ಕೀವ್: ಟ್ಯಾಟೂ ಎಂದರೆ ಇಂದಿನ ಯುವ ಪಿಳಿಗೆ ಅವರಿಗೆ ಸಖತ್ ಕ್ರೇಜ್ ಇದ್ದೆ ಇರುತ್ತದೆ. ಆದರೆ ಇದೀಗ ಯುದ್ಧಪೀಡಿತ ಉಕ್ರೇನ್‍ಲ್ಲಿ ದೇಶ ಪ್ರೇಮ ಸಾರುವ ಟ್ಯಾಟೂ ಕ್ರೇಜ್ ಹೆಚ್ಚಾಗಿದೆ.
ಉಕ್ರೇನಿನ ಟ್ಯಾಟೂ ಪಾರ್ಲರ್‌ಗಳಲ್ಲಿ ಜನರು ತಮ್ಮ ಮೈಮೇಲೆ ಉಕ್ರೇನ್ ಬಾವುಟ, ಸೇನೆಯ ಚಿಹ್ನೆ, ಯುದ್ಧವಿಮಾನ ಚಿತ್ರ ಮತ್ತಿತರ ಚಿಹ್ನೆಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ದೇಶಪ್ರೇಮ ಸಾರುವ ಫಲಕಗಳಿಗೆ ಬೇಡಿಕೆ ಕುದುರಿದೆ.
Advertisement
Advertisement
ಉಕ್ರೇನಿನ ಟ್ಯಾಟೂ ಪಾರ್ಲರ್‌ಗಳಲ್ಲಿ ಜನರು ತಮ್ಮ ದೇಹದ ಮೇಲೆ ಉಕ್ರೇನ್ ಬಾವುಟ, ಸೇನೆಯ ಚಿಹ್ನೆ, ಯುದ್ಧವಿಮಾನ ಚಿತ್ರ ಮತ್ತಿತರ ಚಿಹ್ನೆಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ ಎಂದು ಟ್ಯಾಟೂ ಪಾರ್ಲರ್‌ಗಳ ಮಾಲೀಕರು ಹೇಳುತ್ತಾರೆ. ಇದನ್ನೂ ಓದಿ: ರಾಜಕೀಯ ಪಕ್ಷಗಳು ಜನರ ನಡುವೆ ಒಡಕು ಮೂಡಿಸುತ್ತಿವೆ: ಗುಲಾಂ ನಾಬಿ ಅಜಾದ್
Advertisement
Advertisement
ರಷ್ಯಾ, ಉಕ್ರೇನ್ ಮೇಲೆ ನಡೆಸಿರುವ ದಾಳಿ ಅನ್ಯಾಯದ ಪ್ರತೀಕ. ಇದನ್ನು ನಾವು ಸಹಿಸಲಾರೆವು. ರಷ್ಯಾ ಕೃತ್ಯವನ್ನು ಯಾವತ್ತೂ ಮರೆಯಬಾರದೆಂದೇ ಟ್ಯಾಟೂ ಹಾಕಿಸಿಕೊಳ್ಳುತ್ತಿರುವುದಾಗಿ ಜನರು ಹೇಳುತ್ತಿದ್ದಾರೆ. ರಷ್ಯಾ ಮಾಡಿರುವ ಯುದ್ದದ ಚಿತ್ರಣವನ್ನು ಮುಂದಿನ ಪೀಳಿಗೆಯವರಿಗೂ ದಾಟಿಸುತ್ತೇವೆ ಎಂದು ಟ್ಯಾಟು ಪ್ರಿಯರು ಹೇಳುತ್ತಿದ್ದಾರೆ.
ಫೆಬ್ರವರಿ 24 ರಂದು ರಷ್ಯಾ, ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿತು. ಯುದ್ಧದ ಪರಿಣಾಮವಾಗಿ, ಉಕ್ರೇನ್‍ನಾದ್ಯಂತ 1 ಕೋಟಿಗೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಇದರಲ್ಲಿ ಸುಮಾರು 30 ಲಕ್ಷ ಜನರು ಪೋಲೆಂಡ್, ಸ್ಲೋವಾಕಿಯಾ, ರೊಮೇನಿಯಾ ಮತ್ತು ಹಂಗೇರಿಯಂತಹ ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ. ಉಕ್ರೇನ್ ಯುದ್ಧದಲ್ಲಿ ಮಕ್ಕಳು ಸೇರಿದಂತೆ ನೂರಾರು ನಾಗರಿಕರು ಸಾವನ್ನಪ್ಪಿದ್ದಾರೆ. ಇದುವರೆಗೆ 14,000ಕ್ಕೂ ಹೆಚ್ಚು ರಷ್ಯಾದ ಸೈನಿಕರು ಹತರಾಗಿದ್ದಾರೆ ಎಂದು ಉಕ್ರೇನ್ ಹೇಳಿಕೊಂಡಿದೆ.