ಕಾರವಾರ: ವಿಧಾನಸಭಾ ಚುನಾವಣೆ (Vidhanasabha Elections) ಸಮೀಪಿಸುತ್ತಿದ್ದಂತೆ ಕರಾವಳಿ ಜಿಲ್ಲೆ ಕಾರವಾರದಲ್ಲಿ ರಾಜಕೀಯ ಕಿತ್ತಾಟಗಳು ಬೀದಿಗೆ ಬರತೊಡಗಿದೆ. ಪಿಡಿಓ ವರ್ಗಾವಣೆ ವಿಷಯದಲ್ಲಿ ಕಾರವಾರ ಕ್ಷೇತ್ರದ ಹಾಲಿ ಶಾಸಕಿ ರೂಪಾಲಿ ನಾಯ್ಕ್ (Rupali Naik) ಹಾಗೂ ಮಾಜಿ ಶಾಸಕ ಸತೀಶ್ ಸೈಲ್ (Sathish Sail) ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲೇ ಕಿತ್ತಾಟ ಮಾಡಿಕೊಂಡಿದ್ದು, ಇದೀಗ ಈ ಪ್ರಕರಣ ಠಾಣೆಯ ಮೆಟ್ಟಿಲೇರಿದೆ.
Advertisement
ಸತೀಶ್ ಸೈಲ್‍ಗೆ ಕುಡುಕ ಎಂದ ಶಾಸಕಿ: ಚುನಾವಣೆ ಸಮೀಪಿಸುತ್ತಿದ್ದಂತೆ ಕಾರವಾರ ಕ್ಷೇತ್ರದಲ್ಲಿ ರಾಜಕೀಯ ಕಿತ್ತಾಟ ರಂಗೇರಿದೆ. ಕಾರವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಮಾಜಾಳಿ ಪಂಚಾಯತ್‍ನಲ್ಲಿ PDO ಸಾಧನಾ ಚಂಡೇಕರ್ ಎಂಬವರ ವರ್ಗಾವಣೆ ವಿಚಾರಕ್ಕೆ ಸಂಘರ್ಷ ಶುರುವಾಗಿದೆ. ಇದೇ ವಿಷಯಕ್ಕೆ ಮಾಜಿ ಶಾಸಕ ಸತೀಶ್ ಸೈಲ್ ಹಾಗೂ ಹಾಲಿ ಶಾಸಕಿ ರೂಪಾಲಿ ನಾಯ್ಕ ಮಧ್ಯೆ ವಾಗ್ವಾದ ನಡೆದಿದೆ. ಇದನ್ನೂ ಓದಿ: ಶಾಸಕರ ದಾವಣಗೆರೆಯ ಮನೆ ಮೇಲೂ ರೇಡ್- ಇಂದು ಬೇನಾಮಿ ಆಸ್ತಿ ಮೇಲೂ ದಾಳಿ ಸಾಧ್ಯತೆ
Advertisement
Advertisement
ಘಟನೆ ಬಳಿಕ ಇಬ್ಬರೂ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ. ಶಾಸಕಿ ರೂಪಾಲಿ ನಾಯ್ಕ್ ತನ್ನ ಮೇಲೆ ಪೇಪರ್ ವೇಯ್ಟರ್‍ನಲ್ಲಿ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಅಲ್ಲದೆ ತನಗೆ ಅವ್ಯಾಚ್ಯ ಶಬ್ದದಿಂದ ನಿಂದಿಸಿದ್ದು, ಶಾಸಕಿ ವಿರುದ್ಧ ದೂರು ದಾಖಲಿಸಿ ಕ್ರಮಕೈಗೊಳ್ಳಿ ಎಂದು ಮಾಜಿ ಶಾಸಕ ಸತೀಶ್ ಸೈಲ್ ದೂರು ಕೊಟ್ಟಿದ್ರೆ, ಅತ್ತ ಶಾಸಕಿ ರೂಪಾಲಿ ನಾಯ್ಕ್ ಕೂಡ ಮಾಜಿ ಶಾಸಕರು ಕುಡಿತು ಬಂದು ಅಮಲಿನಲ್ಲಿ ಜಗಳ ಮಾಡುತ್ತಿದ್ದಾರೆ. ಕ್ರಮ ಕೈಗೊಳ್ಳುವಂತೆ ಕೇಸ್ ದಾಖಲಿಸಿದ್ದಾರೆ.
Advertisement
ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಪಿಡಿಓ ವರ್ಗಾವಣೆ ವಿಷಯದಲ್ಲಿ ಹೀಗೆ ಹಾಲಿ ಹಾಗೂ ಮಾಜಿ ಶಾಸಕರು ಠಾಣೆ ಮೆಟ್ಟಿಲೇರಿದ್ದು ಮಾತ್ರ ದುರಂತ. ಸದ್ಯ ಈ ವಿಚಾರ ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಅನ್ನೋದನ್ನ ಕಾದುನೋಡಬೇಕಿದೆ.