ತುಮಕೂರು: ಪಳವಳ್ಳಿ ಕಟ್ಟೆಯ ಬಳಿ ಖಾಸಗಿ ಬಸ್ ಉರುಳಿ ಗಂಭೀರ ಗಾಯಗೊಂಡು ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬುಡ್ಡಾರೆಡ್ಡಿ ಗ್ರಾಮದ ಮಹೇಂದ್ರ (21) ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾನೆ.
ಬಸ್ ಅಪಘಾತದಲ್ಲಿ ಸ್ಥಳದಲ್ಲಿಯೇ 4 ಸಾವನ್ನಪ್ಪಿ, ಇಬ್ಬರು ಚಿಕಿತ್ಸೆಗೆ ತೆರಳುತ್ತಿದ್ದ ವೇಳೆ ಸಾವನ್ನಪ್ಪಿದರು. ಮಹೇಂದ್ರ ಸಾವಿನ ಮೂಲಕ ಮೃತರ ಸಾವಿನ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ.
Advertisement
Advertisement
ಮಹೇಂದ್ರ ಬೆನ್ನುಮೂಳೆ ಮುರಿದು, ತಲೆಗೆ ಗಂಭೀರವಾಗಿ ಪೆಟ್ಟಾಗಿ ಅರೆಪ್ರಜ್ಞಾವಸ್ಥೆಯಲ್ಲಿದ್ದರು. ಚಿಕಿತ್ಸೆಗೆ ಹಣವಿಲ್ಲದೆ ಪೋಷಕರು ಪರದಾಡಿದ್ದರು. ಈ ವೇಳೆ ಶಾಸಕರು ಸೇರಿದಂತೆ ಸಂಘಸಂಸ್ಥೆಗಳ ಮುಖಂಡರು ಹಣವನ್ನ ಒದಗಿಸಿದ್ದರು. ಜೊತೆಗೆ ಯುವಕನ ಸಂಪೂರ್ಣ ಚಿಕಿತ್ಸೆಯ ವೆಚ್ಚ ಸರ್ಕಾರವೇ ಭರಿಸಬೇಕೆಂದು ಶಾಸಕ ವೆಂಕಟರಮಣಪ್ಪ ಸದನದ ಬಾವಿಗಿಳಿದು ಪ್ರತಿಭಟನೆ ಕೂಡ ನಡೆಸಿದ್ದರು. ವಿಧಿ ಆಟವೇ ಬೇರೆಯಾಗಿ ಮಹೇಂದ್ರ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಬಸ್ ಪಲ್ಟಿ:8 ಮಂದಿ ಸಾವು
Advertisement
Advertisement
ಕುಟುಂಬವು ಇರುವ ಒಬ್ಬ ಮಗನ ಜೀವಕ್ಕಾಗಿ ಹಲವರ ಮುಂದೆ ಚಿಕಿತ್ಸೆಯ ಹಣಕ್ಕಾಗಿ ಕೈಚಾಚಿದ್ದರು. ತಾಲೂಕಿನಾದ್ಯಂತ ಹಾಗೂ ಸ್ವಗ್ರಾಮ ಬುಡ್ಡಾರೆಡ್ಡಿ ಹಳ್ಳಿ ಗ್ರಾಮದಲ್ಲಿ ಚಂದಾ ಸಂಗ್ರಹಿಸಿ ಚಿಕಿತ್ಸೆಗೆ ಹಣ ಕಳಿಸಲಾಗಿತ್ತು. ಇದನ್ನೂ ಓದಿ: ಮೊದಲೇ ಟಾರ್ಗೆಟ್ ರೀಚ್, ರಫ್ತಿನಲ್ಲಿ ಸಾಧನೆ – ಇದು ಆತ್ಮನಿರ್ಭರ್ ಭಾರತದ ಮೈಲುಗಲ್ಲು ಎಂದ ಮೋದಿ