ಹುಬ್ಬಳ್ಳಿ: ನೋಟ್ ಬ್ಯಾನ್‍ನಿಂದ ಕಂಗೆಟ್ಟಿದ್ದ ಜನಕ್ಕೆ ಮತ್ತೊಂದು ಶಾಕ್ ಎದುರಾಗಿದೆ. 10 ರೂಪಾಯಿ ಕಾಯಿನ್ ಬ್ಯಾನ್ ಆಗಿದೆ ಎಂಬ ಸುಳ್ಳು ಸುದ್ದಿ ಹರಿದಾಡ್ತಿದ್ದು, ಇದ್ರಿಂದ ಉತ್ತರ ಕರ್ನಾಟಕದ ಜನ 10 ರೂ, ಕಾಯಿನ್ ಸ್ವೀಕರಿಸೋಕೆ ಹಿಂಜರಿಯುತ್ತಿದ್ದಾರೆ.
Advertisement
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ 10 ರೂಪಾಯಿ ನಾಣ್ಯವನ್ನ ಯಾರೂ ಸ್ವೀಕರಿಸ್ತಿಲ್ಲ. ಕೇಂದ್ರವಾಗಲೀ ಅಥವಾ ಆರ್‍ಬಿಐ ಆಗಲೀ ಕಾಯಿನ್ ಬ್ಯಾನ್ ಬಗ್ಗೆ ಆದೇಶ ಹೊರಡಿಸಿಲ್ಲ. ಆದಾಗ್ಯೂ, ಜನ 10 ರೂಪಾಯಿ ನಾಣ್ಯ ಸ್ವೀಕರಿಸಲು ಹಿಂದೇಟು ಹಾಕ್ತಿದ್ದಾರೆ.
Advertisement
Advertisement
ಹುಬ್ಬಳ್ಳಿ ನಗರದ ಕೆಲ ಬ್ಯಾಂಕ್‍ಗಳಲ್ಲಿಯೂ 10 ರೂಪಾಯಿ ಕಾಯಿನ್‍ಗಳನ್ನ ತೆಗೆದುಕೊಳ್ಳುತಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ. ಚಿಲ್ಲರೆ ವ್ಯಾಪಾರಿಗಳು, ಬಸ್ ಕಂಡಕ್ಟರ್‍ಗಳು ಈ ಸುಳ್ಳು ಸುದ್ದಿಯಿಂದ ಪರದಾಡ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಕೋಲಾರ ಮತ್ತು ಆನೇಕಲ್‍ನಲ್ಲೂ ಇಂಥದ್ದೇ ಸುದ್ದಿ ಹರಿದಾಡಿತ್ತು.