– ಸಂಪೂರ್ಣ ಕಟ್ಟಡ ಲೀಸ್‌ಗಿಟ್ಟ ಕೆಎಸ್‌ಆರ್‌ಟಿಸಿ
– ಸಂಪೂರ್ಣ ಕಟ್ಟಡ ತೆಗೆದುಕೊಂಡರೂ ಕೊಡ್ತಾರೆ
– ಫ್ಲೋರ್ ಬೈ ಫ್ಲೋ ತೆಗೆದುಕೊಂಡರೂ ಓಕೆ..!
– ರಾಘು ಮರಿಸ್ವಾಮಿ
ಬೆಂಗಳೂರು: ಪೀಣ್ಯ ಬಸವೇಶ್ವರ ಬಸ್ ನಿಲ್ದಾಣ (Basaveshwara Bus Terminal) ಸದ್ಯದಲ್ಲೇ ಕಲ್ಯಾಣ ಮಂಟಪ, ಮಾಲ್, ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಯಾಗಿ ಬದಲಾಗುವ ಸಾಧ್ಯತೆ ಇದೆ. ಬಸ್ ನಿಲ್ದಾಣವನ್ನು ಖಾಸಗಿ ವ್ಯವಹಾರಗಳಿಗೆ ನೀಡಲು ಟೆಂಡರ್ ಕರೆಯಲಾಗಿದೆ. ಸಂಪೂರ್ಣ 3 ಅಂತಸ್ತಿನ ಕಟ್ಟಡದ ಇ-ಟೆಂಡರ್ ಪ್ರಕ್ರಿಯೆಯನ್ನು ಕೆಎಸ್‌ಆರ್‌ಟಿಸಿ (KSRTC) ಶುರು ಮಾಡಿದೆ.
Advertisement
Advertisement
ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ನಿರ್ಮಾಣವಾಗಿರುವ ಪೀಣ್ಯ ಬಸ್ ನಿಲ್ದಾಣವನ್ನು (Peenya Bus Stand) ಖಾಸಗಿ ವ್ಯವಹಾರಗಳಿಗೆ ಬಿಟ್ಟು ಕೊಡಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ಕೋಟಿ ಕೋಟಿ ಖರ್ಚು ಮಾಡಿದರೂ ಬಸವೇಶ್ವರ ಬಸ್ ನಿಲ್ದಾಣ ಖಾಲಿ ಬಿದ್ದ ಪರಿಣಾಮ ಸರ್ಕಾರಕ್ಕೆ ಆದಾಯವಿಲ್ಲ. ಈ ಕಟ್ಟಡದಿಂದ ಕೆಎಸ್‌ಆರ್‌ಟಿಸಿಗೆ ಲಾಭವೂ ಇಲ್ಲ. ಹೀಗಾಗಿ ಆದಾಯಕ್ಕಾಗಿ ಖಾಸಗಿಯವರ ಮೊರೆ ಹೋಗಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಇದನ್ನೂ ಓದಿ: ಏರ್‌ಪೋರ್ಟ್ ರಸ್ತೆ ಸವಾರರಿಗೆ ಗುಡ್‌ನ್ಯೂಸ್ – ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಬಿಬಿಎಂಪಿ ಸಜ್ಜು
Advertisement
Advertisement
ಕಳೆದ ಹನ್ನೊಂದು ವರ್ಷಗಳ ಹಿಂದೆ ಅಂದ್ರೆ 2014ರಲ್ಲಿ ಸುಮಾರು 44 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಬಸ್ ನಿಲ್ದಾಣ ಉದ್ಘಾಟನೆಯಾಗಿ ಬಸ್ ಬಂದರೂ ಜನ ಮಾತ್ರ ಬಸ್ ಸ್ಟ್ಯಾಂಡ್‌ಗೆ ನಿರೀಕ್ಷಿತ ಮಟ್ಟದಲ್ಲಿ ಬರಲಿಲ್ಲ. ಹೀಗಾಗಿ ಇಲ್ಲಿಂದ ಶುರುವಾಗಿದ್ದ ಬಸ್ ಸಂಚಾರ ನಿಂತೇ ಹೋಯಿತು.
ಪ್ರಕ್ರಿಯೆ ಶುರು:
ಶಕ್ತಿ ಯೋಜನೆಯಿಂದ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ಗುಸು ಗುಸು ಕೇಳಿ ಬರುತ್ತಿರುವ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಸದ್ಯ ಸಂಪೂರ್ಣ ಕಟ್ಟಡವನ್ನ ಖಾಸಗಿಯವರಿಗೆ ಲೀಸ್ ಅಥವಾ ಬಾಡಿಗೆ ಕೊಡಲು ತಯಾರಿ ಮಾಡಿಕೊಂಡಿದೆ. ಅದರಂತೆ ಟೆಂಡರ್‌ನಲ್ಲಿ ಭಾಗಿಯಾಗಿ ಯಾರು ಬೇಕಾದರೂ ಕಟ್ಟಡವನ್ನು ತೆಗೆದುಕೊಂಡು ಉಪಯೋಗ ಮಾಡಿಕೊಳ್ಳಿ. ನಮಗೆ ಮಾತ್ರ ಹಣ ನೀಡಿ ಎಂದು ಇದಕ್ಕೆ ಬೇಕಾದ ಪ್ರಕ್ರಿಯೆಯನ್ನು ಆರಂಭಿಸಿದೆ. ಇದನ್ನೂ ಓದಿ: ಡಿಕೆಶಿ ವಿದೇಶದಲ್ಲಿರುವಾಗಲೇ ಆಪ್ತ ಸಚಿವರೊಂದಿಗೆ ಸಿಎಂ ಡಿನ್ನರ್ ಮೀಟಿಂಗ್!
ಏನೇನು ಮಾಡಬಹುದು..?
ಸದ್ಯ ಈ ಕಟ್ಟಡ ನೆಲಮಹಡಿ ಸೇರಿ ಒಟ್ಟು ನಾಲ್ಕು ಅಂತಸ್ತಿದೆ. ಈ ಪೈಕಿ ನಾಲ್ಕೂ ಅಂತಸ್ತನ್ನು ಖಾಸಗಿಯವರಿಗೆ ಬಿಟ್ಟುಕೊಡಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಇದನ್ನು ಪಡೆದ ಖಾಸಗಿಯವರು ಬಸ್ ನಿಲ್ದಾಣವನ್ನು ಮಾಲ್, ಆಸ್ಪತ್ರೆ, ಕಲ್ಯಾಣ ಮಂಟಪ ಬೇಕಿದ್ರೆ ಕಲ್ಯಾಣ ಮಂಟಪವಾಗಿ ಬದಲಾಯಿಸಿಕೊಳ್ಳಬಹುದು.
ಬಹು ಆಯ್ಕೆ ಮುಂದಿಟ್ಟ ಕೆಎಸ್‌ಆರ್‌ಟಿಸಿ!
ಜೊತೆಗೆ ಇದರಲ್ಲಿ ಲೀಸ್ ತೆಗೆದುಕೊಳ್ಳುವವರಿಗೆ ಆಯ್ಕೆಯನ್ನೂ ಕೂಡ ನೀಡಿದೆ ಆಡಳಿತ ಮಂಡಳಿ. ಸಂಪೂರ್ಣ ಕಟ್ಟಡ ಬೇಡದಿದ್ದರೆ, ಒಂದೊಂದೇ ಮಹಡಿಯನ್ನ ಕೂಡ ಪಡೆದು ಬೇಕಾದಂತೆ ತಮ್ಮ ವ್ಯಾಪಾರವನ್ನು ಮಾಡಬಹುದಾಗಿದೆ. ಆದರೆ ನಿಮಗೆ ಎಷ್ಟು ಬೇಕಾದ್ರು ತೆಗೆದುಕೊಳ್ಳಿ, ನಮಗೆ ಹಣ ನೀಡಿ ಅಂತ ಖಾಸಗಿಯವರಿಗೆ ಸರ್ಕಾರಿ ಕಟ್ಟಡವನ್ನು ಸಂಪೂರ್ಣವಾಗಿ ಬಿಟ್ಟುಕೊಡಲು ಮುಂದಾಗಿದೆ.