ಬಿಜೆಪಿ ಮಾಜಿ ಶಾಸಕನ ಸಹೋದರರನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

Public TV
1 Min Read
arrested new

ಪಾಟ್ನಾ: ಗ್ಯಾಂಗ್ ವಾರ್‌ನಲ್ಲಿ ಬಿಜೆಪಿಯ ಮಾಜಿ ಶಾಸಕ ಚಿತ್ತರಂಜನ್ ಶರ್ಮಾ ಅವರ ಇಬ್ಬರು ಸಹೋದರರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ನಗರದ ವಿಜಯ್ ನಗರದ ಜನನಿಬಿಡ ಮಾರುಕಟ್ಟೆಯಲ್ಲಿ ನಡೆದಿದೆ.

murder

ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿಗಳು ನಡುರಸ್ತೆಯಲ್ಲೇ ಇಬ್ಬರನ್ನು ಹೇಗೆ ಕೊಂದಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಗೌತಮ್ ಮತ್ತು ಶಂಭು ಗುಂಡಿನ ದಾಳಿಗೊಳಗಾದ ಚಿತ್ತರಂಜನ್ ಶರ್ಮಾ ಅವರ ಇಬ್ಬರು ಸಹೋದರರು. ಆರೋಪಿಗಳು ಮತ್ತು ಸಂತ್ರಸ್ತರು ಮೋಟಾರ್ ಸೈಕಲ್ ಚೇಸ್‍ನಲ್ಲಿ ತೊಡಗಿದ್ದರು. ನಂತರ ಅವರು ಗೌತಮ್ ಮೇಲೆ ಗುಂಡು ಹಾರಿಸಿದ್ದಾರೆ. ಒಮ್ಮೆ ಬೈಕ್‍ನಿಂದ ಬಿದ್ದ ಆರೋಪಿಗಳು ಹತ್ತಿರದಿಂದಲೇ ಗೌತಮ್ ತಲೆಗೆ ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಕಲಹಕ್ಕೆ ಬೇಸತ್ತು ಮಗಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ದುಷ್ಕರ್ಮಿಗಳು ಶಂಬು ಅವರ ಮೇಲೂ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದು, ಜನ ಗುಂಪು ಸೇರುತ್ತಿರುವುದನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಇತ್ತ ಮಾರುಕಟ್ಟೆಯಲ್ಲಿದ್ದ ಸಾರ್ವಜನಿಕರಲ್ಲಿ ಭಯ, ಗಾಬರಿ ಆವರಿಸಿತು. ಗಾಯಗೊಂಡ ಇಬ್ಬರ ಪೈಕಿ ಗೌತಮ್ ಸ್ಥಳದಲ್ಲೇ ಮೃತಪಟ್ಟರೆ, ಶಂಬು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ರಾಮಮಂದಿರ ಸುತ್ತಮುತ್ತಲಿನ ಮದ್ಯ ಮಾರಾಟಗಾರರ ಪರವಾನಗಿ ರದ್ದು: ಯುಪಿ ಸರ್ಕಾರ 

Police Jeep

ಘಟನಾ ಸ್ಥಳದಿಂದ ನಾವು ಅರ್ಧ ಡಜನ್ ಖಾಲಿ ಕಾಟ್ರ್ರಿಡ್ಜ್‍ಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಪಾಟ್ನಾದ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‍ಎಸ್‍ಪಿ) ಮಾನವಜಿತ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.

ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *