ಮಂಡ್ಯ: ಪೇ ಸಿಎಂ (Pay CM) ಅಂದರೆ, ಪೇ ಕಾಂಗ್ರೆಸ್ ಮೇಡಂ (Pay Congress Madam) ಅಂತ ಕಾಂಗ್ರೆಸ್‍ನವರೇ ಪ್ರೂವ್ ಮಾಡಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್‍ಗೆ (Congress) ಸಂಸದ ಪ್ರತಾಪ್ ಸಿಂಹ (Pratap Simha) ತಿರುಗೇಟು ನೀಡಿದ್ದಾರೆ.
Advertisement
ಕಾಂಗ್ರೆಸ್‍ನಿಂದ ಪೇ ಸಿಎಂ ಪೋಸ್ಟರ್ ಅಂಟಿಸಿದ ವಿಚಾರವಾಗಿ ಮದ್ದೂರಿನಲ್ಲಿ (Maddur) ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಪೇ ಸಿಎಂ ಅಂದ್ರೆ ಪೇ ಕಾಂಗ್ರೆಸ್ ಮೇಡಂ ಅಂತ. ರಾಜಕಾರಣದಲ್ಲಿ ಅಭಿವೃದ್ಧಿ ವಿಚಾರ ಇಟ್ಟುಕೊಂಡು ಹೊಡೆದಾಡಬೇಕು. ನಾನು ಜಾಸ್ತಿ ಅಭಿವೃದ್ಧಿ ಕೆಲಸ ಮಾಡುತ್ತೇನೆ, ನಾನು ಜಾಸ್ತಿ ಮಾಡುತ್ತೇನೆ ಎಂಬ ಹಠ ಇರಬೇಕು. ಅದನ್ನು ಬಿಟ್ಟು ಜಾತಿ-ಜಾತಿ ಎತ್ತಿಕಟ್ಟುವುದು, ಇನ್ನೊಬ್ಬರನ್ನು ಅವಾಚ್ಯ ಶಬ್ದದಿಂದ ನಿಂದಿಸುವುದು. ಪರಸ್ಪರ ವೈಯಕ್ತಿಕ ನಿಂದನೆ ಮಾಡಿಕೊಳ್ಳುವುದು, ಇದೆಲ್ಲಾ ಹಳೆ ಕಾಲದಿಂದ ನಡೆದುಕೊಂಡು ಬಂದಿರುವ ರಾಜಕಾರಣ. ಈಗ ಕೂಡ ಕೆಲವರು ಅದನ್ನೇ ಮುಂದುವರಿಸುತ್ತಿದ್ದಾರೆ. ಜನರು ದಡ್ಡರಲ್ಲ, ಬುದ್ದಿವಂತರಿದ್ದಾರೆ. ಜನರಿಗೆ ಅಭಿವೃದ್ಧಿ ಕೆಲಸ ಬೇಕು ಅಷ್ಟೇ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: 2 ವರ್ಷಗಳ ಬಳಿಕ ಪ್ರವಾಸಿಗರನ್ನು ಸ್ವಾಗತಿಸಿದ ಭೂತಾನ್- ಭಾರತೀಯರಿಗೆ ದಿನಕ್ಕೆ 1,200 ರೂ. ಶುಲ್ಕ
Advertisement
Advertisement
ಒಬ್ಬ ರೈತನು ಕೂಡ ತನ್ನ ಮಗ ವಿದ್ಯಾವಂತನಾಗಿ ಕೆಲಸಕ್ಕೆ ಸೇರಬೇಕು ಅಂತ ಬಯಸುತ್ತಾನೆ. ಮಕ್ಕಳ ಬಗ್ಗೆ ಯೋಚನೆ ಮಾಡಿ ಉದ್ಯೋಗ ಸೃಷ್ಟಿಸುವ ಕೆಲಸ ಮಾಡಿ. ಅದನ್ನು ಬಿಟ್ಟು ಜಾತಿ, ಜಾತಿ ಎತ್ತಿಕಟ್ಟಿ ಹೊಡೆದಾಡುವ ಕೆಲಸ ಮಾಡಬಾರದು. ಇದು ಮೋದಿಜೀ (Narendra Modi) ಅವರ ಕಾಲ ಅಭಿವೃದ್ಧಿಗಷ್ಟೇ ಮೊದಲ ಆದ್ಯತೆ. ಕಾಂಗ್ರೆಸ್‍ನವರು 5 ವರ್ಷ ಅಧಿಕಾರದಲ್ಲಿದ್ದರು. ಯಾವ ಘನ ಕಾರ್ಯ ಮಾಡಿದ್ದಾರೆ ತೋರಿಸಲಿ. ಘನ ಕಾರ್ಯ ಮಾಡಿದ್ದರೆ ಕೇಳಿ. ಕಾಂಗ್ರೆಸ್‍ನವರು ಪೇ ಸಿಎಂ ಅಂತಾ ಮಾಡಿದ್ದಾರೆ. ಆ ಮೂಲಕ ಪೇ ಸಿಎಂ ಅಂದರೆ, ಪೇ ಕಾಂಗ್ರೆಸ್ ಮೇಡಂ ಅಂತ ಕಾಂಗ್ರೆಸ್‍ನವರೇ ಪ್ರೂವ್ ಮಾಡಿದ್ದಾರೆ. ವೈಯಕ್ತಿಕವಾಗಿ ಬಯ್ಯುವುದನ್ನು ಎಲ್ಲರೂ ನಿಲ್ಲಿಸಬೇಕು ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: PayCM ಪೋಸ್ಟರ್ ಅಂಟಿಸಲು ಕಾಲೇಜು ವಿದ್ಯಾರ್ಥಿಗಳ ಬಳಕೆ – ಸ್ಟೂಡೆಂಟ್ಸ್ ಸೇರಿ 6 ಮಂದಿ ವಿರುದ್ಧ ಎಫ್‌ಐಆರ್
Advertisement
ಇದೇ ವೇಳೆ ಇತ್ತೀಚೆಗಷ್ಟೇ ಮೈಸೂರು – ಬೆಂಗಳೂರು (Mysuru-Bengaluru) ರಾಷ್ಟ್ರೀಯ ಹೆದ್ದಾರಿ (National Highway) ಕಾಮಗಾರಿ ಅವೈಜ್ಞಾನಿಕ ಎಂಬ ಸಂಸದೆ ಸುಮಲತಾ (Sumalatha) ಆರೋಪಕ್ಕೆ, ಮಂಡ್ಯ, ರಾಮನಗರ ಜಿಲ್ಲೆಯ ಯಾರೇ ಬಂದು ಹೇಳಿದರೂ ಕೆಲಸ ಮಾಡಿಕೊಡುತ್ತೇನೆ. ಅವೈಜ್ಞಾನಿಕದ ಬಗ್ಗೆ ನನಗೆ ಗೊತ್ತಿಲ್ಲ, ನಾನು ಇಂಜಿನಿಯರ್ ಅಲ್ಲ. ನಾನು ಜರ್ನಲಿಸಂ (Journalism) ಓದಿರುವವನು. ಬೇರೆಯವರಿಗೆ ಏನೋ ಅವೈಜ್ಞಾನಿಕ ಅನಿಸಿರಬಹುದು. ಆದರೆ ಈಗ ರಸ್ತೆಯಲ್ಲಿ ಜನ ಓಡಾಡುತ್ತಿದ್ದಾರೆ. ಓಡಾಡುತ್ತಿರುವವರೆಲ್ಲರೂ ರಸ್ತೆ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.