Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಹಿಳೆಯನ್ನ ಬಂಧನದಲ್ಲಿಟ್ಟುಕೊಂಡ ವೈದ್ಯರು- ಅಮ್ಮನ ಆಸ್ಪತ್ರೆ ಬಿಲ್ ಕಟ್ಟಲು ಭಿಕ್ಷೆ ಬೇಡ್ತಿದ್ದ 7ರ ಬಾಲಕನ ರಕ್ಷಣೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಮಹಿಳೆಯನ್ನ ಬಂಧನದಲ್ಲಿಟ್ಟುಕೊಂಡ ವೈದ್ಯರು- ಅಮ್ಮನ ಆಸ್ಪತ್ರೆ ಬಿಲ್ ಕಟ್ಟಲು ಭಿಕ್ಷೆ ಬೇಡ್ತಿದ್ದ 7ರ ಬಾಲಕನ ರಕ್ಷಣೆ

Latest

ಮಹಿಳೆಯನ್ನ ಬಂಧನದಲ್ಲಿಟ್ಟುಕೊಂಡ ವೈದ್ಯರು- ಅಮ್ಮನ ಆಸ್ಪತ್ರೆ ಬಿಲ್ ಕಟ್ಟಲು ಭಿಕ್ಷೆ ಬೇಡ್ತಿದ್ದ 7ರ ಬಾಲಕನ ರಕ್ಷಣೆ

Public TV
Last updated: November 28, 2017 3:57 pm
Public TV
Share
2 Min Read
file photo beggar
SHARE

ಪಾಟ್ನಾ: ಆಸ್ಪತ್ರೆಯ ಬಿಲ್ ಕಟ್ಟುವವರೆಗೂ ಡಿಸ್ಚಾರ್ಜ್ ಮಾಡುವುದಿಲ್ಲ ಎಂದು ಹೇಳಿ ಮಹಿಳೆಯೊಬ್ಬರನ್ನ ಆಸ್ಪತ್ರೆಯ ಸಿಬ್ಬಂದಿ ಬಂಧನದಲ್ಲಿರಿಸಿಕೊಂಡಿದ್ದ ಕಾರಣ ಆಕೆಯ 7 ವರ್ಷದ ಮಗ ರಸ್ತೆಯಲ್ಲಿ ಭಿಕ್ಷೆ ಬೇಡಿದ ಕರುಣಾಜನಕ ಘಟನೆ ಬಿಹಾರದಲ್ಲಿ ನಡೆದಿದೆ.

ಇಲ್ಲಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ 31 ವರ್ಷದ ಲಲಿತಾ ದೇವಿ ಅವರಿಗೆ ಹೆರಿಗೆಯಾಗಿದ್ದು, ಮಗು ಸಾವನ್ನಪ್ಪಿತ್ತು. ಆಸ್ಪತ್ರೆಯವರು 70 ಸಾವಿರ ರೂ. ಬಿಲ್ ಆಗಿದೆ ಎಂದು ಹೇಳಿದ್ದರು. ಹೀಗಾಗಿ ಮಹಿಳೆಯ 7 ವರ್ಷದ ಮಗ ಬಿಲ್ ಕಟ್ಟಲು ರಸ್ತೆಯಲ್ಲಿ ಭಿಕ್ಷೆ ಬೇಡಿದ್ದಾನೆ. ಕೊನೆಗೆ ಮಾದೇಪುರ ಸಂಸದ ಪಪ್ಪು ಯಾದವ್ ಮಧ್ಯಪ್ರದೇಶಿಸಿ ತನ್ನ ಕ್ಷೇತ್ರದವರಾದ ಲಲಿತಾ ದೇವಿ ಅವರನ್ನು ಭಾನುವಾರದಂದು ರಕ್ಷಣೆ ಮಾಡಿದ್ದಾರೆ. ಆಸ್ಪತ್ರೆ ಆಡಳಿತದ ವಿರುದ್ಧ ಈಗ ಎಫ್‍ಐಆರ್ ದಾಖಲಾಗಿದೆ.

begging

ಪಾಟ್ನಾ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ನವೆಂಬರ್ 14ರಂದು ಲಲಿತಾ ಅವರಿಗೆ ವೈದ್ಯಕೀಯ ಸಮಸ್ಯೆ ಉಂಟಾಗಿದ್ದರಿಂದ ಏಜೆಂಟ್‍ವೊಬ್ಬರ ಮೂಲಕ ಮಾ ಶೀತ್ಲಾ ಎಮರ್ಜೆನ್ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುಟುಂಬದವರಿಗೆ 1.5 ಲಕ್ಷ ರೂ. ಹಣ ಹೊಂದಿಸಿಕೊಳ್ಳುವಂತೆ ಹೇಳಲಾಗಿತ್ತು. ಆದ್ರೆ ಬಳಿಕ ವೈದ್ಯಕೀಯ ಮೊತ್ತವನ್ನು 70 ಸಾವಿರ ರೂ.ಗೆ ಇಳಿಸಲಾಗಿತ್ತು. ಆದ್ರೆ ಲಲಿತಾ ದೇವಿ ಅವರ ಪತಿ ನಿರ್ಧನ್ ರಾಮ್ ಅವರಿಗೆ 25 ಸಾವಿರ ಮಾತ್ರ ಕಟ್ಟಬೇಕಷ್ಟೇ ಎಂದು ಏಜೆಂಟ್ ಹೇಳಿದ್ದರು. ಆ ಹಣವನ್ನು ನಿರ್ಧನ್ ರಾಮ್ ಡೆಪಾಸಿಟ್ ಮಾಡಿದ್ದರು.

ಆದರೆ ಮಗು ಸಾವನ್ನಪ್ಪಿದ್ದರಿಂದ ವೈದ್ಯರು ಸ್ಟಿಚ್‍ಗಳನ್ನ ಬಿಚ್ಚದೇ ಬಾಕಿ ಹಣ ಕಟ್ಟುವವರೆಗೆ ದೇವಿ ಅವರನ್ನ ಡಿಸ್ಚಾರ್ಜ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಲಲಿತಾ ಅವರ ಪತಿ ಸಂಬಂಧಿಕರ ಬಳಿ ಕೇಳಿ ಸ್ವಲ್ಪ ಹಣವನ್ನ ಹೊಂದಿಸಿದ್ದರು. ಉಳಿದ ಹಣಕ್ಕಾಗಿ ಲಲಿತಾ ಅವರ ಮಗ ಭಿಕ್ಷೆ ಬೇಡಲು ಮುಂದಾಗಿದ್ದ.

child begging 1

 

ಮಾದೇಪುರದ ಕೆಲವು ನಿವಾಸಿಗಳು ಹಾಗೂ ಕೆಲವು ಸ್ಥಳೀಯ ವಾಹಿನಿಗಳ ಮೂಲಕ ಈ ವಿಷಯ ಪಪ್ಪು ಯಾದವ್ ಅವರ ಗಮನಕ್ಕೆ ಬಂದಿತ್ತು. ನಂತರ ಯಾದವ್ ಮಹಿಳೆಯನ್ನ ರಕ್ಷಣೆ ಮಾಡಿದ್ದಾರೆ. ಅಲ್ಲದೆ ಲಲಿತಾ ದೇವಿ ಅವರಿಗೆ ಆಸ್ಪತ್ರೆಯವರೇ 10 ಸಾವಿರ ರೂ. ಹಣ ಹಿಂದಿರುಗಿಸುವಂತೆ ಮಾಡಿದ್ದು, ಆಂಬುಲೆನ್ಸ್ ಮೂಲಕ ಮನೆಗೆ ಡ್ರಾಪ್ ಮಾಡಿಸಿದ್ದಾರೆ.

ಆಸ್ಪತ್ರೆಯ ಮಾಲೀಕರಾದ ನಿಶಾ ಭಾರ್ತಿ ಕೇವಲ ಪದವಿ ಪೂರೈಸಿದ್ದು ತಾನೊಬ್ಬ ವೈದ್ಯೆ ಎಂದು ಹೇಳಿಕೊಂಡಿದ್ದಾರೆ. ಆಸ್ಪತ್ರೆಯನ್ನ ರೆಜಿಸ್ಟರ್ ಕೂಡ ಮಾಡಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ರಾಜ್ಯ ಆಗೋಗ್ಯ ಇಲಾಖೆ ಈ ಬಗ್ಗೆ ತನಿಖೆಗೆ ಆದೇಶಿಸಿದೆ.

 

TAGGED:beggingbillhospitalPublic TVsonwomanಆಸ್ಪತ್ರೆತಾಯಿಪಬ್ಲಿಕ್ ಟಿವಿಬಿಲ್ಭಿಕ್ಷೆಮಂಗಹಣ
Share This Article
Facebook Whatsapp Whatsapp Telegram

Cinema news

kannada actor daali dhananjaya and his wife dr dhanyatha have been blessed with a baby boy
ಡಾಲಿ ಈಗ ಡ್ಯಾಡಿ – ಗಂಡು ಮಗುವಿಗೆ ಜನ್ಮ ನೀಡಿದ ಧನ್ಯತಾ
Cinema Karnataka Latest Sandalwood Top Stories
Karen Kshiti Suvarna September 21 set for Cannes market premiere
ಕೇನ್ಸ್‌ನಲ್ಲಿ ಕನ್ನಡ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣಗೆ ಗೌರವ
Cinema Latest Sandalwood
Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood

You Might Also Like

husband commits suicide after being harassed by wife in uttara kannada dandeli
Crime

ಅನೈತಿಕ ಸಂಬಂಧದ ಬಗ್ಗೆ ಪತ್ನಿಯ ಓಪನ್ ಟಾಕ್ – ಬೇಸತ್ತು ನೇಣಿಗೆ ಕೊರಳೊಡ್ಡಿದ ಪತಿ

Public TV
By Public TV
2 minutes ago
Eshwar Khandre
Bengaluru City

ಬಿಜೆಪಿಯ ಬಡಜನ ವಿರೋಧಿ ಬಣ್ಣ ಮತ್ತೆ ಬಯಲು: ಈಶ್ವರ್ ಖಂಡ್ರೆ

Public TV
By Public TV
3 minutes ago
Nelamangala Hit And Run Death
Bengaluru City

ಹಿಟ್ ಅಂಡ್ ರನ್‌ಗೆ ಬೈಕ್ ಸವಾರ ಸಾವು – ಸಿಸಿಟಿವಿಯಲ್ಲಿ ದೃಶ್ಯ ಸೆರೆ

Public TV
By Public TV
17 minutes ago
Mandya KRS Youth Missing
Districts

ಕೆಆರ್‌ಎಸ್‌ನಲ್ಲಿ ಮೀನು ಹಿಡಿಯಲು ಹೋಗಿದ್ದಾಗ ಮಗುಚಿದ ದೋಣಿ – ಯುವಕ ನಾಪತ್ತೆ

Public TV
By Public TV
32 minutes ago
Jog Falls
Districts

ಜೋಗ್‌ ಫಾಲ್ಸ್‌ನಲ್ಲಿ ಕುಸಿದು ಬಿದ್ದ ಬಂಡೆ – ಬೆಚ್ಚಿಬಿದ್ದ ಪ್ರವಾಸಿಗರು

Public TV
By Public TV
40 minutes ago
Supreme Court 1
Court

ಮತ ಎಣಿಕೆಗೆ ಕೇಂದ್ರ ನೌಕರರ ನಿಯೋಜನೆ ಕಾನೂನು ಬದ್ಧ – ಸುಪ್ರೀಂನಲ್ಲಿ ಟಿಎಂಸಿಗೆ ಹಿನ್ನಡೆ

Public TV
By Public TV
49 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?