ಟಾಲಿವುಡ್ ನಟ ಪವನ್ ಕಲ್ಯಾಣ್ (Pawan Kalyan) ಈಗ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಅರ್ಧಕ್ಕೆ ಶೂಟಿಂಗ್ ಮಾಡಿದ್ದ ಪವನ್ ಕಲ್ಯಾಣ್ ಮತ್ತು ಶ್ರೀಲೀಲಾ (Sreeleela) ನಟನೆಯ ಸಿನಿಮಾ ನಿಂತು ಹೋಗಿದ್ಯಾ? ಎಂಬೆಲ್ಲಾ ವದಂತಿಗೆ ಚಿತ್ರತಂಡದ ಕಡೆಯಿಂದಲೇ ಉತ್ತರ ಸಿಕ್ಕಿದೆ. ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ನಿಂತು ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ:ಫ್ಯಾಮಿಲಿ ಫೋಟೋ ಹಂಚಿಕೊಂಡ ದರ್ಶನ್ ಪತ್ನಿ- ಯಾರ ಕಣ್ಣು ನಿಮ್ಮೇಲೆ ಬೀಳದಿರಲಿ ಎಂದ ಫ್ಯಾನ್ಸ್
ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯ ‘ರಾಬಿನ್‌ಹುಡ್’ (Robinhood) ಚಿತ್ರದ ಪ್ರಚಾರದ ವೇಳೆ, ಪವನ್ ಹಾಗೂ ಶ್ರೀಲೀಲಾ ನಟನೆಯ ‘ಉಸ್ತಾದ್ ಭಗತ್ ಸಿಂಗ್’ (Ustad Bhagat Singh) ಸಿನಿಮಾ ಬಗ್ಗೆ ಕೇಳಲಾಗಿದೆ. ಈ ಸಿನಿಮಾ ನಿಂತು ಹೋಗಿದ್ಯಾ? ಎಂದು ಕೇಳಲಾಗಿದೆ. ಈ ಚಿತ್ರ ಖಂಡಿತ ನಿಂತು ಹೋಗಿಲ್ಲ. ಇದನ್ನು ನಾವು ಪೂರ್ಣಗೊಳಿಸುತ್ತೇವೆ. ನಾವು ಪವನ್ ಕಲ್ಯಾಣ್ ಅವರ ಡೇಟ್ಸ್‌ಗಾಗಿ ಕಾಯುತ್ತಿದ್ದೇವೆ. ಇದೇ ವರ್ಷ ಈ ಚಿತ್ರದ ಶೂಟಿಂಗ್ ಅನ್ನು ಪೂರ್ಣಗೊಳಿಸಲಿದ್ದೇವೆ. ಮುಂದಿನ ಚಿತ್ರ ರಿಲೀಸ್ ಮಾಡುತ್ತೇವೆ. ನಮ್ಮ ನಿರ್ದೇಶಕ ಹ್ಯಾರಿಸ್ ಅದ್ಭುತ ಕತೆಯನ್ನು ಮಾಡಿಕೊಂಡಿದ್ದಾರೆ ಎಂದು ನಿರ್ಮಾಪಕ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಇದನ್ನೂ ಓದಿ:ಉದ್ಯಮಿ ಮಗಳೊಂದಿಗೆ ಪ್ರಭಾಸ್ ಮದುವೆ ವಿಚಾರ ಸುಳ್ಳು- ಆಪ್ತರಿಂದ ಸ್ಪಷ್ಟನೆ
ಅಂದಹಾಗೆ, ‘ಹರಿಹರ ವೀರ ಮಲ್ಲು’ ಸಿನಿಮಾವನ್ನು ಇತ್ತೀಚೆಗೆ ಪವನ್ ಕಲ್ಯಾಣ್ ಮುಗಿಸಿಕೊಟ್ಟಿದ್ದಾರೆ. ‘ಓಜಿ’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಚಿತ್ರಗಳು ಇನ್ನೂ ಪೂರ್ಣಗೊಳ್ಳಬೇಕಿದೆ.