ಟಾಲಿವುಡ್ ನಟ ಹಾಗೂ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಡಿಸಿಎಂ ಸ್ಥಾನಕ್ಕೇರಿದ ಬಳಿಕ ಪವನ್ ರಾಜಕೀಯದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿ ಬಿಟ್ಟಿದ್ದರು. ಹೀಗಾಗಿ ಸಿನಿಮಾಗಳಿಗೆ ಬ್ರೇಕ್ ಕೊಟ್ಟಿದ್ದರು. ಇದೀಗ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಹರಿ ಹರ ವೀರ ಮಲ್ಲು’ ಮೊದಲ ಹಾಡು ರಿಲೀಸ್ ಆಗಿದೆ.
The Musical Storm has arrived with a bang! 🌪 12 MILLION+ VIEWS and counting for #HariHaraVeeraMallu 1st Single! 💥
TRENDING TOP on #YouTubeMusic – https://t.co/5ObGwP2Rc6#MaataVinaali #BaatNirali #KekkanumGuruve #MaathukeLayya #KelkkanamGuruve
Sung by the one and only,… pic.twitter.com/Tw352KEA7Y
— Hari Hara Veera Mallu (@HHVMFilm) January 17, 2025
Advertisement
ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ‘ಹರಿ ಹರ ವೀರ ಮಲ್ಲು’ ಸಿನಿಮಾದ ಮೊದಲ ಹಾಡು ಅನಾವರಣ ಮಾಡಲಾಗಿದೆ. ಮಾತು ಕೇಳಯ್ಯ ಎಂಬ ಹಾಡು ರಿಲೀಸ್ ಆಗಿದೆ. ಕನ್ನಡ ಮಾತ್ರವಲ್ಲ ಎಲ್ಲಾ ಭಾಷೆಯಲ್ಲಿಯೂ ಸಾಂಗ್ ರಿಲೀಸ್ ಆಗಿದೆ. ಜನಪದ ಶೈಲಿಯಲ್ಲಿ ಮೂಡಿ ಬಂದಿರುವ ಗೀತೆಗೆ ಆಸ್ಕರ್ ವಿಜೇತ ಎಂ ಎಂ ಕೀರವಾಣಿ ಟ್ಯೂನ್ ಹಾಕಿದ್ದಾರೆ. ಕನ್ನಡ ಹಾಡಿಗೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದಾರೆ. ಇದನ್ನೂ ಓದಿ:BBK 11: ಕ್ಯಾಪ್ಟನ್ ಹನುಮಂತ ಅಚ್ಚರಿಯ ನಿರ್ಧಾರ- ಫಿನಾಲೆ ವಾರಕ್ಕೆ ಕಾಲಿಟ್ಟ ಮೋಕ್ಷಿತಾ
Advertisement
Advertisement
‘ಹರಿ ಹರ ವೀರ ಮಲ್ಲು’ವಾಗಿ ಪವನ್ ಕಲ್ಯಾಣ್ ಸಿನಿಮಾದಲ್ಲಿ ಅಬ್ಬರಿಸಿದ್ದಾರೆ. 17ನೇ ಶತಮಾನದಲ್ಲಿ ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ನಾಯಕನಾಗಿ ನಟ ಮಿಂಚಿದ್ದಾರೆ. ಜ್ಯೋತಿ ಕೃಷ್ಣ ಮತ್ತು ಕ್ರಿಶ್ ನಿರ್ದೇಶನದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಮೂಡಿ ಬಂದಿದೆ. ಬಾಬಿ ಡಿಯೋಲ್, ನಿಧಿ, ನೋರಾ ಫತೇಹಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.