Special- ಪವಿತ್ರಾ ಲೋಕೇಶ್, ನರೇಶ್ ಲವ್ ಸ್ಟೋರಿಗೆ ಅವರೇ ನಾಯಕ-ನಾಯಕಿ

Public TV
1 Min Read
pavitra lokesh 1 1

ತೆಲುಗಿನ ನಟ ನರೇಶ್ (Naresh) ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ (Pavitra Lokesh) ಸಂಬಂಧದ (Love Story) ಕುರಿತು ಯಾವ ವಿಷಯವೂ ಗುಟ್ಟಾಗಿ ಉಳಿದಿಲ್ಲ. ಕೆಲವನ್ನು ನರೇಶ್ ಪತ್ನಿ ರಮ್ಯಾ ಬಿಚ್ಚಿಟ್ಟಿದ್ದರೆ, ಇನ್ನೂ ಕೆಲವನ್ನು ನರೇಶ್ ಅವರೇ ಹೇಳಿಕೊಂಡಿದ್ದಾರೆ. ಮತ್ತಷ್ಟು ವಿಷಯಗಳು ಮಾಧ್ಯಮಗಳ ಕಾರಣದಿಂದಾಗಿ ಬಹಿರಂಗಗೊಂಡಿವೆ. ಈ ಸಂಬಂಧದ ಮೇಲೆಯೇ ತೆಲುಗಿನಲ್ಲಿ ಸಿನಿಮಾ (Cinema) ಮಾಡುತ್ತಿದ್ದಾರೆ ನಿರ್ದೇಶಕ ಎಂ.ಆರ್.ರಾಜು. ಈ ಸಿನಿಮಾಗೆ ಸ್ವತಃ ಪವಿತ್ರಾ ಲೋಕೇಶ್ ಮತ್ತು ನರೇಶ್ ನಾಯಕ ಹಾಗೂ ನಾಯಕಿ ಎನ್ನಲಾಗುತ್ತಿದೆ.

pavitra

ಒಂದು ಮೂಲಗಳ ಪ್ರಕಾರ ಈಗಾಗಲೇ ಸದ್ದಿಲ್ಲದೇ ಸಿನಿಮಾ ಮಾಡಿದ್ದಾರಂತೆ ನಿರ್ದೇಶಕ ರಾಜು. ಬಹುತೇಕ ಶೂಟಿಂಗ್ ಮುಗಿಸಿ ಸಂಕಲನದ ಕೆಲಸದಲ್ಲಿ ಬ್ಯುಸಿಯಾಗಿದ್ದಾರಂತೆ.  ಹೊಸ ವರ್ಷದ ದಿನದಂದು ನರೇಶ್ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಪವಿತ್ರಾ ಲೋಕೇಶ್ ಗೆ ಮುತ್ತಿಡುವ ಮೂಲಕ ಮದುವೆ ವಿಚಾರವನ್ನು ಪ್ರಸ್ತಾಪಿಸಿದ್ದರು. ಆ ವಿಡಿಯೋ ಇದೇ ಸಿನಿಮಾದ್ದು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ರಮ್ಯಾಗಿಂತ ಸಾನ್ಯಗೆ ವಯಸ್ಸಾಯ್ತಾ? ಕಾಲೆಳೆದ ನೆಟ್ಟಿಗರು

pavitra lokesh

ಈ ಸಿನಿಮಾದಲ್ಲಿ ನರೇಶ್ ಬದುಕು, ಎರಡನೇ ಪತ್ನಿ ರಮ್ಯಾ ಜೊತೆಗಿನ ಮದುವೆ. ಅದಕ್ಕೂ ಮೊದಲಿನ ಮದುವೆ ಹಾಗೂ ಪವಿತ್ರಾ ಲೋಕೇಶ್ ತಮ್ಮ ಬಾಳಿನಲ್ಲಿ ಬಂದದ್ದು ಹೇಗೆ? ಹೀಗೆ ಎಲ್ಲ ಸಂಗತಿಗಳನ್ನು ಚಿತ್ರಕಥೆಯಲ್ಲಿ ಬೆರೆಸಿದ್ದಾರಂತೆ. ಸದ್ಯದಲ್ಲೇ ಈ ಸಿನಿಮಾವನ್ನು ರಿಲೀಸ್ ಮಾಡುವ ಪ್ಲ್ಯಾನ್ ಕೂಡ ಹೊಂದಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಈ ಸುದ್ದಿ ಬಿಸಿ ಬಿಸಿ ದೋಸೆಯಂತೆಯೂ ಖರ್ಚಾಗುತ್ತಿದೆ.

pavitra lokesh 2

ಈ ಸಿನಿಮಾ ಬಗ್ಗೆ ನಿರ್ದೇಶಕರಾಗಲಿ ಅಥವಾ ನರೇಶ್ ಮತ್ತು ಪವಿತ್ರಾ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಸಿನಿಮಾ ಸಿದ್ಧವಾಗಿದ್ದು ಸತ್ಯ ಎನ್ನುತ್ತಾರೆ ಅವರ ಆಪ್ತರು. ಆ ವಿಡಿಯೋ ತುಣುಕನ್ನೇ ಅವರು ಹೊಸ ವರ್ಷದ ದಿನದಂದು ಹಂಚಿಕೊಂಡಿದ್ದು ಎಂದೂ ಹೇಳುತ್ತಾರೆ. ತಮ್ಮ ಪ್ರೇಮವನ್ನು ನರೇಶ್ ಸಾಬೀತು ಪಡಿಸುತ್ತಾ ಬಂದರೂ, ಪವಿತ್ರಾ ಮಾತ್ರ ಅಧಿಕೃತವಾಗಿ ಈವರೆಗೂ ಎಲ್ಲಿಯೂ ಹೇಳಿಕೊಂಡಿಲ್ಲ. ಹಾಗಾಗಿ ಸಿನಿಮಾ ಬಗ್ಗೆ ಕುತೂಹಲವಂತೂ ಮೂಡಿದೆ.

Share This Article