‘ಪಠಾಣ್’ ಸಕ್ಸಸ್ ನಂತರ ಸಿಹಿಸುದ್ದಿ ನೀಡಿದ ದೀಪಿಕಾ ಪಡುಕೋಣೆ

Public TV
1 Min Read
deepika

ಬೆಂಗಳೂರಿನ ಬೆಡಗಿ ದೀಪಿಕಾ ಪಡುಕೋಣೆ(Deepika Padukone) ಬಾಲಿವುಡ್‌ನ ಸ್ಟಾರ್ ನಟಿಯಾಗಿ ಮೋಡಿ ಮಾಡ್ತಿದ್ದಾರೆ. ‘ಪಠಾಣ್’ (Pathaan) ಸಿನಿಮಾದ ಸೂಪರ್ ಸಕ್ಸಸ್ ನಂತರ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

DEEPIKA PADUKONE 2 1

‘ಪಠಾಣ್’ ಚಿತ್ರದ ಸಕ್ಸಸ್ ನಂತರ ದೀಪಿಕಾ ಲಕ್ಕೂ ಲುಕ್ಕೂ ಎರಡು ಬದಲಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ನಟಿ ದೀಪಿಕಾ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ.  ಕನ್ನಡದ ‘ಐಶ್ವರ್ಯ’ (Aishwarya) ಚಿತ್ರದ ಮೂಲಕ ನಟನೆಗೆ ವಾಲಿದ ನಟಿ ಇದೀಗ ಬಾಲಿವುಡ್‌ನ ಬಹುಬೇಡಿಕೆಯ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

ಸಾಲು ಸಾಲು ಸಿನಿಮಾ ಅವಕಾಶಗಳನ್ನ ಬಾಚಿಕೊಳ್ತಿರುವ ದೀಪಿಕಾ, ಪ್ರತಿಷ್ಠಿತ ಟೈಮ್ ಮ್ಯಾಗಜೀನ್ ಕವರ್ ಪೇಜ್ ಅಲಂಕರಿಸಿದ್ದಾರೆ. ಈ ಮೂಲಕ ಇಡೀ ಜಗತ್ತನ್ನೇ ತಲುಪುವ ಅವಕಾಶವನ್ನು ದೀಪಿಕಾ ಪಡುಕೋಣೆ ಪಡೆದುಕೊಂಡಿದ್ದಾರೆ. ಲೈಟ್ ಬಣ್ಣದ ಸೂಟ್‌ನಲ್ಲಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ, ವೀಡಿಯೋ ಎಲ್ಲೆಡೆ ಸದ್ದು ಮಾಡ್ತಿದೆ. ಇದನ್ನೂ ಓದಿ:ಕಾಲು ಒರೆಸುವ ಬಟ್ಟೆಯಂತೆ ಬಳಸಿಕೊಂಡಿದ್ದರು- ಮಾಜಿ ಬಾಯ್‌ಫ್ರೆಂಡ್‌ಗಳ ಬಗ್ಗೆ ಪ್ರಿಯಾಂಕಾ ಮಾತು

ಪಠಾಣ್ ಸಿನಿಮಾದ ಸಕ್ಸಸ್ ನಂತರ ದೀಪಿಕಾ, ಹೃತಿಕ್ ರೋಷನ್ (Hrithik Roshan) ಜೊತೆ ‘ಫೈಟರ್’ ಚಿತ್ರ, ಪ್ರಶಾಂತ್ ನೀಲ್ ನಿರ್ದೇಶನದ ಎನ್‌ಟಿಆರ್ 31ಗೆ ನಾಯಕಿಯಾಗಿ ಅವಕಾಶ ಬಾಚಿಕೊಂಡಿದ್ದಾರೆ.

Share This Article