– ಪವಿತ್ರಾ ಗೌಡ ಬಗ್ಗೆ ಕೆಟ್ಟ ಕಾಮೆಂಟ್ಸ್‌ಗೆ ಬೇಸರ ಹೊರಹಾಕಿದ ಪವಿತ್ರಾ ಪುತ್ರಿ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿ ಬಳಿಕ ಜಾಮೀನಿನ ಮೇಲೆ ಹೊರಬಂದಿರುವ ಪವಿತ್ರಾ ಗೌಡ (Pavithra Gowda) ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾಗುತ್ತಿರುವ ಕಾಮೆಂಟ್‌ಗಳಿಗೆ ಪವಿತ್ರಾ ಗೌಡ ಮಗಳು ಖುಷಿ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ಮಧ್ಯರಾತ್ರಿ ಅಮ್ಮನ ನೆನೆದು ಖುಷಿ ಗೌಡ ಸುದೀರ್ಘ ಪೋಸ್ಟ್‌ವೊಂದನ್ನು ಹಾಕಿದ್ದಾರೆ.
Advertisement
ಪವಿತ್ರಾ ಗೌಡ ಬಗ್ಗೆ ಕೆಟ್ಟ ಕಾಮೆಂಟ್ಸ್‌ಗಳಿಗೆ ನಾನು ಕೇರ್ ಮಾಡೋದಿಲ್ಲ. ನಾನು ಈ ರೀತಿ ಬರೆಯಬೇಕು ಅಂತ ಎಂದಿಗೂ ಯೋಚಿಸಲಿಲ್ಲ. ಆದರೆ, ನಿಮ್ಮ ಕಟು ಮಾತುಗಳು ಗಾಯ ಮಾಡಿದೆ. ನನ್ನ ತಾಯಿಯ ಬಗ್ಗೆ ಅಶ್ಲೀಲ ಕಾಮೆಂಟ್ಸ್, ಎಷ್ಟು ಅಂತ ದ್ವೇಷ ನನ್ನ ಹೃದಯವನ್ನು ಚುಚ್ಚಿದೆ ಎಂದು ನೋವಿನಿಂದ ನುಡಿದಿದ್ದಾರೆ.
Advertisement
Advertisement
ನಿಮಗ್ಯಾರಿಗೂ ಪವಿತ್ರಾ ಗೌಡ ಪರಿಚಯವಿಲ್ಲ. ಅಮ್ಮನ ಹೋರಾಟ, ತ್ಯಾಗಗಳು ನಿಮಗೆ ತಿಳಿದಿಲ್ಲ. ನನ್ನ ಅಮ್ಮ ಮೌನವಾಗಿ ಎದುರಿಸಿದ ಸವಾಲುಗಳು ನನಗೆ ಮಾತ್ರ ಗೊತ್ತು. ನನ್ನ ತಾಯಿ ನನ್ನ ಜಗತ್ತು, ನನ್ನ ಶಕ್ತಿ, ನನ್ನ ಸ್ಫೂರ್ತಿ ತಂದೆ ಜಾಗವನ್ನು ನನ್ನ ತಾಯಿ ತುಂಬಿಸಿದ್ದಾಳೆ ಎಂದು ತಾಯಿ ಪವಿತ್ರಾ ಗೌಡ ಕುರಿತು ಹೆಮ್ಮೆ ಪಟ್ಟಿದ್ದಾರೆ.
Advertisement
ನಾನು ಇನ್ನು ಚಿಕ್ಕವಳು, ಇನ್ನೂ ಪ್ರಪಂಚವನ್ನು ಅರ್ಥ ಮಾಡಿಕೊಳ್ಳೋದಕ್ಕೆ ಪ್ರಯತ್ನಿಸುತ್ತಿದ್ದೇನೆ. ಈ ಭಾರವನ್ನು ಹೊರಲು ಅಗಾಧವಾಗಿದೆ. ನನ್ನ ತಾಯಿಗೆ ಯಾರನ್ನೂ ನೋಯಿಸುವ ಉದ್ದೇಶವಿಲ್ಲ. ಯಾರು ಏನೇ ಹೇಳಿದ್ರು ಅಮ್ಮನೇ ನನ್ನ ಹೀರೋ. ಹೀಗೆಂದು ಪವಿತ್ರಾ ಗೌಡ ಕುರಿತು ಸುದೀರ್ಘ ಪತ್ರ ಬರೆದು ಪವಿತ್ರಾಗೆ ಟ್ಯಾಗ್ ಮಾಡಿದ್ದಾರೆ ಪುತ್ರಿ ಖುಷಿ ಗೌಡ.