ಕೋಲ್ಕತ್ತಾ: ಕೆಲ ತಿಂಗಳ ಹಿಂದೆ ಏರ್ ಇಂಡಿಯಾ ವಿಮಾನದಲ್ಲಿ (Air India Flight) ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಮೂತ್ರವಿಸರ್ಜನೆ (Urination) ಮಾಡಿ ಭಾರೀ ವಿವಾದ ಉಂಟಾಗಿತ್ತು. ಇದೀಗ ಭಾರತೀಯ ರೈಲ್ವೆಯಲ್ಲೂ (Indian Railways) ಸಿಬ್ಬಂದಿ ಮಹಿಳೆಯೊಬ್ಬರ (Woman) ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ವರದಿಯಾಗಿದೆ.
ಅಮೃತಸರದಿಂದ ಕೋಲ್ಕತ್ತಾ ತೆರಳುತ್ತಿದ್ದ ಅಕಲ್ ತಖ್ತ್ ಎಕ್ಸ್ಪ್ರೆಸ್ ರೈಲಿನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ರೈಲಿನ ಟಿಕೆಟ್ ಪರೀಕ್ಷಕ (TTE) ಕುಡಿದ ಮತ್ತಿನಲ್ಲಿ ಮಹಿಳೆಯೊಬ್ಬರ ತಲೆ ಮೇಲೆ ಮೂತ್ರವಿಸರ್ಜನೆ ಮಾಡಿದ್ದಾನೆ.
Advertisement
Advertisement
ವರದಿಗಳ ಪ್ರಕಾರ, ಮಹಿಳೆ ತನ್ನ ಪತಿಯೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಮಲಗಿದ್ದ ವೇಳೆ ರೈಲಿನಲ್ಲಿ ನಿಯೋಜನೆಗೊಂಡಿದ್ದ ಟಿಕೆಟ್ ಪರೀಕ್ಷಕ ಮುನ್ನಾ ಕುಮಾರ್ ಮಹಿಳೆ ಮೇಲೆ ಮೂತ್ರವಿಸರ್ಜನೆ ಮಾಡಿದ್ದಾನೆ. ಈ ವೇಳೆ ಮಹಿಳೆ ಕಿರುಚಿಕೊಂಡಿದ್ದು, ಕುಮಾರ್ ಅಲ್ಲಿಂದ ಓಡಿಹೋಗಲು ಪ್ರಯತ್ನಿಸಿದ್ದಾನೆ. ಆದರೆ ಮಹಿಳೆಯ ಪತಿ ಟಿಟಿಇ ಯನ್ನು ಹಿಡಿದು, ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಭೋಪಾಲ್ ಅನಿಲ ದುರಂತ – ಸುಪ್ರೀಂ ಕೋರ್ಟ್‍ನಲ್ಲಿ ಕೇಂದ್ರಕ್ಕೆ ಭಾರೀ ಹಿನ್ನಡೆ
Advertisement
ಮುನ್ನಾ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದು, ಈ ವೇಳೆ ಆತ ಮದ್ಯಪಾನ ಮಾಡಿ ನಶೆಯಲ್ಲಿ ಮೂತ್ರವಿಸರ್ಜನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
Advertisement
ಕೆಲ ತಿಂಗಳ ಹಿಂದೆ ಏರ್ ಇಂಡಿಯಾ ವಿಮಾನದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಪಕ್ಕದ ಸೀಟ್‌ನಲ್ಲಿ ಕುಳಿತಿದ್ದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಆರೋಪಿ ಶಂಕರ್ ಮಿಶ್ರಾ ಭಾರತ ಮೂಲದವನಾಗಿದ್ದು, ಅಮೆರಿಕದಲ್ಲಿ ಉದ್ಯೋಗಿಯಾಗಿದ್ದ. ಘಟನೆ ಬಗ್ಗೆ ದೂರು ದಾಖಲಾದ ಬಳಿಕ ಮಿಶ್ರಾನನ್ನು ಬಂಧಿಸಿ, ಏರ್ ಇಂಡಿಯಾ ವಿಮಾನದಲ್ಲಿ ಹಾರಾಟ ಮಾಡದಂತೆ 4 ತಿಂಗಳ ನಿಷೇಧವನ್ನು ವಿಧಿಸಲಾಯಿತು. ಇದನ್ನೂ ಓದಿ: ಡಬಲ್ ಡೆಕ್ಕರ್ ಬಸ್ಸಿಗೆ ಟ್ರ್ಯಾಕ್ಟರ್ ಡಿಕ್ಕಿ- ಓರ್ವ ಸಾವು, ಹಲವರಿಗೆ ಗಾಯ