ಮಂಗಳೂರು: ಡಿಸೆಂಬರ್ 01 ರಿಂದ ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ (Surathkal Toll Gate) ಸ್ಥಗಿತಗೊಳಿಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್ ರವಿಕುಮಾರ್ (MR Ravikumar) ಅಧಿಕೃತ ಆದೇಶ ಹೊರಡಿಸಿದ್ದಾರೆ.
Advertisement
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಆದೇಶದನ್ವಯ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಸುರತ್ಕಲ್ ನಲ್ಲಿ ಸ್ಥಗಿತಗೊಳಿಸಿ ಉಡುಪಿಯ ಹೆಜಮಾಡಿ ಟೋಲ್ ಗೇಟ್ ಜೊತೆ ವಿಲೀನಗೊಳಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಲೂಟಿ ಹೊಡೆದು ರಾಜಕೀಯ ಮಾಡಿಲ್ಲ, ಅಕ್ರಮ ಮಾಡಿ ಜೀವನ ಮಾಡಿಲ್ಲ: HDK
Advertisement
Advertisement
ಹೆಜಮಾಡಿ ಟೋಲ್ ಗೇಟ್ ದರ ಪರಿಷ್ಕರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುತ್ತೋಲೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಸುರತ್ಕಲ್ ಟೋಲ್‌ಗೇಟ್ ಅನ್ನು ವಿಲೀನಗೊಳಿಸಿ ಹೆಚ್ಚುವರಿ ಶುಲ್ಕವನ್ನು ಹೆಜಮಾಡಿ ಟೋಲ್ (Toll) ನಲ್ಲಿಯೇ ಸಂಗ್ರಹಿಸಲಾಗುತ್ತದೆ. ಇದನ್ನೂ ಓದಿ: ನ.30 ರಿಂದ ಪುರುಷ ಸಂತಾನಹರಣ ಚಿಕಿತ್ಸಾ ಶಿಬಿರ – ಚಿಕಿತ್ಸೆಗುಂಟು 1,100 ರೂ. ಪ್ರೋತ್ಸಾಹಧನ
Advertisement
ಯಾವುದಕ್ಕೆ ಎಷ್ಟು ಶುಲ್ಕ?
ವಿಲೀನಗೊಂಡ ನಂತರ ಹೆಜಮಾಡಿ ಟೋಲ್ ಗೇಟ್ ಪಾಸ್ ಆಗಲು ಕಾರಿಗೆ 100 ರೂ. ಶುಲ್ಕ ವಿಧಿಸಲಾಗುತ್ತದೆ. ಈ ಹಿಂದೆ ಹೆಜಮಾಡಿಯಲ್ಲಿ ಕಾರ್‌ಗೆ (Car) ಏಕಮುಖ ಪಾಸಿಂಗ್ 40 ರೂ. ನಿಗದಿಮಾಡಲಾಗಿತ್ತು. ಬಸ್ ಮತ್ತು ಟ್ರಕ್ ಗಳಿಗೆ ಏಕಮುಖ ಪಾಸಿಂಗ್‌ಗೆ ನಿಗದಿಪಡಿಸಲಾಗಿದ್ದ 210 ರೂ. ಶುಲ್ಕವನ್ನು 355 ರೂ.ಗಳಿಗೆ ಹೆಚ್ಚಿಸಲಾಗಿದೆ. ಭಾರೀ ಗಾತ್ರದ ಮತ್ತು ಮಲ್ಟಿ ಆಕ್ಸೆಲ್‌ನ 225 ರೂ. ಶುಲ್ಕವನ್ನು 555 ರೂ.ಗಳಿಗೆ ಹಾಗೂ 70 ರೂ. ನಿಗದಿಯಾಗಿದ್ದ ಲಘು ವಾಣಿಜ್ಯ ಮತ್ತು ಸರಕು ವಾಹನಗಳಿಗೆ 170 ರೂ. ದರ ನಿಗದಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.