ಬೆಂಗಳೂರು: ಇಂದು ಕೇತುಗ್ರಸ್ಥ ಸೂರ್ಯ ಗ್ರಹಣದ (Solar eclipse) ಪ್ರಯುಕ್ತ ದೇಶಾದ್ಯಂತ ಹಲವೆಡೆ ವಿವಿಧ ರೀತಿಯ ಆಚರಣೆ, ಉಪವಾಸಗಳನ್ನು (Fast) ಮಾಡುವ ಮೂಲಕ ಗ್ರಹಣ ಕಾಲವನ್ನು ಜನರು ಕಳೆದಿದ್ದಾರೆ. ಗ್ರಹಣ ಪ್ರಾರಂಭವಾಗಿ ಅಂತ್ಯವಾಗುವವರೆಗೂ ಆಹಾರ, ನೀರನ್ನು ಸೇವಿಸಬಾರದು ಎಂದು ಜನರು ನಂಬುತ್ತಾರೆ. ಆದರೆ ಇಂದು ಹಲವೆಡೆ ಜನರು ಮೌಢ್ಯತೆಗೆ ಸೆಡ್ಡು ಹೊಡೆದು, ಗ್ರಹಣ ವೇಳೆ ಉಪಾಹಾರವನ್ನೂ (Food) ಸೇವಿಸಿದ್ದಾರೆ.
Advertisement
ಬಿಸಿಲ ನಾಡು ರಾಯಚೂರಿನಲ್ಲಿ ಸೂರ್ಯಗ್ರಹಣ ನೋಡಲು ಜನರು ಅಂಬೇಡ್ಕರ್ ವೃತ್ತದಲ್ಲಿ ಮುಗಿಬಿದ್ದಿದ್ದರು. ಭಾರತ ಜ್ಞಾನ ವಿಜ್ಞಾನ ಸಮಿತಿ ಗ್ರಹಣ ವೀಕ್ಷಣೆ ಆಯೋಜಿಸಿದ್ದು, ಸಾರ್ವಜನಿಕರಿಗೆ ಉಚಿತವಾಗಿ ಸೋಲಾರ್ ಫಿಲ್ಟರ್ ವಿತರಿಸಲಾಗಿದೆ. ಈ ವೇಳೆ ಗ್ರಹಣ ವೀಕ್ಷಣಾ ಸ್ಥಳದಲ್ಲಿ ಜನರಿಗೆ ಬಾಳೆಹಣ್ಣು, ಸಿಹಿ ತಿನಿಸು, ಚುರುಮುರಿಯನ್ನು ವಿತರಿಸಲಾಗಿದೆ. ಗ್ರಹಣ ವೀಕ್ಷಣೆಯೊಂದಿಗೆ ಜನರು ಆಹಾರ ಸೇವಿಸಿ, ಮೌಢ್ಯತೆಗೆ ಸೆಡ್ಡು ಹೊಡೆದಿದ್ದಾರೆ.
Advertisement
Advertisement
ತುಮಕೂರು ನಗರದ ವಿಜ್ಞಾನ ಕೇಂದ್ರದಲ್ಲಿ ಸೋಲಾರ್ ಫಿಲ್ಟರ್ ಹಿಡಿದು ಇಂದು ಜನರು ಗ್ರಹಣ ವೀಕ್ಷಣೆ ಮಾಡಿದ್ದಾರೆ. ಇದೇ ವೇಳೆ ಪ್ರಗತಿಪರರು ತಿಂಡಿ ತಿನ್ನುವ ಮೂಲಕ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದಾರೆ. ಇದನ್ನೂ ಓದಿ: 3ನೇ ಕಿಂಗ್ ಚಾರ್ಲ್ಸ್‌ರಿಂದ ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಾಕ್ ನೇಮಕ
Advertisement
ಕಲಬುರಗಿಯ ಜಗತ್ ವೃತ್ತದಲ್ಲಿ ಗ್ರಹಣ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಕೂಕ ಮಾಡಿಕೊಡಲಾಗಿತ್ತು. ಈ ವೇಳೆಯೂ ಪ್ರಗತಿಪರ ಚಿಂತಕರ ಸಂಘಟನೆಗಳು ಉಪಾಹಾರ ವ್ಯವಸ್ಥೆ ಮಾಡಿದ್ದವು. ಈ ವೇಳೆ ಬಾಳೆಹಣ್ಣು ಹಾಗೂ ಉಪಾಹಾರವನ್ನು ಜನರು ಸೇವಿಸಿದ್ದಾರೆ. ಈ ಮೂಲಕ ಸೂರ್ಯಗ್ರಹಣದ ವೇಳೆ ಆಹಾರ ಸೇವಿಸಿದರೆ ಯಾವುದೇ ಅಪಾಯವಿಲ್ಲ ಎಂಬುದನ್ನು ಜನರಿಗೆ ಮನದಟ್ಟು ಮಾಡಲು ಪ್ರಯತ್ನಿಸಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ಬಗ್ಗೆ ಟ್ವೀಟ್ ಮಾಡಿ ಕುತೂಹಲ ಮೂಡಿಸಿದ ಮೋಹಕ ತಾರೆ ರಮ್ಯಾ