ಮಂಗಳೂರು: ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ramamandir) 48 ದಿನಗಳ ಮಂಡಲೋತ್ಸವ (Mandala Pooja) ಮುಗಿಸಿ ವಾಪಸ್ ಆದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ (Pejawar seer) ಮಂಗಳೂರು (Mangaluru) ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.
ಮಂಡಲೋತ್ಸವದ ಬಗ್ಗೆ ಈ ವೇಳೆ ಪ್ರತಿಕ್ರಿಯಿಸಿದ ಅವರು, ಶ್ರೀರಾಮನ ಸೇವೆ ಮಾಡಿದ್ದು ನನ್ನ ದೊಡ್ಡ ಸುಯೋಗ. ಕೃಷ್ಣೈಕ್ಯರಾದ ಹಿರಿಯ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಅವರು ಈ ಭಾಗ್ಯ ನಮಗೆ ಕರುಣಿಸಿದ್ದಾರೆ. ಶ್ರೀರಾಮನ ನೆಲದಲ್ಲಿ ಮಾಡಿದ ಸೇವೆ ಕೃಷ್ಣನಿಗೆ ಸಮರ್ಪಣೆಯಾಗಿದೆ. ಅಯೋಧ್ಯೆಯಲ್ಲಿದ್ದಾಗ ದೂರದ ಉತ್ತರ ಪ್ರದೇಶದಲ್ಲಿ ಇದ್ದೇವೆ ಎಂದು ಅನಿಸಿಲ್ಲ. ಇಂದು ರಾಮನ ಸಾನಿಧ್ಯ. ಮತ್ತೊಂದು ರಾಮ ಭಕ್ತರ ಸಾನಿಧ್ಯವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ: ಪಟ್ಟು ಬಿಡದ ಈಶ್ವರಪ್ಪ
Advertisement
Advertisement
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಂದ ನಿರಂತರವಾಗಿ ಭಕ್ತರು ಬರುತ್ತಿದ್ದರು. ದೇವಾಲಯ ಪೂರ್ಣಗೊಳ್ಳಲು ಇನ್ನೂ 2 ವರ್ಷ ಬೇಕು. ಮೋದಿಜಿ ಅವರ ಕಾಲದಲ್ಲಿ ಇಂತಹ ಬೆಳವಣಿಗೆ ಕಾಣುತ್ತಿದ್ದೇವೆ. ಧಾರ್ಮಿಕವಾಗಿ, ಸಾಂಸ್ಕøತಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಎಲ್ಲಾ ನೆಲೆಯಲ್ಲಿ ಬದಲಾವಣೆ ಕಾಣುತ್ತಿದ್ದೇವೆ. ಇಂತಹ ಸರ್ಕಾರ ಮತ್ತೆ ಪುನಃ ದೇಶದಲ್ಲಿ ಆಡಳಿತಕ್ಕೆ ಬರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಳಿಕ ಮಂಗಳೂರಿನಿಂದ ಉಡುಪಿ ಕಡೆ ಮೆರವಣಿಗೆ ಮೂಲಕ ಪೇಜಾವರ ವಿಶ್ವಪ್ರಸನ್ನ ತೀರ್ಥರು ತೆರಳಿದರು.
Advertisement
Advertisement
ಇದೇ ವೇಳೆ, ಶಾಸಕರಾದ ವೇದವ್ಯಾಸ ಕಾಮತ್, ಯಶ್‍ಪಾಲ್ ಸುವರ್ಣ, ವಿಶ್ವ ಹಿಂದೂ ಪರಿಷತ್ ರಾಜ್ಯಾಧ್ಯಕ್ಷ ಪ್ರೊ.ಎಂ.ಬಿ ಪುರಾಣಿಕ್ ಅವರಿಂದ ಶ್ರೀಗಳಿಗೆ ವಿಶೇಷ ಗೌರವ ನೀಡಲಾಯಿತು. ಇದನ್ನೂ ಓದಿ: ನನಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯತ್ವ ಬೇಡ: ಹೆಸರು ಕೈಬಿಡುವಂತೆ ಸಿಎಂಗೆ ಅಕ್ಕಯ್ ಪದ್ಮಶಾಲಿ ಪತ್ರ