆ.
ಸರ್ಕಾರ ಕಳೆದ 7 ವರ್ಷದ ಹಿಂದೆಯೇ ರೋಗಿಗಳಿಗೆ ಉಚಿತ ಸಿ.ಟಿ ಸ್ಕ್ಯಾನಿಂಗ್ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಪಿಪಿಪಿ ಯೋಜನೆಯಡಿ ಜಿಲ್ಲಾ ಆಸ್ಪತ್ರೆಯಲ್ಲಿ ಸಿ.ಟಿ ಸ್ಕ್ಯಾನ್ ಘಟಕ ಸ್ಥಾಪಿಸಿದೆ. ಕಳೆದ ಏಳು ವರ್ಷಗಳಿಂದಲೂ ಕೂಡ ಈ ಡಯಾಗ್ನೊಸ್ಟಿಕ್ ಸೆಂಟರ್ ಕಾರ್ಯನಿರ್ವಹಿಸುತ್ತ ಬಂದಿದೆ. ಆದರೆ, ಇದೀಗಾ ಸಿಮ್ಸ್ ಆಸ್ಪತ್ರೆಯಲ್ಲಿ ನೂತನವಾಗಿ ಸ್ಕ್ಯಾನಿಂಗ್ ಘಟಕ ಸ್ಥಾಪನೆ ಮಾಡಲಾಗಿದೆ. ಈ ಹಿನ್ನಲೆ ಚಾಮರಾಜನಗರ ಸಿಮ್ಸ್ ಆಸ್ಪತ್ರೆ ಡೀನ್ ಡಾ ಮಂಜುನಾಥ್ ಕ್ರಸ್ನಾ ಡಯಾಗ್ನೊಸ್ಟಿಕ್ ಸೆಂಟರ್‌ಗೆ ಸ್ಕ್ಯಾನ್ ಮಾಡಿಸಲು ರೆಫರ್ ಮಾಡದಂತೆ ವೈದ್ಯರಿಗೆ ಸೂಚಿಸಿದ್ದಾರೆಂಬ ಆರೋಪವಿದೆ. ಇದರಿಂದ ಸ್ಕ್ಯಾನಿಂಗ್ ಮಾಡಿಸುವ ರೋಗಿಗಳ ಸಂಖ್ಯೆಯಲ್ಲಿಯೂ ಕೂಡ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ, ಕ್ರಸ್ನಾ ಡಯಾಗ್ನೊಸ್ಟಿಕ್‌ನಲ್ಲಿ ಉಚಿತವಾಗಿ ಸ್ಕ್ಯಾನಿಂಗ್ ನಡೆಸುತ್ತಾರೆ. ಉಚಿತ ಸೌಲಭ್ಯ ಇರುವಾಗ ನಾವು ಸ್ಕ್ಯಾನಿಂಗ್ ಮಾಡಿಸಲು ಹಣ ಯಾಕೆ ಕೊಡಬೇಕು ಎಂದು ರೋಗಿಗಳು ಪ್ರಶ್ನಿಸಿದ್ದಾರೆ.
Advertisement
Advertisement
ಜಿಲ್ಲಾಸ್ಪತ್ರೆಯಲ್ಲಿರುವ ಕ್ರಸ್ನಾ ಡಯಾಗ್ನೊಸ್ಟಿಕ್‌ನಲ್ಲಿ ಸ್ಕ್ಯಾನಿಂಗ್ ಮಾಡಿಸಲು ಯಾಕೆ ರೆಫರ್ ಮಾಡ್ತಿಲ್ಲವೆಂದು ಡೀನ್ ಅವರನ್ನೂ ಪ್ರಶ್ನಿಸಿದ್ದಾರೆ. ರೋಗಿಗಳು ಎರಡು ಕಡೆಯಲ್ಲಿ ಎಲ್ಲಿ ಬೇಕಾದರೂ ಕೂಡ ಸ್ಕ್ಯಾನಿಂಗ್ ಮಾಡಿಸಿಕೊಳ್ಳಬಹುದು. ಸಿಮ್ಸ್ ಆಸ್ಪತ್ರೆಯಲ್ಲಿರುವ ಸ್ಕ್ಯಾನಿಂಗ್ ಮೆಷಿನ್ ತುಂಬಾ ಅಡ್ವಾನ್ಸ್ ಆಗಿದೆ. ಆದರಿಂದ ಅಲ್ಲಿಗೆ ರೆಫರ್ ಮಾಡಿರಬಹುದು ಆಸ್ಪತ್ರೆಯವರು ಹೇಳುತ್ತಿದ್ದಾರೆ.
Advertisement
Advertisement
ಪಿಪಿಪಿ ಯೋಜನೆಯಡಿ ಕಳೆದ 7 ವರ್ಷದಿಂದ ಕ್ರಸ್ನಾ ಡಯಾಗ್ನೊಸ್ಟಿಕ್ ರಾಜ್ಯದ 14 ಕಡೆಗಳಲ್ಲಿ ಕಾರ್ಯನಿರ್ವಹಿಸ್ತಿದೆ. ಉಚಿತವಾಗಿ ಸ್ಕ್ಯಾನಿಂಗ್ ಮಾಡಿಸಲು ರೋಗಿಗಳಿಗೆ ನೆರವಾಗಿದೆ. ರೋಗಿಗಳು ತಮಗಿಷ್ಟ ಬಂದ ಕಡೆ ಸ್ಕ್ಯಾನಿಂಗ್ ಮಾಡಿಸಲು ಮುಕ್ತ ಅವಕಾಶ ಕಲ್ಪಿಸುವಂತೆ ಡೀನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.