ಬೆಂಗಳೂರು: ಬಿಜೆಪಿಯ (BJP) ಸಂವಿಧಾನದ ವಿರೋಧಿ ನೀತಿಗಳಿಗೆ ಜನ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಬೇರೆ ಪಕ್ಷಗಳನ್ನು ಆಶ್ರಯಿಸಿಯೇ ಸರ್ಕಾರ ಮಾಡಬೇಕು. ಬಿಜೆಪಿ ಹಿಡನ್ ಅಜೆಂಡಾ ಜಾರಿ ಮಾಡುವುದು ಸುಲಭವಲ್ಲ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ (HC Mahadevappa) ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ಮತದಾರರು ಶಾಂತಿಯುತ ಮತದಾನ ಮಾಡಿದ್ದಾರೆ. 70% ಮತದಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ 100% ಆಗಲಿ. ಮತದಾನ ಮಾಡಿದವರಿಗೆ ಧನ್ಯವಾದಗಳು. 2019ರಲ್ಲಿ ಒಂದು ಸ್ಥಾನ ಗೆದ್ದಿದ್ದು, ಈ ಬಾರಿ 9 ಸ್ಥಾನ ಗೆದ್ದಿದ್ದೇವೆ. ಕನಿಷ್ಠ 12-14 ಸ್ಥಾನ ಗೆಲ್ಲಬೇಕಿತ್ತು. ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಮತಗಳ ಧ್ರುವೀಕರಣ ಆಗಿದೆ. ಇದರಿಂದಾಗಿ 5-6 ಕ್ಷೇತ್ರಗಳಲ್ಲಿ ಹಿನ್ನಡೆ ಆಗಿದೆ ಎಂದರು. ಇದನ್ನೂ ಓದಿ: ಸಚಿವರ ಮೌಲ್ಯಮಾಪನದ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ: ಎಂ.ಬಿ ಪಾಟೀಲ್
ಸಚಿವ ಕ್ಷೇತ್ರದಲ್ಲಿ ಹಿನ್ನಡೆ ಆಗಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. ಬಿಜೆಪಿ- ಜೆಡಿಎಸ್ ರಾಜಕೀಯ ಒಡಂಬಡಿಕೆ ಮತಗಳು ಧ್ರುವೀಕರಣ ಆಯಿತು. ಮೇಲ್ಜಾತಿಯವರು ಒಂದಾದರು. ಅಹಿಂದ ವರ್ಗದವರು ಒಂದಾದರು. ಹಾಗಾಗಿ ನಾವು 9 ಸ್ಥಾನ ಗೆದ್ದಿದ್ದೇವೆ. ಒಳ್ಳೆಯ ಕಾರ್ಯ ಆಗಿದೆ. ಆದರೆ ನಿರೀಕ್ಷೆ ಹುಸಿಯಾಗಿದೆ. ಏನು ಕಾರಣ, ವೋಟ್ ಪ್ಯಾಟರ್ನ್ ಏನು ಎಂದು ಚರ್ಚೆ ಆಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಲೋಕಸಭೆಯ ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿ ನೇಮಕಕ್ಕೆ CWC ನಿರ್ಣಯ ಅಂಗೀಕಾರ
ಸಮುದಾಯವಾರು ಡಿಸಿಎಂ ಸೃಷ್ಟಿ ಆಗಬೇಕು ಎಂಬ ಪ್ರಶ್ನೆಗೆ ಉತ್ತರಿಸಿ, ಅದು ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಬೇಕು. ಹುದ್ದೆ ಸೃಷ್ಟಿ ಆಗಬೇಕೋ ಬೇಡವೋ ಎಂದು ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಲಿದೆ. ಸದ್ಯಕ್ಕೆ ಯಾವುದೇ ಚರ್ಚೆ ಇಲ್ಲ. ಚುನಾವಣಾ ಫಲಿತಾಂಶದ ಬಗ್ಗೆ ಚರ್ಚೆಯಿಲ್ಲ. ಪಕ್ಷವನ್ನು ಹೇಗೆ ಸಂಘಟಿಸಬೇಕು ಎಂದು ಚರ್ಚೆ ಆಗಲಿದೆ. ಸದ್ಯಕ್ಕೆ ನನ್ನ ಮುಂದೆ ಪ್ರಸ್ತಾಪ ಇಲ್ಲ. ಅದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು. ಇದನ್ನೂ ಓದಿ: ಡಿಕೆಸು ಸೋಲಿಗೆ ಸಿದ್ದರಾಮಯ್ಯ & ಟೀಂ ಕಾರಣ: ಹೊಸ ಬಾಂಬ್ ಸಿಡಿಸಿದ ಸುರೇಶ್ ಗೌಡ
ಮೈಸೂರಿನಲ್ಲಿ ನಮಗೆ ಹಿನ್ನಡೆ ಆಗಿಲ್ಲ. ನನ್ನ ಕ್ಷೇತ್ರ, ಸಿಎಂ ಕ್ಷೇತ್ರ ಅಲ್ಲಿ ಬರಲಿದೆ. ಅಹಿಂದ ಮತಗಳು ಸಾಲಿಡ್ ಆಗಿ ಮತ ಹಾಕಿದ್ದಾರೆ. ಅವರು (ಒಕ್ಕಲಿಗರು) ಒಂದಾಗಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಅಂತ್ಯಕ್ರಿಯೆ ವೇಳೆ ಶವದ ಮೇಲೆ ಕುಳಿತು ಅಚ್ಚರಿ ಮೂಡಿಸಿದ ಮಂಗ!
ವಾಲ್ಮೀಕಿ ನಿಗಮದ ಹಗರಣದ ವಿಚಾರದಲ್ಲಿ ಎಸ್‌ಐಟಿ ತನಿಖೆ ನಡೆಯುತ್ತಿದೆ. ಸಿಬಿಐ ಕೂಡ ಇಂಟರ್ ಫಿಯರ್ ಆಗಿದೆ. ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಕ್ರಮ ಆಗಲಿದೆ. ತನಿಖಾ ಹಂತದಲ್ಲಿದ್ದಾಗ ನಾನು ಹೆಚ್ಚು ಮಾತಾಡಲ್ಲ ಎಂದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಚೀಟಿ ದುಡ್ಡಿಗಾಗಿ ವ್ಯಕ್ತಿಯನ್ನು ತುಂಡಾಗಿ ಕತ್ತರಿಸಿ ಹತ್ಯೆ – 3 ಬ್ಯಾಗ್‌ಗಳಲ್ಲಿ ದೇಹ ವಿಲೇವಾರಿ