ಚಿತ್ರದುರ್ಗ: ನೀವು ಎಂತೆಂಥ ಭಕ್ತರನ್ನೋ ನೋಡಿದ್ದೀರಿ. ಆದ್ರೆ ಇಲ್ಲೊಬ್ಬ ವಿಚಿತ್ರ ಭಕ್ತನಿದ್ದಾನೆ. ತಾನು ಎಲ್ಲೇ ಇರಲಿ, ದೇವಿಗೆ ಪೂಜೆ ಶುರುವಾಗ್ತಿದ್ದಂತೆ ಬಂದು ಪ್ರದಕ್ಷಿಣೆ ಹಾಕಿ ಕುಣಿಯುತ್ತಾನೆ.
Advertisement
ಹೌದು. ದೇವಸ್ಥಾನದ ಒಳಗೆ ಮಾರಮ್ಮನಿಗೆ ಪೂಜೆ. ಹೊರಗೆ ಗರಿ ಬಿಚ್ಚಿ ಕುಣಿಯುತ್ತಿರುವ ನವಿಲು. ಇದು ಚಿತ್ರದುರ್ಗದ ಚಳ್ಳಕೆರೆಯ ಮದಕರಿ ನಗರದ ಕಣಿವೆ ಮಾರಮ್ಮ ದೇವಸ್ಥಾನದಲ್ಲಿ ಕಂಡುಬಂದ ದೃಶ್ಯ. ನಾಲ್ಕು ವರ್ಷಗಳ ಹಿಂದೆ ಈ ನವಿಲು ಕಾಲು ಮುರಿದುಕೊಂಡು ಜೀವನ್ಮರಣದ ನಡುವೆ ಹೋರಾಡುತ್ತಿತ್ತು. ಆಗ ಈ ದೇವಸ್ಥಾನದ ಅರ್ಚಕಿ ಗೋಪಮ್ಮ ಶೃಶ್ರೂಷೆ ಮಾಡಿದ್ರು. ಅಂದಿನಿಂದ ಇಲ್ಲೇ ಉಳಿದುಕೊಂಡಿರುವ ಈ ನವಿಲು ಬೇವಿನ ಮರವನ್ನ ತನ್ನ ವಾಸಸ್ಥಾನ ಮಾಡಿಕೊಂಡಿದೆ. ನಿತ್ಯವೂ ಪೂಜೆಯ ವೇಳೆ ದೇವಸ್ಥಾನದ ಮುಂದೆ ಪ್ರದಕ್ಷಿಣೆ ಹಾಕಿ ನೃತ್ಯ ಮಾಡುತ್ತೆ.
Advertisement
Advertisement
ತಾನು ಎಲ್ಲೇ ಇರಲಿ, ಪೂಜೆ ಸಮಯಕ್ಕೆ ಸರಿಯಾಗಿ ಎಲ್ಲಿದ್ರೂ ಬಂದು ದೇವಿಯ ಮುಂದೆ ಕುಣಿಯುತ್ತೆ. ಜನರು ದೇವರಿಗಿಂತ ಹೆಚ್ಚಾಗಿ ನವಿಲಿನ ಮನಮೋಹಕ ಕುಣಿತ ನೋಡಲು ದೇವಸ್ಥಾನಕ್ಕೆ ಬರುತ್ತಿದ್ದಾರೆ. ಒಟ್ಟಿನಲ್ಲಿ ನವಿಲಿನ ಈ ನರ್ತನ ದೇವಸ್ಥಾನದ ಕಳೆಯನ್ನು ಹೆಚ್ಚಿಸಿರೋದಂತೂ ಸುಳ್ಳಲ್ಲ.