ಚಿಕ್ಕಬಳ್ಳಾಪುರ: ಬಿಜೆಪಿ (BJP) ಅವರಂತೆ ಲೂಟಿ ಹೊಡೆದು ನಾನು ರಾಜಕೀಯ (Politics) ಮಾಡಿಲ್ಲ, ಅಕ್ರಮ ಮಾಡಿ ಜೀವನ ಮಾಡಿಲ್ಲ. ಇವರಿಂದ ಸರ್ಟಿಫಿಕೇಟ್ ತಗೋಬೇಕಾಗಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ.
`ರಕ್ತ ಹೀರುವಂತಹ ನಾಯಕ’ ಹೆಚ್‌ಡಿಕೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದ ಸಚಿವ ಅಶ್ವಥ್ ನಾರಾಯಣ್ (Ashwath Narayan) ಅವರಿಗೆ ಹೆಚ್‌ಡಿಕೆ ತಿರುಗೇಟು ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪಂಚರಥಯಾತ್ರೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ಈಗಿರುವ ಆರ್‌ಎಸ್‌ಎಸ್ ಕಳ್ಳರ ಆರ್‌ಎಸ್‌ಎಸ್ : ಪರಿಷತ್ ಸದಸ್ಯ ರಾಜೇಂದ್ರ ಕಿಡಿ
ರಕ್ತ ಹಿರೋದು ಅಂದ್ರೆ ಏನು? ಯಾರು ಯಾರ ರಕ್ತ ಹೀರಿದ್ದಾರೆ ಅನ್ನೋದು ಗೊತ್ತಾಗಬೇಕಲ್ವಾ? ಮಂಡ್ಯದಲ್ಲಿ ಕಾಂಗ್ರೆಸ್ ಆಡಳಿತ ಸರ್ಕಾರ ಇದ್ದಾಗ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಆದಾಗ ಈ ಯಾವ ವ್ಯಕ್ತಿಗಳು ಹೋಗಿ ಜನರ ಕಷ್ಟ ಸುಖ ಕೇಳಲಿಲ್ಲ. 200 ಕುಟುಂಬಕ್ಕೂ ಪರಿಹಾರ ಅರ್ಥಿಕ ನೆರವು ಕೊಟ್ಟಿದ್ದು ಕುಮಾರಸ್ವಾಮಿ. ರಕ್ತ ಹಿರೋದು ಎಲ್ಲಿಂದ ಬಂತು ಅಂತ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಲೈಗರ್ ಸೋಲಿನ ನಂತರ ʻಸಲಾರ್ʼ ಚಿತ್ರ ಸೇರಿಕೊಂಡ ವಿಜಯ್ ದೇವರಕೊಂಡ
ನಾನು ಸಿಎಂ ಆದಾಗ 9,000 ಕೋಟಿ ಹಣವನ್ನ ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ಕೊಟ್ಟಿದ್ದೇನೆ. ಆದರೆ ಬಜೆಟ್ ಮಂಡಿಸುವಾಗ ಇದು ಮಂಡ್ಯ ಜಿಲ್ಲೆ ಬಜೆಟ್ ಅಂತ ಕೇವಲವಾಗಿ ಮಾತಾಡಿದ್ರು. ರಕ್ತ ಹೀರುವಂತಹವರು ಅಂತ ಮಾತಾಡುವವರಿಗೆ ನೈತಿಕತೆ ಎಲ್ಲಿದೆ? ಇವರ ರೀತಿ ಲೂಟಿ ಹೊಡೆದು ನಾನು ರಾಜಕೀಯ ಮಾಡಿದ್ದನಾ? ಅಕ್ರಮ ಮಾಡಿ ನಾನು ಜೀವನ ಮಾಡಿಲ್ಲ. ಇವರಿಂದ ಸರ್ಟಿಫಿಕೇಟ್ ತಗೋಬೇಕಾಗಿಲ್ಲ ನಾನು. 2023ರ ಚುನಾವಣೆಯಲ್ಲಿ ಯರ‍್ಯಾರಿಗೆ ಯಾವ ಸರ್ಟಿಫಿಕೇಟ್ ಕೊಟ್ಟು ಯರ‍್ಯಾರನ್ನ ಎಲ್ಲಿಗೆ ಕಳಿಸಬೇಕೋ ಜನ ತೀರ್ಮಾನ ಮಾಡ್ತಾರೆ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ತರಗತಿಯಲ್ಲಿ ವಿದ್ಯಾರ್ಥಿಯನ್ನ `ಟೆರರಿಸ್ಟ್’ ಎಂದ ಪ್ರೊಫೆಸರ್ ಅಮಾನತು
`ಎವರಿ ಡೇ ಈಸ್ ನಾಟ್ ಸಂಡೇ.. ಕೆ.ಆರ್.ಪೇಟೆ ಸೇರಿ 7 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲೋದ್ರಲ್ಲಿ ಅನುಮಾನ ಇಲ್ಲ. ಬೆಂಗಳೂರಲ್ಲಿ ಲೂಟಿ ಹೊಡೆದು ಜೀವನ ಮಾಡೋವರು. ಕಾರ್ಪೊರೇಷನ್ ಕಚೇರಿ ಕಡತಗಳಿಗೆ ಬೆಂಕಿ ಇಡುವವರು. ಇವರನ್ನು ಜನ ಪೋಷಿಸುತ್ತಾರಾ. ಬಹುವಚನದಲ್ಲಿ ಗೌರವದಿಂದ ಮಾತನಾಡುವ ಸಂಸ್ಕೃತಿಯೇ ಇಲ್ಲ. ದುಡ್ಡಿನ ಮದದಿಂದ ಈ ರೀತಿ ಮಾತನಾಡುತ್ತಾರೆ. ಬಿಜೆಪಿ ಯಲ್ಲಿರೋರು ಸುಲಭವಾಗಿ ನಾಡಿನ ಸಂಪತ್ತು ಲೂಟಿ ಹೊಡೆದು ಮಾಡೋ ಪದ ಬಳಕೆಗೆ ಜನರ ತಕ್ಕ ತೀರ್ಮಾನ ಕೊಡ್ತಾರೆ ಎಂದು ಕುಟುಕಿದ್ದಾರೆ.
ಪಂಚರತ್ನ ಯಾತ್ರೆ ಆರಂಭದಿಂದ ಬಿಜೆಪಿಯವರಿಗೆ ನಡುಕ ಉಂಟಾಗಿದೆ. ಪಂಚರತ್ನ ರಥಯಾತ್ರೆ ಯಶಸ್ಸು ನೋಡಿ ಸಹಿಸಲು ಆಗುತ್ತಿಲ್ಲ. ಹೀಗಾಗಿ ಇದು ಇಷ್ಟಕ್ಕೆ ನಿಲ್ಲಿಸಲ್ಲ. ನನ್ನನ್ನೇ ಟಾರ್ಗೆಟ್ ಮಾಡಿ ಮಾತನಾಡುತ್ತಾರೆ. ರಾಮನಗರ ಚನ್ನಪಟ್ಟಣ ಬಿಟ್ಟು ಹೊರಗೆ ಹೋಗದ ಹಾಗೆ ಕಟ್ಟಿ ಹಾಕಲು ಶತಪ್ರಯತ್ನ ಮಾಡ್ತಿದ್ದಾರೆ. ನನಗೆ ವೈಯುಕ್ತಿಕ ಚುನಾವಣೆಗಿಂತ ನಾಡಿನ ಜನರ ಹಿತ ಮುಖ್ಯ. ಹೀಗಾಗಿ ನನ್ನ ರಥಯಾತ್ರೆ ಯನ್ನ ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.