ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ಮೇ 20ರಂದು ಕೋರ್ಟ್ನಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ (Pavithra Gowda) ಮುಖಾಮುಖಿಯಾಗಿದ್ದರು. ಈ ಭೇಟಿಯ ಬಳಿಕ ನಟಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಸಮಯ, ತಾಳ್ಮೆ, ಮೌನದ ಮಹತ್ವ ತಿಳಿಸುವ ಬಗ್ಗೆ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನಮ್ಮ ಜಗಳ ನಮ್ಮಲ್ಲೇ ಇರಬೇಕಿತ್ತು, ನಾನು ಸತ್ತರೂ ಯಾರೂ ಕಾರಣರಲ್ಲ: ಸಹ ಕಲಾವಿದೆ
ಅದಷ್ಟೇ ಅಲ್ಲ, ಮತ್ತೊಂದು ಸ್ಟೋರಿಯಲ್ಲಿ ಶ್ರೀಕೃಷ್ಣನ ಫೋಟೋ ಶೇರ್ ಮಾಡಿ, ಎಲ್ಲವನ್ನು ಕಳೆದುಕೊಂಡ ಹಾಗೆ ಸ್ವಲ್ಪ ದಿನ ನಟಿಸಿ ನೋಡು ನಿನ್ನವರು ಯಾರು ಎಂದು ತಿಳಿಯುತ್ತದೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ದರ್ಶನ್ (Darshan) ಜೊತೆಗಿನ ಮುಖಾಮುಖಿಯ ಬಳಿಕ ಪವಿತ್ರಾ (Pavithra Gowda) ತಾಳ್ಮೆಯ ಬಗ್ಗೆ ಪೋಸ್ಟ್ ಮಾಡಿರೋದು ಚರ್ಚೆಗೆ ಗ್ರಾಸವಾಗಿದೆ. ಯಾರಿಗೆ ಪವಿತ್ರಾ ಟಾಂಗ್ ಕೊಡುತ್ತಿದ್ದಾರೆ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.