ಭೋಪಾಲ್: ಹೋಮಿಯೋಪತಿ ವೈದ್ಯನೊಬ್ಬ ನೀಡಿದ್ದ ತಪ್ಪಾದ ಚುಚ್ಚು ಮದ್ದಿನಿಂದ ರೋಗಿಯೊಬ್ಬ ಸಾವನ್ನಪ್ಪಿದ್ದು, ಇದೀಗ ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ.
ಸಿಂಧಿ ಕಾಲೋನಿಯಲ್ಲಿ ಕ್ಲಿನಿಕ್ ನಡೆಸುತ್ತಿರುವ ದೀಪಕ್ ವಿಶ್ವಕರ್ಮ ಅವರನ್ನು ಐಪಿಸಿ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿ ಶುಕ್ರವಾರ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ (ಸಿಎಸ್‍ಪಿ) ಲಲಿತ್ ಗಾತ್ರೆ ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಯಾರನ್ನೂ ಬಿಟ್ಟಿಲ್ಲ, ದೇವೇಗೌಡರಿಗೆ ಕೊರೊನಾ ತೀವ್ರತೆ ಇಲ್ಲ: ಬೊಮ್ಮಾಯಿ
ನಾಲ್ಕು ತಿಂಗಳ ಹಿಂದೆ ಚುಚ್ಚುಮದ್ದು ಸ್ವೀಕರಿಸಿದ್ದ ವ್ಯಾಪಾರಿ ಎರಡು ದಿನಗಳ ನಂತರ ಸಾವನ್ನಪ್ಪಿದ ಕಾರಣ ವೈದ್ಯನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು ನಂತರ ವೈದ್ಯನ ಕ್ಲಿನಿಕ್ ಸಹ ಸೀಲ್‍ಡೌನ್ ಮಾಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಮೊದ್ಲು ಜನ್ರಿಗೆ ಆದಾಯ ಬರುವಂತೆ ಮಾಡಿ, ಆಮೇಲೆ ದರ ಏರಿಕೆ ಮಾಡಿ : ಡಿಕೆಶಿ
ಘಟನೆ ಕುರಿತಂತೆ ತನಿಖೆ ವೇಳೆ ವೈದ್ಯ ವಿಶ್ವಕರ್ಮ ಅವರು ತಮ್ಮ ರೋಗಿ ದೀಪಕ್ ಆರತಾನಿಗೆ ಅಲೋಪತಿ ಔಷಧಿಗಳನ್ನು ನೀಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದು, ಸೋಂಕಿಗೆ ಒಳಗಾಗಿದ್ದ ವ್ಯಕ್ತಿಗೆ ವೈದ್ಯರು ತಪ್ಪಾದ ಚುಚ್ಚುಮದ್ದು ನೀಡಿದ್ದರಿಂದ ರೋಗಿ ಸಾವನ್ನಪ್ಪಿರುವುದಾಗಿ ಮೊಘಾಟ್ ರೋಡ್ ಪೊಲೀಸ್ ಠಾಣೆಯ ಈಶ್ವರ್ ಸಿಂಗ್ ಚೌಹಾಣ್ ಹೇಳಿದ್ದಾರೆ.