ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳು ಭಾನುವಾರ ಕೃಷ್ಣೈಕ್ಯರಾಗಿದ್ದಾರೆ. ಅನಾರೋಗ್ಯಕ್ಕೀಡಾಗುವುದಕ್ಕೂ ಮೊದಲು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಶ್ರೀಗಳು, ವಯಸ್ಸು 90 ಆದರೂ ದೇಶ ಸುತ್ತುತ್ತಿರೋದು ಯಾಕೆ ಎಂಬುದನ್ನು ತಮ್ಮ ಕೊನೆಯ ಭಾಷಣದಲ್ಲಿ ಬಿಚ್ಚಿಟ್ಟಿದ್ದರು.
ಡಿಸೆಂಬರ್ 19 ರಂದು ಪೇಜಾವರಶ್ರೀ ಸಾಕಷ್ಟು ಓಡಾಟ ಮಾಡಿದ್ದರು. ಉಡುಪಿ ಪಾಜಕ ಆನಂದ ತೀರ್ಥ ಸಂಸ್ಥೆಯ ವಾರ್ಷಿಕೋತ್ಸವ ಪೇಜಾವರರ ಕೊನೆಯ ಸಭಾ ಕಾರ್ಯಕ್ರಮ. ಅಲ್ಲಿ ಮಾತನಾಡಿದ್ದ ವಿಶ್ವೇಶತೀರ್ಥ ಸ್ವಾಮೀಜಿ ಭಾಷೆ, ಸಂಸ್ಕೃತಿ ಮತ್ತು ಜಾತ್ಯಾತೀತತೆ ಬಗ್ಗೆ ಮಾತನಾಡಿದ್ದರು. ಇದನ್ನೂ ಓದಿ: ಮುಸ್ಲಿಂ ಅಧಿಕಾರಿಯ ಭಕ್ತಿಯ ಹಠಕ್ಕೆ ಸೋತು ಪ್ರಾಣದೇವರ ಪ್ರತಿಷ್ಠಾಪನೆ ಮಾಡಿದ್ದ ಪೇಜಾವರ ಶ್ರೀ
Advertisement
Advertisement
ಧಾರ್ಮಿಕ- ಲೌಕಿಕ ಶಿಕ್ಷಣದ ಅವಕಾಶ ಕೊಡುತ್ತೇವೆ. ಇದನ್ನು ಎಲ್ಲೆಡೆ ಸಾರಲು ವಯಸ್ಸು 90 ಆದರೂ ನಾನು ಇಡೀ ದೇಶ ಸುತ್ತುತ್ತಿದ್ದೇನೆ ಎಂದು ಪೇಜಾವರಶ್ರೀ ಕೊನೆಯ ಕಿವಿಮಾತು ಹೇಳಿದ್ದರು.
Advertisement
ಅಲ್ಲದೆ ರಾಜ್ಯಭಾಷೆ ತಾಯಿ ಇದ್ದಂತೆ. ಕನ್ನಡವನ್ನು ಯಾವತ್ತಿಗೂ ಮರೆಯಬಾರದು. ಆದರೆ ನಮ್ಮ ಮಾತೃ ಭಾಷೆಯ ಬಗ್ಗೆ ಅಭಿಮಾನ ಇಟ್ಟುಕೊಳ್ಳಲೇಬೇಕು. ಮಾತೃಭಾಷೆ ಕಲಿಯಿರಿ, ಜೊತೆಗೆ ಉಳಿದ ಭಾಷೆಗಳನ್ನೂ ಕಲಿಯಿರಿ ಮತ್ತು ಕಲಿಸಿರಿ ಎಂದು ಮಕ್ಕಳಿಗೆ, ಪೋಷಕರಿಗೆ ತಿಳಿಸಿದ್ದರು. ಇದನ್ನೂ ಓದಿ: ಹಿಂದೂ ಧರ್ಮ ಪರಿಚಾರಕ ಶ್ರೀಗಳಿಗೆ ಮುಸ್ಲಿಂ ಡ್ರೈವರ್! – ಆರಿಫ್‍ಗೆ ಕೊನೆಯಾಸೆ ಈಡೇರದ ನೋವು
Advertisement
ಕೃಷ್ಣನಿಗೆ ಯಶೋಧೆ ತಾಯಿ, ದೇವಕಿಯೂ ತಾಯಿ. ಹಾಗೆಯೇ ರಾಜ್ಯ ಭಾಷೆಯನ್ನೂ ಕಲಿಯಿರಿ, ಜೊತೆಗೆ ಆಂಗ್ಲ ಭಾಷೆಯನ್ನೂ ಕಲಿಯಿರಿ. ಮಕ್ಕಳಿಗೆ ಭಾಷೆಯ ಮೇಲೆ ಪ್ರೀತಿ ಬೆಳೆಸಿ ಎಂದಿದ್ದಾರೆ. ನಮ್ಮ ಸಂಸ್ಕೃತಿ, ಶಾಸ್ತ್ರ ಜೊತೆ ಲೌಕಿಕ ವಿದ್ಯಾಭ್ಯಾಸ ಮುಖ್ಯ. ಹಿಂದೂಗಳಿಗೆ ರಾಮಾಯಣ, ಮಹಾಭಾರತ ಕಲಿಸುತ್ತೇವೆ. ಮಕ್ಕಳಿಗೆ ತತ್ವಜ್ಞಾನ, ಸಂಸ್ಕೃತಿ ಅವಶ್ಯಕ. ಕ್ರಿಶ್ಚಿಯನ್, ಮುಸಲ್ಮಾನ ಮಕ್ಕಳಿಗೆ ಧಾರ್ಮಿಕ ಶಿಕ್ಷಣಕ್ಕೆ ಅವಕಾಶ ಕೊಡುತ್ತೇವೆ. ಎಲ್ಲಾ ವರ್ಗಕ್ಕೂ ಧಾರ್ಮಿಕ ಶಿಕ್ಷಣ ಕಲಿಸುತ್ತೇವೆ ಎಂದಿದ್ದರು.
ಒಟ್ಟಿನಲ್ಲಿ ಪೋಷಕರಿಗೆ ಈ ಕಿವಿಮಾತು ಹೇಳಿದ್ದ ಪೇಜಾವರಶ್ರೀ ಇದೀಗ ಇಹಲೋಕ ತ್ಯಜಿಸಿ ಹರಿಪಾದ ಸೇರಿದ್ದು, ಭಕ್ತವೃಂದ ಕಣ್ಣೀರು ಹಾಕಿದೆ. ಇದನ್ನೂ ಓದಿ: ಲಾಸ್ಟ್ ಪ್ರೋಗ್ರಾಂನಲ್ಲಿ ಮಕ್ಕಳ ಜೊತೆ ಪೇಜಾವರ ಶ್ರೀಗಳು