ಪೆಗಾಸಸ್ ಮೂಲಕ ಗೂಢಚರ್ಯೆ ಆರೋಪ – ತನಿಖೆಗೆ ಸಮಿತಿ ರಚಿಸಿದ ಸುಪ್ರೀಂಕೋರ್ಟ್

Public TV
2 Min Read
supreme court 633x420 e1491027611204

ನವದೆಹಲಿ: ತೀವ್ರ ವಿವಾದಕ್ಕೆ ಕಾರಣವಾಗಿದ್ದ ಪೆಗಾಸಸ್ ಸ್ಪೈವೇರ್ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ತಜ್ಞರ ಸಮಿತಿ ರಚಿಸಿದೆ. ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಆರ್.ವಿ ರವೀಂದ್ರನ್ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗಿದ್ದು, ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಲಿದೆ.

ಸುಧೀರ್ಘ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠ ಇಂದು ಮಹತ್ವದ ಆದೇಶ ನೀಡಿತು. ತಜ್ಞರ ಸಮಿತಿ ರಚಿಸುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿದ ಪೀಠ, ತಾನು ಆಯ್ಕೆ ಮಾಡಿದ ತಜ್ಞರ ಸಮಿತಿಯ ಮೂಲಕ ತನಿಖೆ ನಡೆಯಲಿದೆ ಎಂದಿದೆ. ಸಮಿತಿಯಲ್ಲಿ ಸೈಬರ್ ಸೆಕ್ಯೂರಿಟಿ, ಫೋರೆನ್ಸಿಕ್ಸ್ ನ ತಜ್ಞರನ್ನು ಒಳಗೊಂಡಿದ್ದು ಅಲೋಕ್ ಜೋಶಿ ಕೂಡಾ ಸಮಿತಿಯ ಸದಸ್ಯರಾಗಿದ್ದಾರೆ ಎಂದು ಪೀಠ ಹೇಳಿದೆ. ಇದನ್ನೂ ಓದಿ: ಪೆಗಾಸಸ್ ಸ್ಪೈವೇರ್ ಬಗ್ಗೆ ವಿಸ್ತೃತವಾದ ಅಫಿಡವಿಟ್ ಸಲ್ಲಿಸಲು ಸಾಧ್ಯವಿಲ್ಲ: ಕೇಂದ್ರ

ಆದೇಶ ಓದುವಾಗ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ, ಇಡಿ ಪ್ರಕರಣವನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು. ಸುಳ್ಳನ್ನು ತನಿಖೆ ಮಾಡಲು ಮತ್ತು ಸತ್ಯವನ್ನು ಕಂಡುಹಿಡಿಯಲು ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿ ಖಾಸಗಿತನದ ಹಕ್ಕು ಉಲ್ಲಂಘನೆಯನ್ನು ಪರಿಶೀಲಿಸಬೇಕು ಎಂಟು ವಾರದಲ್ಲಿ ವರದಿ ನೀಡಬೇಕು ಎಂದು ಸೂಚಿಸಿದರು. ಇದನ್ನೂ ಓದಿ: ಪೆಗಾಸಸ್ ಬಳಸಿ ಯಾರ ಮೇಲೂ ಗೂಢಾಚಾರಿಕೆ ಮಾಡಿಲ್ಲ- ಸುಪ್ರೀಂಗೆ ಅಫಿಡವಿಟ್ ಸಲ್ಲಿಕೆ

ಅಲ್ಲದೇ ವಿದೇಶಿ ಗೂಢಚರ್ಯೆ ತಂತ್ರಾಂಶದ ಮೂಲಕ ಭಾರತೀಯರನ್ನು ಕಣ್ಗಾವಲು ಮಾಡುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ನ್ಯಾ.ಎನ್.ವಿ ರಮಣ, ಹಲವು ಅರ್ಜಿದಾರರು ಪೆಗಾಸಸ್ ನಿಂದ ನೇರ ಬಲಿಪಶುಗಳಾಗಿದ್ದಾರೆ ಪೆಗಾಸಸ್‍ನಂತಹ ತಂತ್ರಜ್ಞಾನದ ಬಳಕೆಯನ್ನು ಗಂಭೀರವಾಗಿ ಪರಿಗಣಿಸುವ ಜವಾಬ್ದಾರಿ ಕೇಂದ್ರದ ಮೇಲಿದೆ. ಭಾರತದಲ್ಲಿ ಖಾಸಗಿತನದ ಹಕ್ಕನ್ನು ರಕ್ಷಿಸುವ ಅಗತ್ಯವನ್ನು ನಾನು ಚರ್ಚಿಸಿದ್ದೇನೆ ಎಂದರು. ಇದನ್ನೂ ಓದಿ: ಸಮ್ಮಿಶ್ರ ಸರ್ಕಾರ ಪತನಕ್ಕೆ ಪೆಗಾಸಸ್ ಕಾರಣ: ಪರಮೇಶ್ವರ್

ನಾವು ಮಾಹಿತಿಯ ಯುಗದಲ್ಲಿ ವಾಸಿಸುತ್ತಿದ್ದೇವೆ, ತಂತ್ರಜ್ಞಾನವು ಮುಖ್ಯ ಆದರ ಜೊತೆಗೆ ಖಾಸಗಿತನವನ್ನೂ ನಾವು ಗುರುತಿಸಬೇಕು ಮತ್ತು ಅದನ್ನು ಕಾಪಾಡುವುದು ಮುಖ್ಯ ಎಂದು ನ್ಯಾ. ರಮಣ ಹೇಳಿದರು. ಪತ್ರಕರ್ತರು ಮಾತ್ರವಲ್ಲದೆ ಎಲ್ಲಾ ನಾಗರಿಕರಿಗೂ ಖಾಸಗಿತನ ಮುಖ್ಯವಾಗಿದೆ ಖಾಸಗಿತನದ ಹಕ್ಕಿನ ಮೇಲೆ ನಿರ್ಬಂಧಗಳಿವೆ ಆದರೆ ಆ ನಿರ್ಬಂಧಗಳು ಸಾಂವಿಧಾನಿಕ ಪರಿಶೀಲನೆಗೆ ನಿಲ್ಲಬೇಕು. ಇಂದಿನ ಜಗತ್ತಿನಲ್ಲಿ ಖಾಸಗಿತನದ ಮೇಲಿನ ನಿರ್ಬಂಧವು ಭಯೋತ್ಪಾದನಾ ಚಟುವಟಿಕೆಯನ್ನು ತಡೆಗಟ್ಟುವುದು ಮತ್ತು ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಅಗತ್ಯವಿದ್ದಾಗ ಮಾತ್ರ ವಿಧಿಸಬಹುದು. ಆದರೆ ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತಾ ವಿಚಾರ ಎಂದು ಹೇಳಿ ನ್ಯಾಯಾಲಯವನ್ನ ಮೂಕ ಪ್ರೇಕ್ಷಕರನ್ನಾಗಿ ಮಾಡಬಾರದು ಎಂದು ಇದೇ ವೇಳೆ ನ್ಯಾ. ಎನ್.ವಿ ರಮಣ ಚಾಟೀ ಬೀಸಿದರು.

Share This Article
Leave a Comment

Leave a Reply

Your email address will not be published. Required fields are marked *