ಹಾವೇರಿ: 50 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಪಿಡಿಓ(PDO) ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಹಾವೇರಿ(Haveri) ಜಿಲ್ಲೆಯ ಸವಣೂರು ತಾಲೂಕಿನ ತೆಗ್ಗಿಹಳ್ಳಿ(Teggihalli) ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.
ಅಶೋಕ ಗೊಂದಿ ಬಂಧಿತ ತೆಗ್ಗಿಹಳ್ಳಿ ಗ್ರಾಮ ಪಂಚಾಯತಿ ಪಿಡಿಓ. ಹುಬ್ಬಳ್ಳಿ ಹೊಸ ಬಸ್ ನಿಲ್ದಾಣ ಬಳಿ ಹೊಟೇಲ್‌ನಲ್ಲಿ ಲಂಚ ಪಡೆಯುತ್ತಿದ್ದ ವೇಳೆ ಪಿಡಿಓ ಅಶೋಕ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇದನ್ನೂ ಓದಿ: ಹಲವು ಮಹಿಳೆಯರ ರೇಪ್, ವೀಡಿಯೋ ಮಾಡಿ ಸುಲಿಗೆ – ಪೊಲ್ಲಾಚಿ ಕೇಸ್‌ನ 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಪಿಡಿಓ ಅಶೋಕ್, 1 ಲಕ್ಷ 60 ಸಾವಿರದ ಗೋದಾಮು ನಿರ್ಮಾಣ ಕಾಮಾಗಾರಿಯ ಬಿಲ್ ಮಂಜೂರು ಮಾಡಲು 80 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಚಿತವಾಗಿ 50,000 ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು(Lokayuta Police) ಬಂಧಿಸಿದ್ದಾರೆ. ಇದನ್ನೂ ಓದಿ: ಬಾಯ್‌ಫ್ರೆಂಡ್ ಜೊತೆಗಿನ ಹಸಿಬಿಸಿ ಪ್ರಣಯದ ಫೋಟೋ ಹಂಚಿಕೊಂಡ ‘ಬಿಗ್ ಬಾಸ್’ ನಿಕ್ಕಿ
ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.