ಮಂಗಳೂರು: ಪೆನ್ವಿಲೈನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಕ್ಷೇತ್ರದಿಂದ ನಡೆಸುತ್ತಿರುವ ಕಾರ್ಯಕ್ರಮಗಳ ಕುರಿತು ಅಧ್ಯಯನ ನಡೆಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜೊತೆ ಮಾತನಾಡುತ್ತಾ ಸಮಾಜದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಬಹಳ ಅವಕಾಶಗಳಿವೆ. ಧಾರ್ಮಿಕ ಸಂಸ್ಥೆಗಳು ಧರ್ಮ ಸಂರಕ್ಷಣೆಯ ಜೊತೆಗೆ ಪ್ರಸಕ್ತ ಸಮಾಜದಲ್ಲಿ ಇರುವ ಸವಾಲುಗಳನ್ನು ಗುರುತಿಸಿ ಸ್ಪಂದಿಸಿದರೆ ಉತ್ತಮವಾಗುವುದು. ಶ್ರೀ ಕ್ಷೇತ್ರ ಧರ್ಮಸ್ಥಳ ಬಹಳ ವರ್ಷಗಳಿಂದ ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಪರಂಪರಾಗತವಾಗಿ ಬಂದಿರುವ ಈ ಕೈಂಕರ್ಯ ಸಮಾಜ ಸೇವೆಯನ್ನು ಮಾಡುವ ಅವಕಾಶವನ್ನು ನಮಗೆ ಒದಗಿಸಿದೆ. ಯೋಜನೆಗಳನ್ನು ಅನುಷ್ಠಾನಿಸುತ್ತಾ ಬಂದಂತೆ ಹೊಸ ಹೊಸ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಯಿತು. ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುವುದು ಬಹಳ ಸಂತೋಷದಾಯಕ ಹಾಗೂ ಸವಾಲುಗಳು ಸಾಮಾನ್ಯ. ಎಂದಿಗೂ ಸವಾಲುಗಳನ್ನು ಎದುರಿಸಿ ಮುನ್ನಡೆದರೆ ಯಶಸ್ಸು ಸಾಧ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವಿರೇಂದ್ರ ಹೆಗ್ಗಡೆಯವರು ಅಭಿಪ್ರಾಯಪಟ್ಟರು.
Advertisement
Advertisement
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ನಾಲೆಡ್ಜ್ ಪಾರ್ಟ್ನರ್ ಆಗಿ ಗುರುತಿಸಿದ ಕುರಿತು ಪ್ರಮಾಣ ಪತ್ರವನ್ನು ಹಾಗೂ ಫಲಕವನ್ನು ನೀಡಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪರವಾಗಿ ಪ್ರೊ. ಫೆಮಿಡಾರವರು ಗೌರವಿಸಿದರು.
Advertisement
ಭೇಟಿಯ ಸಂಧರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಹೆಚ್. ಮಂಜುನಾಥ್ ರವರು ಗ್ರಾಮೀಣಾಭಿವೃದ್ಧಿ ಯೋಜನೆಯ ಕುರಿತು ವಿವರಿಸಿದರು. ಸಿರಿಗ್ರಾಮೋದ್ಯೋಗ ಸಂಸ್ಥೆಗೆ ಭೇಟಿ ನೀಡಲಾಯಿತು. ಕ್ಷೇತ್ರದ ವಿವಿಧ ವಿಭಾಗಗಳನ್ನು ಭೇಟಿ ಮಾಡಲಾಯಿತು. ಪ್ರೊ. ಫೆಮಿಡಾ, ವಿನೋದ್ ದೀಕ್ಷೀತ್ ಇವರು ತಂಡವನ್ನು ಪ್ರತಿನಿಧಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕಿ ಮಮತಾ ಹರೀಶ್ ರಾವ್, ಉಪನ್ಯಾಸಕಿ ಚೈತನ್ಯಾ ಉಪಸ್ಥಿತರಿದ್ದರು.
Advertisement