ಬೆಂಗಳೂರು: ಅಪ್ಪ ಅಳಬೇಡ. ನಿಮಗಾಗಿ ಫಿಫಾ ವಿಶ್ವಕಪ್ ಗೆದ್ದು ತರುವೆ ಎಂದು ಹತ್ತು ವರ್ಷದ ಬಾಲಕನೊಬ್ಬ ತಂದೆಗೆ ಸಮಾಧಾನ ಹೇಳಿದ್ದ. ಆ ನಂತರದ 8 ವರ್ಷದಲ್ಲೇ ಆ ಹುಡುಗ ಹೇಳಿದ್ದ ಮಾತನ್ನು ಮಾಡಿ ತೋರಿಸಿದ್ದ. ಫಿಫಾ ವಿಶ್ವಕಪ್ ಎತ್ತಿ ಹಿಡಿದು ತಂದೆಯ ಮುಂದೆ ನಿಂತಿದ್ದ. ಇದ್ಯಾವುದೋ ಸಿನಿಮಾ ಅಲ್ಲ. ಫುಟ್‍ಬಾಲ್ ದಂತಕತೆ ದಿವಂಗತ ಪೀಲೆಯ ಜೀವನದಲ್ಲಿ ನಡೆದ ಘಟನೆ.
Advertisement
ಆಗ ಪೀಲೆ ವಯಸ್ಸು ಕೇವಲ 17. ದೇಶಕ್ಕಾಗಿ ಮೂರು ಬಾರಿ ವಿಶ್ವಕಪ್ ಗೆದ್ದುಕೊಟ್ಟು ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದ ಕಾಲ್ಚೆಂಡಿನ ಮಾಂತ್ರಿಕ ಪೀಲೆ ಇನ್ನಿಲ್ಲ. ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 82 ವರ್ಷದ ಪೀಲೆ ಸಾವೋಪೌಲೋದ ಆಲ್ಬರ್ಟ್ ಐನ್‍ಸ್ಟಿನ್ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಪೀಲೆ ಸಾವಿನಿಂದ ಬ್ರೆಜಿಲ್ ಮಾತ್ರವಲ್ಲ ಇಡೀ ಫುಟ್‍ಬಾಲ್ ಜಗತ್ತು ಈಗ ಶೋಕಸಾಗರದಲ್ಲಿ ಮುಳುಗಿದೆ. ಜಗತ್ತಿನ ಗಣ್ಯರೆಲ್ಲಾ ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ. ಪೀಲೆಯ ಮಾಜಿ ಕ್ಲಬ್ ಸ್ಯಾಂಟೋಸ್ ಅಂತ್ಯಕ್ರಿಯೆಯ ವಿವರಗಳನ್ನು ನೀಡಿದೆ. ಸೋಮವಾರ ಬೆಳಗ್ಗೆ ಪೀಲೆ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಕ್ಲಬ್ ಎಸ್ಟೋಡಿಯಾಗೆ ಕೊಂಡೊಯ್ದು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಮಂಗಳವಾರ ಪೀಲೆ ಕುಟುಂಬದ ಖಾಸಗಿ ಸಮಾಧಿ ಸ್ಥಳಕ್ಕೆ ಸ್ಯಾಂಟೋಸ್ ಬೀದಿಯಲ್ಲಿ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಮೂವರು ಪತ್ನಿಯರು ಆರು ಮಕ್ಕಳನ್ನು ಪೀಲೆ ಅಗಲಿದ್ದಾರೆ. ಇದನ್ನೂ ಓದಿ: ತಾಯಿ ಮಡಿದ ನೋವಿನಲ್ಲೂ ಪಂತ್ ಆರೋಗ್ಯ ಚೇತರಿಕೆಗಾಗಿ ಹಾರೈಸಿದ ಮೋದಿ
Advertisement
Advertisement
ಒಮ್ಮೆ ಬ್ರೆಜಿಲ್ ಕ್ರೀಡಾ ಮಂತ್ರಿಯಾಗಿಯೂ ಪೀಲೆ ಕೆಲಸ ಮಾಡಿದ್ರು. ಪೀಲೆಯ ನಿಜನಾಮ ಎಡ್ಸನ್ ಅರೆಂಟೆಸ್ ಡೋ ನಾಸಿಮೆಂಟೋ. ಆ ಬಳಿಕ ಕಾಲ್ಚೆಂಡು ಮಾಂತ್ರಿಕನಾಗಿ ಪೀಲೆ ಎಂದು ಗುರುತಿಸಿಕೊಂಡು ತನ್ನ 17ನೇ ವಯಸ್ಸಿಗೆ ಗ್ಲೋಬಲ್ ಸ್ಟಾರ್ ಆಗಿದ್ರು. 1958ರಲ್ಲಿ ಬ್ರೆಜಿಲ್ ಫಿಫಾ ವಿಶ್ವಕಪ್ ಗೆಲ್ಲೋದ್ರಲ್ಲಿ ಪೀಲೆ ಪಾತ್ರ ಪ್ರಮುಖವಾದುದು. ಫುಟ್‍ಬಾಲ್‍ನಲ್ಲಿ ಮೂರು ವಿಶ್ವಕಪ್ ವಿಜಯಗಳಲ್ಲಿ ಭಾಗಿದಾರನಾದ ಏಕೈಕ ಆಟಗಾರ ಪೀಲೆ. 1958, 1962, 1970ರ ವಿಶ್ವಕಪ್ ಗೆಲುವಿನಲ್ಲಿ ಪೀಲೆಯದ್ದೇ ಪ್ರಮುಖ ಪಾತ್ರ. ತಮ್ಮ ಮಂತ್ರಮುಗ್ಧವಾದ ಆಟದ ಮೂಲಕ ಎರಡು ದಶಕಗಳ ಕಾಲ ಫುಟ್‌ಬಾಲ್ ಪ್ರೇಮಿಗಳನ್ನು ರಂಜಿಸಿದ್ದ ಪೀಲೆ, ಕಾಲ್ಚೆಂಡು ಲೋಕದ ದಂತಕತೆಯಾಗಿ ಉಳಿದ್ರು. ಫಾರ್ವರ್ಡ್, ಅಟ್ಯಾಕಿಂಗ್ ಮಿಡ್‍ಫೀಲ್ಡರ್ ಆಗಿ ಮೈದಾನದಲ್ಲಿ ಪೀಲೆ ಮಾಡಿದ ವಿನ್ಯಾಸಗಳು ಅಸಾಧಾರಣ. ಮಿಂಚಿನ ವೇಗದಲ್ಲಿ ಚೆಂಡನ್ನು ಗೋಲ್‍ಪೋಸ್ಟ್‌ಗೆ ತಳ್ಳೋದ್ರಲ್ಲಿ ಪೀಲೆಯದ್ದು ಎತ್ತಿದ ಕೈ. ಎದುರಿಗೆ ಪ್ರತ್ಯರ್ಥಿ ತಂಡದ ಎಷ್ಟೇ ಆಟಗಾರರು ಇರಲಿ, ಲೀಲಾಜಾಲವಾಗಿ ಚೆಂಡನ್ನು ಡ್ರಿಬ್ಲಿಂಗ್ ಮಾಡುತ್ತಾ ಗೋಲ್‍ಪೋಸ್ಟ್‌ಗೆ ಕೊಂಡೊಯ್ಯದ್ರಲ್ಲಿ ಪೀಲೆಗೆ ಯಾರು ಸಾಟಿಯೇ ಇರಲಿಲ್ಲ. ಇದನ್ನೂ ಓದಿ: ರಕ್ತದ ಮಡುವಿನಲ್ಲಿ ಕಾರಿನ ಗಾಜು ಹೊಡೆದು ಹೊರಬಂದ ಪಂತ್ – ಕಾರಿನಲ್ಲಿದ್ದ ಹಣ ದೋಚಿದ ಕಳ್ಳರು
Advertisement
1970ರ ವಿಶ್ವಕಪ್‍ನಲ್ಲಿ ರೋಮೆನಿಯಾ ವಿರುದ್ಧ 25 ಅಡಿ ದೂರದಿಂದ ಪೀಲೆ ಫ್ರೀಕಿಕ್ ಮಾಡಿ, ಡಿಫೆಂಡರ್‌ಗಳ ಮಧ್ಯದಿಂದ ಗೋಲ್‍ಪೋಸ್ಟ್‌ಗೆ ಕಾಲ್ಚೆಂಡು ನುಗ್ಗಿಸಿದ ಪರಿ ಅಮೋಘ. 1958ರ ವಿಶ್ವಕಪ್ ಫೈನಲ್‍ನಲ್ಲಿ ಸ್ವೀಡನ್ ಗೋಲಿಯನ್ನು ವಂಚಿಸಿ ಗೋಲ್ ಪೋಸ್ಟ್‌ಗೆ ಚೆಂಡನ್ನು ಪೀಲೆ ಹಾಕಿದ್ದನ್ನು ನೋಡುವುದೇ ಕಣ್ಣಿಗೆ ಹಬ್ಬ. ಇಂತಹ ಗೋಲ್‍ಗಳು ಅದೆಷ್ಟೋ ಇವೆ. 1971ರಲ್ಲಿ ಯುಗೋಸ್ಲೋವಿಯಾ ವಿರುದ್ಧ ಪೀಲೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ರು. ವಿಶ್ವಕಪ್‍ನ 14 ಪಂದ್ಯದಲ್ಲಿ 12 ಗೋಲ್ ಗಳಿಸಿದ್ರು. ಒಟ್ಟು 1,363 ಪಂದ್ಯಗಳಲ್ಲಿ 1,281 ಗೋಲ್‍ಗಳನ್ನು ಪೀಲೆ ಸಿಡಿಸಿದ್ದರು. ಅಂದ್ರೆ ಸರಾಸರಿ ಪಂದ್ಯವೊಂದ್ರಲ್ಲಿ 0.93 ಗೋಲ್. ಇದು ಮೆಸ್ಸಿ, ರೊನಾಲ್ಡೊಗಿಂತಲೂ ಹೆಚ್ಚು. ಅಧಿಕೃತವಾಗಿ ಆಡಿದ 831 ಪಂದ್ಯಗಳಲ್ಲಿ 767 ಗೋಲ್ ಗಳಿಸಿದ್ರು. ಮೆಸ್ಸಿ, ರೊನಾಲ್ಡೊ ಇಷ್ಟು ಗೋಲ್ ಹೊಡೆಯಲು ಸಾವಿರ ಪಂದ್ಯಗಳು ಬೇಕಾದ್ವು ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.
Live Tv
[brid partner=56869869 player=32851 video=960834 autoplay=true]