‘ಕಿಸ್ಸಿಕ್’ ಬೆಡಗಿ ಶ್ರೀಲೀಲಾ (Sreeleela) ಲಕ್ ಕೈಕೊಟ್ಟಿದೆ. ಈಗಾಗಲೇ ಒಪ್ಪಿಕೊಂಡಿದ್ದ ಬಾಲಿವುಡ್ ಚಿತ್ರದಿಂದ ಅವರನ್ನು ಕೈಬಿಡಲಾಗಿದೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಶ್ರೀಲೀಲಾ ಕೈಬಿಟ್ಟ ಚಿತ್ರದಲ್ಲಿ ಸ್ಟಾರ್ ನಟಿಯ ಪುತ್ರಿಯನ್ನು ಆಯ್ಕೆ ಮಾಡಲಾಗಿದೆ ಎನ್ನಲಾದ ವಿಚಾರ ಈಗ ಹಾಟ್ ಟಾಪಿಕ್ ಆಗಿದೆ. ಇದನ್ನೂ ಓದಿ:ಮತ್ತೆ ಪ್ರಭಾಸ್ಗೆ ಜೊತೆಯಾದ ಬಾಲಿವುಡ್ ಬ್ಯೂಟಿ ದಿಶಾ ಪಟಾನಿ
ತೆಲುಗಿನಲ್ಲಿ ಶ್ರೀಲೀಲಾ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದ್ದಂತೆ ಬಾಲಿವುಡ್ನಿಂದ ಬಂಪರ್ ಆಫರ್ಗಳು ಅರಸಿ ಬಂದಿತ್ತು. ಕಾರ್ತಿಕ್ ಆರ್ಯನ್ ನಟನೆಯ ‘ಆಶಿಕಿ 3’ ಮತ್ತು ‘ಪತಿ ಪತ್ನಿ ಔರ್ ಓ 2’ ಸಿನಿಮಾಗೆ ಹೀರೋಯಿನ್ ಆಗಿ ಸೆಲೆಕ್ಟ್ ಮಾಡಲಾಗಿತ್ತು. ಅದರಲ್ಲಿ ‘ಪತಿ ಪತ್ನಿ ಔರ್ ಓ 2’ ಚಿತ್ರದಿಂದ ಶ್ರೀಲೀಲಾರನ್ನು ಕೈಬಿಡಲಾಗಿದೆಯಂತೆ. ಇದನ್ನೂ ಓದಿ:ಮಾಜಿ ಪತ್ನಿಯರೊಡನೆ ಈದ್ ಹಬ್ಬ ಆಚರಿಸಿದ ಆಮೀರ್ ಖಾನ್
ಪ್ರಸ್ತುತ ಕಾರ್ತಿಕ್ ನಟನೆಯ ‘ಆಶಿಕಿ 3’ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಾಗಾಗಿ ಹೊಸ ಸಿನಿಮಾದಲ್ಲೂ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಜೋಡಿಯಾಗಿ ನಟಿಸೋದು ಬೇಡ ಎಂದು ತಂಡ ನಿರ್ಧರಿಸಿದೆಯಂತೆ. ಈ ಜೋಡಿಯನ್ನೇ ರಿಪೀಟ್ ಮಾಡೋದಕ್ಕಿಂತ ಹೊಸ ನಟಿಯನ್ನೇ ಆಯ್ಕೆ ಮಾಡೋಣ ಎಂದು ರವೀನಾ ಪುತ್ರಿ ರಾಶಾರನ್ನು (Rasha Thadani) ಚಿತ್ರತಂಡ ಆಯ್ಕೆ ಮಾಡಿದೆ ಎನ್ನಲಾಗಿದೆ. ಕಿಸ್ಸಿಕ್ ಬೆಡಗಿ ಬದಲು ಕಾರ್ತಿಕ್ಗೆ ರಾಶಾ ನಾಯಕಿಯಾಗಲಿದ್ದಾರೆ ಎಂಬುದು ಬಾಲಿವುಡ್ನಲ್ಲಿ ಹರಿದಾಡುತ್ತಿದೆ.
ಉಸ್ತಾದ್ ಭಗತ್ ಸಿಂಗ್, ಜ್ಯೂನಿಯರ್, ಮಾಸ್ ಜಾತ್ರಾ, ಆಶಿಕಿ 3 ಸೇರಿದಂತೆ ಹಲವು ಸಿನಿಮಾಗಳು ನಟಿಯ ಕೈಯಲ್ಲಿವೆ.