ಉಡುಪಿ: ದೇಶ ಮತ್ತು ವಿಶ್ವದಾದ್ಯಂತ ಬಹು ಚರ್ಚೆಯಲ್ಲಿರುವ ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಉಡುಪಿಯ ಪೇಜಾವರ ಶ್ರೀ ಮತ್ತು ಕಾಣಿಯೂರು ಸ್ವಾಮೀಜಿ ಜೊತೆಯಾಗಿ ವೀಕ್ಷಣೆ ಮಾಡಿದರು. ಮೊಟ್ಟಮೊದಲ ಬಾರಿಗೆ ಮಾಲ್‍ಗೆ ತೆರಳಿದ ಸ್ವಾಮೀಜಿಗಳು ನೈಜ ಕತೆಯಾಧಾರಿತ ಚಿತ್ರ ವೀಕ್ಷಣೆ ಮಾಡಿದರು.
Advertisement
ಕಾಶ್ಮೀರಿ ಪಂಡಿತರ ಸಂಕಟಗಳನ್ನು ಎಳೆಯಾಗಿ ಬಿಚ್ಚಿಟ್ಟಿರುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ದೇಶಾದ್ಯಂತ ಭಾರೀ ಚರ್ಚೆಯಲ್ಲಿದೆ. ಕಾಂಗ್ರೆಸ್ ಸೇರಿದಂತೆ ಬಿಜೆಪಿಯ ವಿರೋಧಿ ಪಕ್ಷಗಳು ಅದನ್ನು ಟೀಕಿಸುತ್ತೇವೆ. ಇದು ನಿಜ ಅಲ್ಲ, ಇದೊಂದು ಕಾಲ್ಪನಿಕ ಎಂದು ಹೇಳುತ್ತಿವೆ. ಚಿತ್ರ ನಿರ್ದೇಶಕರಿಗೆ ಜೀವ ಬೆದರಿಕೆ ಇದ್ದು, ಹೆಚ್ಚುವರಿ ಭದ್ರತೆ ಕೊಡಲಾಗಿದೆ. ಪರ-ವಿರೋಧ ಚರ್ಚೆಯ ನಡುವೆ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಕಾಣಿಯೂರು ಮಠಾಧೀಶ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಥಿಯೇಟರ್‌ಗೆ ತೆರಳಿ ಚಲನಚಿತ್ರವನ್ನು ವೀಕ್ಷಣೆ ಮಾಡಿದರು.
Advertisement
Advertisement
ಸಿನಿಮಾ ಮಂದಿರಕ್ಕೆ ಸ್ವಾಮೀಜಿಗಳು ಭೇಟಿ ನೀಡಿದ್ದು ಇದೇ ಮೊದಲು. ಮಣಿಪಾಲಕ್ಕೆ ತಮ್ಮ ಜೊತೆಗೆ ಮಠದ 35 ಶಿಷ್ಯರನ್ನು ಕೂಡ ಕರೆದೊಯ್ದಿದ್ದರು. ತಮ್ಮ ಬಿಡುವಿಲ್ಲದ ಕಾರ್ಯಚಟುವಟಿಕೆಗಳ ನಡುವೆಯೂ ಶೋ ನೋಡಲು ಯತಿಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ಈ ಹಿಂದೆ ʼಉರಿʼ ಚಲನಚಿತ್ರ ಬಿಡುಗಡೆಯಾದಾಗ ಪೇಜಾವರ ಮಠದ ಹಿರಿಯ ಯತಿಗಳಾದ ಕೀರ್ತಿಶೇಷ ವಿಶ್ವೇಶತೀರ್ಥರು ತಮ್ಮ ಶಿಷ್ಯರೊಂದಿಗೆ ಸಿನಿಮಾ ನೋಡಿದ್ದರು. ಇದನ್ನೂ ಓದಿ: ಕುರಾನ್,ಬೈಬಲ್ ಎಲ್ಲರನ್ನು ಕೊಲ್ಲು ಎಂದು ಹೇಳುತ್ತಿದೆ: ಕಲ್ಲಡ್ಕ ಪ್ರಭಾಕರ ಭಟ್
Advertisement
ಚಲನಚಿತ್ರ ವೀಕ್ಷಣೆ ವೇಳೆ ಕೆಲ ಪ್ರೇಕ್ಷಕರು ಸ್ವಾಮೀಜಿಗಳ ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದಿದ್ದಾರೆ. ಕಾಣಿಯೂರು ಸ್ವಾಮೀಜಿ ತಮ್ಮ ಶಿಷ್ಯರ ಮೊಬೈಲ್‍ನಲ್ಲಿ ಪೇಜಾವರ ಸ್ವಾಮೀಜಿಗಳ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಚಿತ್ರದ ಬಗ್ಗೆ ಇಬ್ಬರು ಸ್ವಾಮೀಜಿಗಳು ಪ್ರಶಂಶಿಸಿದ್ದು, ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅಂದಿನ ಪರಿಸ್ಥಿತಿಯನ್ನು ಕಂಡು ನೊಂದುಕೊಂಡರು. ಇದನ್ನೂ ಓದಿ: ಹಿಜಬ್ ತೀರ್ಪು- ಹೈಕೋರ್ಟ್ ಜಡ್ಜ್‌ಗಳಿಗೆ ʼವೈʼ ಭದ್ರತೆ