ಬಹುಭಾಷಾ ನಟಿ ಪಾಯಲ್ ಘೋಷ್ (Payal Ghosh) ಅವರು ಸೋಷಿಯಲ್ ಮೀಡಿಯಾದಲ್ಲಿ ಆತ್ಮಹತ್ಯೆ ಪತ್ರ ಶೇರ್ ಮಾಡಿಕೊಂಡು ಸಂಚಲನ ಮೂಡಿಸಿದ್ದಾರೆ. ಸೂಸೈಡ್ ನೋಟ್ (Death Note) ಬರೆದಿರುವ ಪೇಪರ್‌ನ್ನು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ವರ್ಷಧಾರೆ (Varshadaare) ನಟಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇದನ್ನೂ ಓದಿ: ʻಒಲವ ಘಮವುʼ ಆಲ್ಬಂ ಸಾಂಗ್‌ಗೆ ಧ್ರುವ ಸರ್ಜಾ ಮೆಚ್ಚುಗೆ
ತೆಲುಗು, ಹಿಂದಿ ಮತ್ತು ಕನ್ನಡ ಸಿನಿಮಾದಲ್ಲೂ ನಟಿ ಪಾಯಲ್ (Payal) ಅಭಿನಯಿಸಿದ್ದಾರೆ. ಕನ್ನಡದ `ವರ್ಷಧಾರೆ’ ಚಿತ್ರದಲ್ಲಿ ನಟಿಸಿದ್ದಾರೆ. ಹಿಂದಿ ಕಿರುತೆರೆಯ `ಸಾಥ್ ನಿಭಾನಾ ಸಾಥಿಯಾ’ ಸೀರಿಯಲ್‌ನಲ್ಲಿ ರಾಧಿಕಾ ಎಂಬ ಪಾತ್ರದ ಮೂಲಕ ಗಮನ ಸೆಳೆದಿದ್ದರು.
ಕಳೆದ ವರ್ಷ ಮುಸುಕುಧಾರಿ ದುಷ್ಕರ್ಮಿಗಳು ಆ್ಯಸಿಡ್ ದಾಳಿ ನಡೆಸಲು ಪ್ರಯತ್ನಿಸಿದ್ದರು ಎಂದು ನಟಿ ಪಾಯಲ್ ಹೇಳಿದ್ದರು. ರಾತ್ರಿ 10 ಗಂಟೆಗೆ ಔಷಧಿ ತರಲು ಹೋಗಿದ್ದಾಗ ನಡೆದ ಘಟನೆಯಿದು. ನಟಿಯ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಈ ವೇಳೆ ನಟಿಯ ಕೈಗೆ ರಾಡ್‌ನಿಂದ ಪೆಟ್ಟು ಬಿದ್ದಿತ್ತು. ಈ ಬಗ್ಗೆ ಪಾಯಲ್ ತಿಳಿಸಿದ್ದರು. ಇದಾದ ಬಳಿಕ ಅವರು ಕುಗ್ಗಿ ಹೋಗಿದ್ದರು. ಈಗ ಸೂಸೈಡ್ ನೋಟ್ ಬರೆದಿರುವ ನಟಿಯ ನಡೆ ಬಗ್ಗೆ ಫ್ಯಾನ್ಸ್ ಆತಂಕ ವ್ಯಕ್ತಪಡಿಸಿದ್ದಾರೆ.
View this post on Instagram
ಇದೀಗ ನಟಿ ಪಾಯಲ್ ಅವರು ಸೂಸೈಡ್ ನೋಟ್ ಬರೆದಿರುವ ಪೇಪರ್ ಮುಂಬೈನ ತಾಜ್‌ಮಹಲ್ ಟವರ್ ಎಂದು ಉಲ್ಲೇಖಗೊಂಡಿದೆ. ಅದರಲ್ಲಿ, “ನಾನು ಪಾಯಲ್ ಘೋಷ್. ನಾನು ಆತ್ಮಹತ್ಯೆ ಅಥವಾ ಹೃದಯಾಘಾತದಿಂದ ಸತ್ತರೆ ಅದಕ್ಕೆ ಇವರೇ ಕಾರಣ” ಎಂದು ಬರೆದುಕೊಂಡಿದ್ದಾರೆ. ಅವರು ಯಾರ ಹೆಸರನ್ನೂ ಹೇಳಿಲ್ಲ, ಯಾವುದೇ ಸೂಚನೆಯನ್ನೂ ನೀಡಿಲ್ಲ. ಇದರಿಂದ ಜನರೂ ಗೊಂದಲಕ್ಕೆ ಸಿಲುಕಿದ್ದಾರೆ. ನೂರಾರು ಮಂದಿ ಕಾಮೆಂಟ್ ಬಾಕ್ಸ್‌ನಲ್ಲಿ ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ. ಆಕೆಯ ಯೋಗಕ್ಷೇಮದ ಬಗ್ಗೆ ಕೇಳುತ್ತಿದ್ದಾರೆ. ಅದೇ ಸಮಯದಲ್ಲಿ, ಈ ಸೂಕ್ಷ್ಮ ವಿಷಯದಲ್ಲೂ ಪಾಯಲ್ ಅವರನ್ನು ಕೆಲವರು ಟ್ರೋಲ್ ಕೂಡ ಮಾಡುತ್ತಿದ್ದಾರೆ.