ಬೀಜಿಂಗ್: ಬುಲೆಟ್ ರೈಲು, ಕೈಗಾರಿಕೆಗಳಿಗೆ, ಮೂಲಭೂತ ಸೌಕರ್ಯಗಳಿಗೆ ಚೀನಾ ಫೇಮಸ್ ಆಗಿರುವುದು ಎಲ್ಲರಿಗೂ ಗೊತ್ತೆ ಇರುವ ವಿಚಾರ. ಆದರೆ ಚೀನಾದ ಶಾಂಘೈ ನಗರದಲ್ಲಿ ಶೌಚಾಲಯಕ್ಕೆ ತೆರಳುವವರು ಛತ್ರಿಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ.
ಹೌದು, ಶಾಂಘೈ ನಗರದಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ತೆರಳ ಬೇಕೆಂದರೆ ನೀವು ಕಡ್ಡಾಯವಾಗಿ ಛತ್ರಿಯನ್ನು ಹಿಡಿದುಕೊಂಡೇ ಹೋಗಬೇಕು. ಒಂದೇ ವೇಳೆ ಛತ್ರಿ ಇಲ್ಲದೇ ಹೋದರೆ ನಿಮ್ಮ ಮಾನ ಸಾರ್ವಜನಿಕವಾಗಿ ಹರಾಜು ಆಗುವುದು ಖಂಡಿತ.
Advertisement
Advertisement
ಈ ನಗರದಲ್ಲಿ ಶೌಚಾಲಯ ಕಟ್ಟಿದ್ದರೂ ಇವುಗಳಿಗೆ ಮೇಲ್ಚಾವಣಿ ಇಲ್ಲ. ಹೀಗಾಗಿ ಜನರು ಕಡ್ಡಾಯವಾಗಿ ಛತ್ರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಶೌಚಾಲಯಗಳು ಆಕರ್ಷಕ ಬಣ್ಣಗಳಿಂದ ಕೂಡಿದ್ದು, ಇಲ್ಲಿಗೆ ಭೇಟಿ ನೀಡುವ ಪ್ರವಾಸಿರು ಈ ಶೌಚಾಲಯಗಳನ್ನೇ ಬಳಸಬೇಕಾಗಿದೆ.
Advertisement
ಇನ್ನುಳಿದಂತೆ ನಗರ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದ್ದು, ಪ್ರತಿಯೊಂದು ವಿಶೇಷ ವಿನ್ಯಾಸವನ್ನು ಹೊಂದಿವೆ. ಡಿಜಿಟಲ್ ಕ್ಯಾಮಾರ ಮಾದರಿಯ ವಿನ್ಯಾಸದ ಶೌಚಾಲಯನ್ನು ಇಲ್ಲಿ ಕಾಣಬಹುದಾಗಿದೆ. ಅಲ್ಲದೇ ಸ್ಪೈನ್‍ನ ಬಾರ್ಸಿಲೋನಾ ನಗರದಲ್ಲಿರುವ ವಿಶ್ವ ಪ್ರಸಿದ್ಧ ಪಾರ್ಕ್ ಗುವೆಲ್ ನಂತೆ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ನಗರದ ಹಲವೆಡೆ ನಿರ್ಮಾವಾಗಿರುವ ವಿಶೇಷ ವಿನ್ಯಾಸಗಳ ಸಾರ್ವಜನಿಕ ಶೌಚಾಲಗಳಿಗೆ ಶಾಂಘೈ ನಗರ ಹೆಚ್ಚು ಪ್ರಸಿದ್ಧಿವಾಗಿದೆ.