ಹಾವೇರಿ: ಇ-ಸ್ವತ್ತು (E Swathu) ಉತಾರ ಪೂರೈಸಲು ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಹಲಗೇರಿ ಲೋಕಾಯುಕ್ತ ಪೊಲೀಸರು ಗ್ರಾಮ ಪಂಚಾಯತಿ ಪಿಡಿಓ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹಾಗೂ 3 ಜನ ಗ್ರಾಪಂ ಸದಸ್ಯರ ಬಂಧಿಸಿರುವ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ.
ಪಿಡಿಓ ಕೆ.ಮಂಜುನಾಥ, ಉಪಾಧ್ಯಕ್ಷ ಮಲ್ಲಪ್ಪ ಬೂದಿಹಾಳ, ಸೋಮಶೇಖರ್, ಪ್ರಸನ್ನ ಮತ್ತು ಸೈಯದ್ ರೆಹಮಾನ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಇದನ್ನೂ ಓದಿ: 26 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಹಿ; ಭಾರತ-ಫ್ರಾನ್ಸ್ ಮಧ್ಯೆ 63,000 ಕೋಟಿ ಮೆಗಾ ಡೀಲ್
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಹಲಗೇರಿ ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ (Gram Panchayat) ನಡೆದಿದೆ. ಸುಮಾರು 60 ಫ್ಲಾಟ್‌ಗಳ ಎನ್.ಎ ಇ-ಸ್ವತ್ತು ಉತಾರ ಪೂರೈಸಲು 4.50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇಂದು 4 ಲಕ್ಷ ರೂಪಾಯಿ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇದನ್ನೂ ಓದಿ: ಪ್ಯಾಂಟ್ ಬಿಚ್ಚಿಸಿದ್ರು, ಮತ್ತೊಂದು ಬಿಚ್ಚಿಸಿದ್ರು ಅನ್ನೋದು ನನ್ಗೆ ಗೊತ್ತಿಲ್ಲ: ಆರ್.ಬಿ ತಿಮ್ಮಾಪೂರ
ಲೋಕಾಯುಕ್ತ ಡಿಎಸ್ಪಿ ಮಧುಸೂದನ್ ನೇತ್ರತ್ವದಲ್ಲಿ ನವೀನ್ ಅಂದನೂರು ಲೇಔಟ್ ಮಾಲೀಕನಿಂದ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಬಂಧಿಸಲಾಗಿದೆ. ಬಂಧಿತರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಪೊಲೀಸರು ಇವರ ಗುಲಾಮರು ಅಂದುಕೊಂಡಿದ್ದಾರಾ? – ಸಿಎಂ ನಡೆಗೆ ಛಲವಾದಿ ನಾರಾಯಣಸ್ವಾಮಿ ಕಿಡಿ