ಉಡುಪಿ: ನನಗೆ ಸಂವಿಧಾನ ಬಗ್ಗೆ ಅರಿವಿದೆ. ಸಂವಿಧಾನ ರಚನೆಯಾಗುವಾಗ ನನಗೆ 18 ವರ್ಷ ಆಗಿತ್ತು. ಸಂವಿಧಾನ ರಚನಾ ಸಮಿತಿಯಲ್ಲಿ ಯಾರೆಲ್ಲಾ ಸದಸ್ಯರು ಅಂತ ಗೊತ್ತಿದೆ ಎಂದು ಹೇಳುವ ಮೂಲಕ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್‍ರಿಗೆ ಪೇಜಾವರ ಶ್ರೀಗಳು ಖಡಕ್ ತಿರುಗೇಟು ನೀಡಿದ್ದಾರೆ.
ಪತ್ರಿಕೆ ಓದಿ, ಲೋಕ ಸಂಚಾರ ಮಾಡಿದ ಅನುಭವ ನನಗಿದೆ. ನನಗೆ ಏನೂ ಗೊತ್ತಿಲ್ಲ ಅಂತ ಹೇಳುವುದು ಬೇಡ, ಸಂವಿಧಾನದಲ್ಲಿ ಹಲವು ತಿದ್ದುಪಡಿಯಾಗಿದೆ. ಈಗಲೂ ತಿದ್ದುಪಡಿಯಾದರೆ ತಪ್ಪೇನು ಎಂದು ಪೇಜಾವರ ಶ್ರೀಗಳು ಪ್ರಶ್ನೆ ಮಾಡಿದ್ದಾರೆ.
Advertisement
Advertisement
ಮಠಾಧಿಪತಿಗಳಿಗೆ ಸಾಮಾಜಿಕ ಜವಾಬ್ದಾರಿ ಇದೆ. ಸಮಾಜದ ಬಗ್ಗೆ ನಾನು ಮಾತನಾಡಿದರೆ ತಪ್ಪೇನು? ಕೆಲ ವಿಚಾರಗಳು ಜಾತ್ಯಾತೀತತೆಗೆ ವಿರುದ್ಧವಾಗಿದೆ. ಅಲ್ಪಸಂಖ್ಯಾತ ಮತ್ತು ಬಹು ಸಂಖ್ಯಾತ ಜನರನ್ನು ಸರ್ಕಾರ ಒಂದೇ ರೀತಿಯಲ್ಲಿ ಕಾಣಬೇಕು. ಸರ್ಕಾರದ ಶಾದಿ ಭಾಗ್ಯ ಯೋಜನೆ ಹಿಂದುಳಿದವರಿಗೆ ಮತ್ತು ದಲಿತರಿಗೂ ಸಿಗಬೇಕು. ಒಂದು ವೇಳೆ ನಾನು ಹೇಳಿದ್ದರಲ್ಲಿ ತಪ್ಪಿದ್ದರೆ ತಿಳಿಸಿ ಅಂತಾ ಅಂದರು. ಇದನ್ನೂ ಓದಿ: ಬಿಜೆಪಿ ನಾಯಕರಿಗೆ ಬುದ್ಧಿ ಬೆಳೆದಿಲ್ಲ, ಪೇಜಾವರ ಶ್ರೀ ಎಲ್ಲದಕ್ಕೂ ಮಾತನಾಡುತ್ತಾರೆ- ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಕಿಡಿ
Advertisement
ಶೃಂಗೇರಿ ಶ್ರೀಗಳ ವಿಚಾರ ಬೇರೆ ಇರಬಹುದು. ಹಲವು ಮಠಾಧಿಪತಿಗಳು ಜಾತ್ಯಾತೀತದ ಬಗ್ಗೆ ಮಾತನಾಡುತ್ತಾರೆ. ಮಠಾಧಿಪತಿಗಳು ಸಾಮಾಜಿಕ ಜವಬ್ದಾರಿಯನ್ನು ಹೊಂದಿದ್ದಾರೆ. ನಾವು ಧರ್ಮ ಮತ್ತು ಸಮಾಜದ ಬಗ್ಗೆಯೂ ಮಾತನಾಡುತ್ತೇವೆ, ನಮಗೇನು ಗೊತ್ತಿಲ್ಲ ಅಂತಾ ಹೇಳುವುದು ತಪ್ಪಾಗುತ್ತದೆ. ಸರ್ಕಾರ ರಾಜ್ಯದಲ್ಲಿನ ಎಲ್ಲ ಜನರನ್ನು ಒಂದೇ ಭಾವನೆಯಿಂದ ನೋಡಬೇಕು ಅಂತಾ ತಿಳಿಸಿದರು.
Advertisement
https://youtu.be/8fnPGk-CNuQ