ನವದೆಹಲಿ: ರಾಜಿಂದರ್ ನಗರ ವಿಧಾನಸಭಾ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ(ಎಎಪಿ), ಬಿಜೆಪಿಯನ್ನು ಸೋಲಿಸಿ ಮುಂದೆ ಬಂದಿದೆ. ಈ ಹಿನ್ನೆಲೆ ಗೆಲುವಿನ ಖುಷಿ ಹಂಚಿಕೊಂಡ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬಿಜೆಪಿಯ ಕೊಳಕು ರಾಜಕೀಯವನ್ನು ಜನರು ಸೋಲಿಸಿದ್ದಾರೆ ಎಂದು ಕಿಡಿಕಾರಿದರು.
Advertisement
ಎಲ್ಲ 16 ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ. ಎಎಪಿ ಅಭ್ಯರ್ಥಿ ದುರ್ಗೇಶ್ ಪಾಠಕ್ ಅವರು ತಮ್ಮ ಪ್ರತಿಸ್ಪರ್ಧಿ ರಾಜೇಶ್ ಭಾಟಿಯಾ(ಬಿಜೆಪಿ) ಅವರನ್ನು 11,000 ಮತಗಳ ಅಂತರದಿಂದ ಸೋಲಿಸಿದ್ದಾರೆ ಎಂದು ದೆಹಲಿ ಮುಖ್ಯ ಚುನಾವಣಾ ಅಧಿಕಾರಿ ರಣಬೀರ್ ಸಿಂಗ್ ಹೇಳಿದ್ದಾರೆ.
Advertisement
राजेंद्र नगर के लोगों का दिल से आभार
दिल्ली के लोगों के इस अथाह स्नेह और प्रेम का मैं आभारी हूँ। यही हमें और मेहनत एवं सेवा करने की प्रेरणा देता है
लोगों ने उनकी गंदी राजनीति को हराया और हमारे अच्छे काम को सराहा
शुक्रिया राजेंद्र नगर, शुक्रिया दिल्ली #AAPsweepsRajinderNagar
— Arvind Kejriwal (@ArvindKejriwal) June 26, 2022
Advertisement
ವಿಷಯ ತಿಳಿದ ತಕ್ಷಣ ಸಂತೋಷಗೊಂಡ ಕೇಜ್ರಿವಾಲ್ ಟ್ವೀಟ್ ಮಾಡಿದ್ದು, ರಾಜೇಂದ್ರ ನಗರದ ಜನರಿಗೆ ಹೃತ್ಪೂರ್ವಕ ಧನ್ಯವಾದಗಳು. ದೆಹಲಿಯ ಜನರ ಈ ಅಪಾರ ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ. ಇದು ನಮಗೆ ಕಷ್ಟಪಟ್ಟು ಕೆಲಸ ಮಾಡಲು ಮತ್ತು ಸೇವೆ ಮಾಡಲು ಸ್ಫೂರ್ತಿ ನೀಡುತ್ತದೆ. ಜನರು ಬಿಜೆಪಿ ಕೊಳಕು ರಾಜಕೀಯವನ್ನು ಸೋಲಿಸಿದರು. ನಮ್ಮ ಒಳ್ಳೆಯ ಕೆಲಸವನ್ನು ಜನರು ಮೆಚ್ಚಿಕೊಂಡಿದ್ದಾರೆ. ಧನ್ಯವಾದಗಳು ರಾಜೇಂದ್ರ ನಗರ, ಧನ್ಯವಾದಗಳು ದೆಹಲಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಂತ್ರಾಲಯದ ಹೆಸರಲ್ಲಿ ನಕಲಿ ವೆಬ್‍ಸೈಟ್ – ಭಕ್ತರಿಂದ ಹಣ ವಸೂಲಿ ಮಾಡಿರುವ ಖದೀಮರು
Advertisement
ಪಾಠಕ್ ಅವರು ದೊಡ್ಡ ಅಂತರದಲ್ಲಿ ಗೆಲ್ಲುವಿನತ್ತ ಸಾಗುತ್ತಿದ್ದಂತೆ, ಎಎಪಿ ಹಿರಿಯ ನಾಯಕ ಮತ್ತು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅಭಿನಂದನಾ ಸಂದೇಶಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.