ಪವಿತ್ರಾ ಗೌಡ, ದರ್ಶನ್ (Darshan) ಅವರ ಪತ್ನಿ ಅಲ್ಲ ಎಂದು ನಗರ ಪೊಲೀಸ್ ಆಯುಕ್ತರಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ.
2003ರಲ್ಲಿ ದರ್ಶನ್ ಮತ್ತು ನಾನು ಮದುವೆ ಆಗಿದ್ದೀವಿ. ಆ ವರ್ಷದ ಮೇ 19 ರಂದು ದರ್ಶನ್ ಅವರ ಧರ್ಮಪತ್ನಿಯಾಗಿದ್ದೀನಿ. ನಮ್ಮಿಬ್ಬರಿಗೆ ಒಬ್ಬ ಮಗ ಇದ್ದಾನೆ. ಪವಿತ್ರಗೌಡ (Pavithra Gowda), ಸಂಜಯ್ ಸಿಂಗ್ ಎಂಬವರನ್ನು ಮದುವೆ ಆಗಿದ್ದಾರೆ. ಅವರಿಬ್ಬರಿಗೂ ಒಬ್ಬಳು ಹೆಣ್ಣು ಮಗಳಿದ್ದಾಳೆ ಎಂದು ವಿಜಯಲಕ್ಷ್ಮಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ದರ್ಶನ್ ಪ್ರಕರಣ: ಎಲ್ಲವನ್ನೂ ಕಾನೂನು ನೋಡಿಕೊಳ್ಳುತ್ತೆ ಎಂದ ಜುಗಾರಿ ಅವಿನಾಶ್
ನೀವು ಮಾಧ್ಯಮಗೋಷ್ಠಿಯಲ್ಲಿ ದರ್ಶನ್ ಅವರ ಪತ್ನಿ ಪವಿತ್ರಗೌಡ ಅಂತಾ ಹೇಳಿದ್ದೀರಿ. ಗೃಹ ಸಚಿವರೂ ಕೂಡ ಒಮ್ಮೆ ಅದನ್ನೇ ಉಚ್ಛಾರಣೆ ಮಾಡಿದ್ದಾರೆ. ಹೀಗಾಗಿ ಪೊಲೀಸ್ ರೆಕಾರ್ಡ್ ಅಲ್ಲಿ ಪವಿತ್ರಗೌಡ ದರ್ಶನ್ ಅವರ ಪತ್ನಿ, ದರ್ಶನ್ ಅವರನ್ನು ಮದುವೆಯಾಗಿದ್ದಾರೆ ಎಂದು ಉಲ್ಲೇಖಿಸಬೇಡಿ. ದಾಖಲೆಗಳಲ್ಲಿ ದರ್ಶನ್ ಅವರ ಪತ್ನಿ ಎಂದು ಬರೆಯಬೇಡಿ ಎಂದು ಮನವಿ ಮಾಡಿದ್ದಾರೆ.
ಈ ಪತ್ರ ನಗರ ಪೊಲೀಸ್ ಆಯುಕ್ತ ದಯಾನಂದ್ ಅವರ ಕಚೇರಿಗೆ ತಲುಪಿದೆ. ಇದನ್ನೂ ಓದಿ: ದರ್ಶನ್ ಪ್ರಕರಣದ ಕುರಿತು ನಟಿ ಮಯೂರಿ ರಿಯಾಕ್ಷನ್