ಮಂಡ್ಯ: ಸುಮಲತಾ ಸಮಾವೇಶದಲ್ಲಿ ಮಂಡ್ಯ ಜನತೆ ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಹೊರಗಿನ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆಸಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಡಿ.ಸಿ ತಮ್ಮಣ್ಣ ಅವರು, “ಸುಮಲತಾ ಅವರ ಸಮಾವೇಶದಲ್ಲಿ ನಮ್ಮ ಅಂಬರೀಶ್ ಅವರ ಅಭಿಮಾನಿಗಳು ಹೋಗಿರುತ್ತಾರೆ. ನನಗೆ ತಿಳಿದ ಮಾಹಿತಿ ಪ್ರಕಾರ ಸುಮಲತಾ ಅವರ ಬೃಹತ್ ಸಮಾವೇಶಕ್ಕೆ ಬಂದವರ ಪೈಕಿ ಮಂಡ್ಯ ಜಿಲ್ಲೆಯವರು ಕಡಿಮೆ. ಹೆಚ್ಚಾಗಿ ಹೊರಗಿನಿಂದ ಜನ ಕರೆಸಲಾಗಿದೆ. ಮೈಸೂರು, ಚನ್ನಪಟ್ಟಣ, ರಾಮನಗರದಿಂದ ಜನ ಕರೆಸಲಾಗಿದೆ ಎನ್ನುವ ವಿಷಯ ಗೊತ್ತಾಯಿತು” ಎಂದು ಹೇಳಿದರು.
Advertisement
Advertisement
ಸಮಾವೇಶದಲ್ಲಿ ನಮ್ಮವರು ಹಾಗೂ ಅವರ ಕಡೆಯವರು ಬಂದಿರುತ್ತಾರೆ. ಹಾಗಂತ ಅಲ್ಲಿ ಇದ್ದ ಜನರೆಲ್ಲಾ ಸುಮಲತಾ ಅವರಿಗೆ ವೋಟ್ ಹಾಕುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರುವ ಕಾರಣ ಕೆಲ ಕಾಂಗ್ರೆಸ್ ನಮ್ಮ ಜೊತೆ ಬರಲು ಒಪ್ಪಿದ್ದಾರೆ. ಅಲ್ಲದೆ ನಮಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಈಗಾಗಲೇ ಸುಮಲತಾ ಜೊತೆ ಗುರುತಿಸಿಕೊಂಡ ಕಾಂಗ್ರೆಸ್ ಮುಖಂಡರ ಜೊತೆಗೆ ಮಾತುಕತೆ ಮಾಡಲಾಗಿದೆ ಎಂದು ತಿಳಿಸಿದರು.
Advertisement
ಸುಮಲತಾ ಅವರಿಗೂ ಜನ ಇರಬಹುದು. ಆದರೆ ಅವರಿಗಿಂತ ಹತ್ತು ಪಟ್ಟು ಅಭಿಮಾನಿಗಳು ಕುಮಾರಸ್ವಾಮಿ ಅವರಿಗೆ ಇದ್ದಾರೆ. ನಾವ್ಯಾಕೆ ವಿರೋಧ ಮಾಡಬೇಕು? ದರ್ಶನ್ ಹಾಗೂ ಯಶ್ ಅವರನ್ನು ನಾವು ವಿರೋಧ ಮಾಡಲ್ಲ. ನಾವು ಬೇರೆಯವರ ಬಗ್ಗೆ ಮಾತನಾಡಬಾರದು ಎಂದು ಡಿ.ಸಿ ತಮ್ಮಣ್ಣ ಹೇಳಿದರು.
Advertisement
ಬುಧವಾರ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಸುಮಲತಾ ಅವರು ಭರ್ಜರಿ ರೋಡ್ ಶೋ ಮೂಲಕ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಆಯೋಜನೆಗೊಂಡಿದ್ದ ಸಮಾವೇಶಕ್ಕೆ ಆಗಮಿಸಿದ್ದರು. ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿ ಸುಮಲತಾ ಅವರನ್ನು ಬೆಂಬಲಿಸಿದ್ದರು.