ವಿಮಾನದೊಳಗೆ ಮಾಸ್ಕ್ ಧರಿಸಲು ನಿರಾಕರಿಸುವ ಪ್ರಯಾಣಿಕರನ್ನು ಹೊರಹಾಕಿ – DGCA

Public TV
1 Min Read
Flight
ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಎಚ್ಚರಿಕೆ ನೀಡಿದ ನಂತರವೂ ವಿಮಾನದೊಳಗೆ ಮಾಸ್ಕ್ ಧರಿಸಲು ನಿರಾಕರಿಸಿದ್ರೆ ಅಂತಹ ಪ್ರಯಾಣಿಕರನ್ನು ವಿಮಾನಯಾನ ಸಂಸ್ಥೆಯು ಹೊರಹಾಕಬೇಕು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ತಿಳಿಸಿದೆ.

flight 3

ಪ್ರಯಾಣಿಕರು ಮಾಸ್ಕ್ ಧರಿಸುವುದನ್ನು ವಿಮಾನಯಾನ ಸಂಸ್ಥೆಗಳು ಖಚಿತಪಡಿಸಿಕೊಳ್ಳಬೇಕು. ಜೊತೆಗೆ ವಿಶೇಷ ಸಂದರ್ಭದಲ್ಲಿ ಅನುಮತಿಯೊಂದಿಗೆ ಮಾತ್ರ ವಿನಾಯಿತಿ ನೀಡುವಂತೆ ಹೇಳಿದೆ. ಇದನ್ನೂ ಓದಿ: ಮಾಸ್ಕ್‌ ಧರಿಸಲ್ಲ ಎಂದ ಪ್ರಯಾಣಿಕ – ಅರ್ಧದಲ್ಲಿಯೇ ವಿಮಾನ ವಾಪಸ್‌

ಮಾಸ್ಕ್ ಧರಿಸದವರಿಗೆ ದಂಡ ವಿಧಿಸಬೇಕು. ಮಾಸ್ಕ್ ನಿರಾಕರಿಸಿದರೆ ಅಥವಾ ಪ್ರಯಾಣದ ಮಧ್ಯದಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದರೆ, ಅಂತಹವರನ್ನು ಅಶಿಸ್ತಿನ ಪ್ರಯಾಣಿಕ ಎಂದು ಪರಿಗಣಿಸುವಂತೆ ತಾಕೀತು ಮಾಡಿದೆ.

airplane 2

ಸಿಐಎಸ್‌ಎಫ್ ಮತ್ತು ಇತರೆ ಪೊಲೀಸ್ ಸಿಬ್ಬಂದಿ ಮಾಸ್ಕ್ ಧರಿಸದವರಿಗೆ ಒಳಗೆ ಪ್ರವೇಶಿಸಲು ಅನುಮತಿ ನೀಡಬಾರದು. ಟರ್ಮಿನಲ್‌ನ ಪ್ರಮುಖ ಸ್ಥಳಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಒದಗಿಸಬೇಕು ಎಂದೂ ಸೂಚನೆ ನೀಡಿದೆ. ಇದನ್ನೂ ಓದಿ: ವಿಮಾನ ತುರ್ತು ಭೂಸ್ಪರ್ಶ – ನನ್ನ ಶಿಫ್ಟ್‌ ಮುಗಿಯಿತು ಮತ್ತೆ ಫ್ಲೈ ಮಾಡಲ್ಲ ಎಂದ ಪಾಕ್‌ ಪೈಲಟ್‌!

FotoJet 8 18

ಇದೇ 3ರಂದು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶದ ಮೇರೆಗೆ ಡಿಜಿಸಿಎ ಸುತ್ತೋಲೆ ಹೊರಡಿಸಿದೆ. ಮಾಸ್ಕ್ ಧರಿಸದವರು, ಸ್ವಚ್ಛತೆ ಕಾಪಾಡದವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗಳ್ಳಲು ಗಗನಸಖಿಯರು, ಕ್ಯಾಪ್ಟನ್‌ಗಳು, ಪೈಲಟ್‌ಗಳು, ವಿಮಾನ ನಿಲ್ದಾಣ ಹಾಗೂ ವಿಮಾನದಲ್ಲಿ ನಿಯೋಜಿಸಿರುವ ಸಿಬ್ಬಂದಿಗೆ ಡಿಜಿಸಿಎ ಪ್ರತ್ಯೇಕ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್ ಹೇಳಿತ್ತು.

Share This Article
Leave a Comment

Leave a Reply

Your email address will not be published. Required fields are marked *