ಬೆಂಗಳೂರು: ಕಡ್ಡಾಯ ಅನ್ನೋದಕ್ಕಿಂತ ಜನ ಸ್ವ-ಇಚ್ಚೆಯಿಂದ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತಿನ ಸಭೆಯಲ್ಲಿ ಕೆಲ ಜಿಲ್ಲೆಯಲ್ಲಿ ಲಸಿಕೆ ಮಂದಗತಿಯಲ್ಲಿ ನಡೆಯುತ್ತಿದೆ. ಲಸಿಕೆ ಅಭಿಯಾನ ಚುರುಕು ಮಾಡಲು ಡಿಸಿಗಳಿಗೆ ಸೂಚನೆ ಕೊಡ್ತೀವಿ. ಲಸಿಕೆ ಅಭಿಯಾನ ಪೂರ್ಣ ಆಗಬೇಕು ಅನ್ನೋದು ನಮ್ಮ ಗುರಿ. ಇದಕ್ಕಾಗಿ ಇವತ್ತಿನ ಸಭೆಯಲ್ಲಿ ಡಿಸಿಗಳಿಗೆ ಸೂಚನೆ ಕೊಡ್ತೀವಿ. ಸಾವಿನ ಪ್ರಮಾಣ ನಮ್ಮಲ್ಲಿ ಕಡಿಮೆ ಇದೆ. ಆದರೂ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
Advertisement
Advertisement
ಇದೇ ವೇಳೆ ಲಸಿಕೆ ಪಡೆಯಲು ಒತ್ತಡ ಹೇರಬಾರದು ಅನ್ನೋ ನಿಯಮ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಅಸ್ಸಾಂನಲ್ಲಿ ನಿಯಮ ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಜನರು ಓಡಾಡೋದಕ್ಕೆ ಇದನ್ನ ಮಾಡಿದ್ದಾರೆ. ಲಸಿಕೆ ಪಡೆಯದೇ ಇರೋರೀಂದ್ರ ಸಮಸ್ಯೆ ಆಗಬಾರದು ಅಂತ ಈ ಕ್ರಮ ಇದೆ. ಜನರ ಒಳ್ಳೆಯದಕ್ಕಾಗಿ ಇದನ್ನ ಮಾಡೋದು. ಕಡ್ಡಾಯ ಅನ್ನೋದಕ್ಕಿಂತ ಜನ ಸ್ವ-ಇಚ್ಚೆಯಿಂದ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು. ಇದನ್ನೂ ಓದಿ: ಟೆಲಿಪ್ರೊಂಪ್ಟರ್ ಕೂಡ ಇಷ್ಟೊಂದು ಸುಳ್ಳುಗಳನ್ನು ಹೇಳಲು ಸಾಧ್ಯವಿಲ್ಲ – ಮೋದಿ ವಿರುದ್ಧ ರಾಹುಲ್ ವ್ಯಂಗ್ಯ
Advertisement
Advertisement
ರಾಜ್ಯದಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ರಾಜ್ಯದಲ್ಲಿ ಶೇ.0.04 ಸಾವಿನ ಪ್ರಮಾಣ ಅತ್ಯಂತ ಕಡಿಮೆ ಇದೆ. ಆದರೂ ಸರ್ಕಾರ ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳುತ್ತೆ. ಪ್ರತಿ ಜೀವ ಮುಖ್ಯ ಹೀಗಾಗಿ ಚಿಕಿತ್ಸೆ ಮತ್ತು ಸಾವಿನ ಬಗ್ಗೆ ಡೆತ್ ಆಡಿಟ್ ಮಾಡ್ತೀವಿ. ರಾಜ್ಯದಲ್ಲಿ ಡೆತ್ ಆಡಿಟ್ ಮಾಡ್ತೀವಿ ಎಂದು ಹೆಳಿದರು.
ಲಸಿಕೆ ಕಡ್ಡಾಯ ಅಲ್ಲ ಅನ್ನೊ ಸುಪ್ರೀಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಸ್ಸಾಂ ಸಿಎಂ ನಿನ್ನೆ ಹೇಳಿದ್ದಾರೆ. ಲಸಿಕೆ ಪಡೆಯದವರು ಸರ್ಕಾರಿ ಕಚೇರಿ ಮತ್ತು ಸಾರ್ವಜನಿಕ ಸ್ಥಳಗಳಿಗೆ ಹೋಗಲು ಸಾಧ್ಯವಿಲ್ಲ. ಜನರ ಒಳಿತಿಗಾಗಿ ಇದನ್ನ ಮಾಡಲಾಗಿದೆ. ಇದು ಸಾಂಕ್ರಾಮಿಕ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಾರದು ಅನ್ನೋದು ಇದರ ಉದ್ದೇಶ ಎಂದು ತಿಳಿಸಿದರು.