ಮತ ಚಲಾಯಿಸಿ ರಾಮದೇವರ ಪ್ರಾಣ ಪ್ರತಿಷ್ಠೆ ಮಾಡಿದಷ್ಟೇ ಧನ್ಯತೆ: ಪೇಜಾವರ ಶ್ರೀ

Public TV
1 Min Read
Pejawar seer

ಉಡುಪಿ: ಮತ ಚಲಾಯಿಸಿ ರಾಮದೇವರ ಪ್ರಾಣ ಪ್ರತಿಷ್ಠೆ ಮಾಡಿದಷ್ಟೇ ಧನ್ಯತಾ ಭಾವ ಉಂಟಾಗಿದೆ ಎಂದು ಪೇಜಾವರ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು (Pejawar Seer) ಹೇಳಿದ್ದಾರೆ.

ಉಡುಪಿಯ ನಾರ್ತ್ ಸ್ಕೂಲ್‍ನ ಮತಗಟ್ಟೆ 185ರಲ್ಲಿ ಮತ ಚಲಾಯಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಮೋದಿ (Narendra Modi ) ಸರ್ವಾಧಿಕಾರಿ ಎಂಬ ಐ.ಎನ್.ಡಿ.ಐ.ಎ ಒಕ್ಕೂಟದ ಆರೋಪಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಜಾಪ್ರಭುತ್ವ ದೇಶದಲ್ಲಿ ಪ್ರಧಾನಿಯಾದವರು ಸರ್ವಾಧಿಕಾರಿ ಹೇಗೆ ಆಗುತ್ತಾರೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಇಲ್ಲೇನು ಎಕ್ಸಾಂ ಬರೆಸಲ್ಲ, ಬಂದು ವೋಟು ಮಾಡಿ : ನಟ ಶ್ರೀಮುರಳಿ

ನಮಗೆ ಬೇಕಾಗಿರುವ ಸರ್ಕಾರ ರೂಪಿಸುವ ದೊಡ್ಡ ಹೊಣೆ ಪ್ರಜೆಗಳ ಮೇಲೆ ಇದೆ. ಎಲ್ಲಾ ಪ್ರಜೆಗಳು ಅವಶ್ಯವಾಗಿ ಮತದಾನ ಮಾಡಬೇಕು. ಯಾರು ಕೂಡ ಮತದಾನದಿಂದ ದೂರ ಉಳಿಯಬಾರದು. ಮತದಾನ ಮಾಡಿ ತುಂಬಾ ಹೆಮ್ಮೆ ಅನಿಸುತ್ತಿದೆ. ನೆಲದ ಸಂಸ್ಕೃತಿಯನ್ನು ಗೌರವಿಸುವ ಸರ್ಕಾರವನ್ನು ರೂಪಿಸುವ ಅವಕಾಶ ನಮಗೆ ಇದೆ. ಸಮಾಜದ ಪ್ರಸಕ್ತ ವಾತಾವರಣವನ್ನು ಅರ್ಥ ಮಾಡಿಕೊಂಡು ಮತದಾನ ಮಾಡಬೇಕು. ನಮಗೆ ಬೇಕಾಗಿರುವ ಸರ್ಕಾರವನ್ನು ರೂಪಿಸಬೇಕು. ರಾಜನಾದವ ಸರಿಯಾಗಿದ್ದರೆ ಕಾಲ ಯಾವತ್ತೂ ಹಾಳಾಗುವುದಿಲ್ಲ. ಈಗ ಪ್ರಜೆಗಳೇ ರಾಜರು ಎಂದರು.

ದೇಶದಲ್ಲಿ ಮತ ಚಲಾಯಿಸದವರಿಗೆ ಪೌರತ್ವ ಕೊಡಬಾರದು. ಅಂತಹವರಿಗೆ ತೃತೀಯ, ದ್ವಿತೀಯ ದರ್ಜೆಯ ಪೌರತ್ವ ಕೊಡಬೇಕು. ನೋಟ ಸಹಜ ಪ್ರಕ್ರಿಯೆ ಆಗಬೇಕೆ ಹೊರತು, ಒತ್ತಡದ ಅಭಿಯಾನ ಆಗಬಾರದು ಎಂದರು. ಇದನ್ನೂ ಓದಿ: ತಾಳಿ ಕಟ್ಟುವ ಮುನ್ನ ಓಡೋಡಿ ಬಂದು ಮತದಾನ ಮಾಡಿದ ವರ

Share This Article