ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಿಂದ (Bengaluru) 25 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು – ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆ 2 ವರ್ಷಗಳ ಬಳಿಕ ಭಾರೀ ವಾಹನಗಳ (Heavy Vehicles) ಸಂಚಾರಕ್ಕೆ ಮುಕ್ತವಾಗ್ತಿದೆ.
ಇದೇ ಜುಲೈ 29ರ ಸೋಮವಾರದಿಂದ ಪೀಣ್ಯ ಫ್ಲೈಓವರ್ ಮೇಲೆ ಬಸ್, ಲಾರಿ, ಟ್ರಕ್ ಸೇರಿದಂತೆ ಭಾರೀ ವಾಹನಗಳು ಮುಕ್ತವಾಗಿ ಸಂಚರಿಸಬಹುದಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರೇಯಸಿ ಅವಾಯ್ಡ್ ಮಾಡಿದ್ದಕ್ಕೆ ಸ್ನೇಹಿತೆಯ ಕೊಲೆ – ಕೋರಮಂಗಲ ಪಿಜಿ ಯುವತಿ ಮರ್ಡರ್ ಕೇಸ್‌ಗೆ ಟ್ವಿಸ್ಟ್!
Advertisement
Advertisement
ಈ ಹಿಂದೆ ಫ್ಲೈಓವರ್‌ನ (Peenya flyover) 2 ಪಿಲ್ಲರ್‌ಗಳಲ್ಲಿ ದೋಷ ಕಂಡು ಬಂದಿದ್ದರಿಂದ ಭಾರೀ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಿ ಲಘು ವಾಹನಗಳಿಗೆ ಅವಕಾಶ ಕಲ್ಪಿಸಲಾಗಿತ್ತು. 2 ಪಿಲ್ಲರ್‌ಗಳಿಂದಾಗಿ 120 ಪಿಲ್ಲರ್‌ಗಳ 240 ಕೇಬಲ್ ಅಳವಡಿಕೆ ಪರಿಶೀಲಿಸಿ, ಲೋಡ್ ಟೆಸ್ಟಿಂಗ್ ಎಲ್ಲಾ ಆದ ಬಳಿಕ ಸಂಚಾರಕ್ಕೆ ಅವಕಾಶ ನೀಡಬಹುದು ಅಂತ ತಜ್ಞರು ಹೆದ್ದಾರಿ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಿದ್ದರು. ತಜ್ಞರ ಅಭಿಪ್ರಾಯವನ್ನು ಪ್ರಾಧಿಕಾರ ಪೊಲೀಸರಿಗೆ ಸಲ್ಲಿಕೆ ಮಾಡಿತ್ತು. ಇದನ್ನೂ ಓದಿ: ನೀಟ್ ವ್ಯವಸ್ಥೆ ಬದಲು ಸಿಇಟಿ ಪ್ರವೇಶಾತಿಗೆ ನಿರ್ಣಯ; ಉಭಯ ಸದನಗಳಲ್ಲಿ ತೀರ್ಮಾನ
Advertisement
Advertisement
ಇದೀಗ ಪ್ರತಿ ಶುಕ್ರವಾರ ಹೊರತುಪಡಿಸಿ ಉಳಿದ 6 ದಿನಗಳ ಕಾಲ ಭಾರೀ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಶುಕ್ರವಾರ ಫ್ಲೈಓವರ್‌ನ ನಿರ್ವಹಣೆ, ಪರಿಶೀಲನೆ ಆಗಲಿದ್ದು, ಆ ದಿನ ಮಾತ್ರ ಬೆಳಗ್ಗೆ 6 ಗಂಟೆಯಿಂದ ಶನಿವಾರ ಬೆಳಗ್ಗೆ 6 ಗಂಟೆವರೆಗೆ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಇರಲಿದೆ. ಉಳಿದ 6 ದಿನವೂ ಸಂಚಾರಕ್ಕೆ ಅವಕಾಶ ಕೊಟ್ಟು ಸಂಚಾರ ಪೊಲೀಸರು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ವಿಧಾನಸಭೆಯಲ್ಲಿ ಮುಂದುವರಿದ ಬಿಜೆಪಿ, ಜೆಡಿಎಸ್ ಧರಣಿ – ತುಳು ಸಂಭಾಷಣೆ ಸೊಗಡು, ವಿಧೇಯಕಗಳ ಅಂಗೀಕಾರ