ಈಗಾಗಲೇ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ, ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ‘ರುದ್ರಿ’ (Rudri) ಸಿನಿಮಾ ನೇರವಾಗಿ ಇಂದು ಬಿಡುಗಡೆ ಆಗಿದೆ. ನೇರವಾಗಿ ‘ನಮ್ಮ ಫ್ಲಿಕ್ಸ್ ಕನ್ನಡದ ಓಟಿಟಿ ಆಪ್’ (NAMMAFLIX) ನಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಿಸಿತ್ತು. ಅದರಿಂದ ನಿರ್ಮಾಪಕರು ಒಟಿಟಿಯಲ್ಲಿ ರಿಲೀಸ್ ಮಾಡಿದ್ದಾರೆ.
Advertisement
ಗೊಂಬೆಗಳ ಲವ್ ಖ್ಯಾತಿಯ ಪಾವನಾ (Pavana) ಈ ಸಿನಿಮಾದಲ್ಲಿ ಪ್ರಧಾನ ಪಾತ್ರ ಮಾಡಿದ್ದು, ಬಡಿಗೇರ ರಾಘವೇಂದ್ರ (Badigera Raghavendra) ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ. ಈಗಾಗಲೇ ಠಾಗೋರ್ ಅಂತಾರಾಷ್ಟ್ರೀಯ ಚಿತ್ರೋತ್ಸವ ಸೇರಿದಂತೆ ದೇಶ ವಿದೇಶಗಳ ಚಿತ್ರೋತ್ಸವದಲ್ಲಿ ರುದ್ರಿ ಭಾಗಿಯಾಗಿದೆ. ಅಲ್ಲಿ ಪ್ರದರ್ಶನ ಕಂಡಿದೆ. ಹಲವಾರು ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ.
Advertisement
Advertisement
ರುದ್ರಿ ಸಿನಿಮಾ 90ರ ದಶಕದ ಕಥೆ. ಆ ಕಾಲದಲ್ಲಿ ಇನ್ನೂ ಮಹಿಳೆಯರಿಗೆ ತಮ್ಮ ಮೇಲಿನ ದೌರ್ಜನ್ಯವನ್ನು ಹೇಳಿಕೊಳ್ಳುವಂತಹ ಧೈರ್ಯವಿರಲಿಲ್ಲ. ಅಂತಹ ಮಹಿಳೆಯೊಬ್ಬರ ಶೋಷಣೆಯ ಕಥೆಯನ್ನು ರುದ್ರಿ ಮೂಲಕ ಹೇಳಲು ಹೊರಟಿದ್ದಾರೆ ನಿರ್ದೇಶಕರು.
Advertisement
ಸಿ.ಆರ್. ಮಂಜುನಾಥ್ (Manjunath) ಅವರ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಸಾಧೂ ಕೋಕಿಲಾ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅನನ್ಯ ಭಟ್ ಅವರು ಹಾಡಿಗೆ ಧ್ವನಿಯಾಗಿದ್ದಾರೆ. ಸುಧಾ ಪ್ರಸನ್ನ ಸೇರಿದಂತೆ ಹಲವು ನುರಿತ ಕಲಾವಿದರ ತಂಡವೇ ತಾರಾಗಣದಲ್ಲಿದೆ.