ಮುಲ್ಲಾನ್‌ಪುರ: ಪಂಜಾಬ್ ಕಿಂಗ್ಸ್ (Punjb Kings) ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 7 ವಿಕೆಟ್‌ಗಳ ಜಯ ಸಾಧಿಸಿದೆ. ಅತ್ಯುತ್ತಮವಾಗಿ ಬ್ಯಾಟ್ ಬೀಸಿದ ಕೊಹ್ಲಿ (Virat Kohli) ಅವರಿಗೆ ಪಂದ್ಯಶ್ರೇಷ್ಠ ಗೌರವ ಸಿಕ್ಕಿದೆ. ಈಗ ಈ ಪಂದ್ಯದಲ್ಲಿ ಕೊಹ್ಲಿ ರನೌಟ್ ಥ್ರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಸುಯಶ್ ಶರ್ಮಾ ಎಸೆದ 9ನೇ ಓವರ್‌ನ ಕೊನೆಯ ಎಸೆತವನ್ನು ಜೋಸ್ ಇಂಗ್ಲಿಸ್ ಲಾಂಗ್ ಆನ್ ಕಡೆ ಹೊಡೆದರು. ಎರಡು ರನ್ ತೆಗೆಯಬಹುದಾದ ಕಾರಣ ವಧೇರಾ ಎರಡು ರನ್ ಓಡಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಬೌಂಡರಿ ಬಳಿ ಬಾಲ್ ತಡೆದ ಟಿಮ್ ಡೇವಿಡ್ (Tim David) ಬೌಲರ್ ಕಡೆ ಚೆಂಡನ್ನು ಎಸೆದರು. ಇದನ್ನೂ ಓದಿ: ಚಿನ್ನದ ಬೆಲೆ ಗಗನಕ್ಕೆ – ಮಾರುಕಟ್ಟೆ ಏರಿಳಿತದ ನಡುವೆಯೂ ನೆಚ್ಚಿನ ಹೂಡಿಕೆಯಾಗಲು ಕಾರಣವೇನು?
Total confusion! 🫣👀
A mix-up between #JoshInglis & #NehalWadhera turned into a crucial breakthrough, as #RCB tightened the screws on #PBKS in their quest for revenge! 🔥💪🏻
Watch the LIVE action ➡ https://t.co/dJsow1beL1#IPLRevengeWeek 👉 PBKS 🆚 RCB | LIVE NOW on Star… pic.twitter.com/umiQT4Sxew
— Star Sports (@StarSportsIndia) April 20, 2025
ಬಾಲ್ ಬೌಲರ್ ಕಡೆ ಬರುತ್ತಿದ್ದಾಗ ವಧೇರಾ ಅವರು ಎರಡು ರನ್ ಪೂರ್ಣಗೊಳಿಸಲು ನಾನ್ ಸ್ಟ್ರೈಕ್ ಕಡೆ ಬರುತ್ತಿದ್ದರು. ಆದರೆ ನಾನ್‌ಸ್ಟ್ರೈಕ್‌ನಲ್ಲಿ ಇಂಗ್ಲಿಷ್ ಎರಡು ರನ್ ಓಡಲು ಮನಸ್ಸು ಮಾಡಿರಲಿಲ್ಲ. ಈ ವೇಳೆ ಬೌಲರ್ ಎಂಡ್ ಬಳಿ ಚೆಂಡನ್ನು ಹಿಡಿದ ಕೊಹ್ಲಿ ಕೀಪರ್ ಜಿತೇಶ್ ಶರ್ಮಾಗೆ ಥ್ರೋ ಮಾಡಿದರು, ವಧೇರಾ ರನೌಟ್ ಆದರು. ಇದನ್ನೂ ಓದಿ: ಕೊಹ್ಲಿ, ಪಡಿಕ್ಕಲ್ ಮಿಂಚು- ‘ಕಿಂಗ್ಸ್’ ವಿರುದ್ಧ ಸೇಡು ತೀರಿಸಿಕೊಂಡ ಆರ್‌ಸಿಬಿ
ಟಾಸ್ ಸೋತು ಮೊದಲು ಬ್ಯಾಟ್ ಮಾಡಿ ಪಂಜಾಬ್ ಕಿಂಗ್ಸ್ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಸುಲಭದ ಸವಾಲನ್ನು ಬೆನ್ನಟ್ಟಿದ ಬೆಂಗಳೂರು ಇನ್ನೂ 7 ಎಸೆತ ಬಾಕಿ ಇರುವಂತೆಯೇ 3 ವಿಕೆಟ್ ನಷ್ಟಕ್ಕೆ 159 ರನ್ ಹೊಡೆದು ಜಯಗಳಿಸಿತು.
ವಿರಾಟ್ ಕೊಹ್ಲಿ ಅಜೇಯ 73 ರನ್ (54 ಎಸೆತ, 7 ಬೌಂಡರಿ, 1 ಸಿಕ್ಸ್) ದೇವದತ್ ಪಡಿಕ್ಕಲ್ 61 ರನ್(35 ಎಸೆತ, 5 ಬೌಂಡರಿ, 4 ಸಿಕ್ಸ್) ಹೊಡೆದರು.